ಇತ್ತೀಚಿನ ಸುದ್ದಿದೇಶ

ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಭಾರೀ ಕಡಿತ ಸಾಧ್ಯತೆ ?

ನವದೆಹಲಿ, ಡಿಸೆಂಬರ್ 29: ಜನವರಿ ಅಥವಾ ಫೆಬ್ರುವರಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಭಾರೀ ಕಡಿತ ಆಗುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್18 ವಾಹಿನಿ ವರದಿ ಮಾಡಿದೆ. ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳಿಂದ ಮಾಹಿತಿ ಸಿಕ್ಕಿರುವುದಾಗಿ ಈ ವರದಿಯಲ್ಲಿ ಹೇಳಲಾಗಿದ್ದು, ಅದರ ಪ್ರಕಾರ ಪೆಟ್ರೋಲ್, ಡೀಸಲ್ ಬೆಲೆ ಲೀಟರ್​ಗೆ 10 ರೂವರೆಗೂ ಇಳಿಕೆ ಮಾಡಬಹುದು. ಕೆಲ ದಿನಗಳ ಹಿಂದೆಯೂ ಟಿವಿ9ನಲ್ಲೂ ಈ ಬಗ್ಗೆ ವರದಿ ಬಂದಿದ್ದು, ಪೆಟ್ರೋಲ್ ಬೆಲೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಬಹಳ ಕಾಲ ಬೆಲೆ ಇಳಿಕೆ ಇದ್ದದ್ದು ಒಂದು ಕಾರಣವಾದರೆ, ಭಾರತದ ತೈಲ ಮಾರುಕಟ್ಟೆ ಕಂಪನಿಗಳು ನಷ್ಟದ ಹಾದಿಯಿಂದ ಈಗ ಲಾಭದ ಹಳಿಗೆ ಬಂದಿರುವುದೂ ಇನ್ನೊಂದು ಕಾರಣವಾಗಿದೆ. ಹೀಗಾಗಿ, ಸರ್ಕಾರ ಸಾರ್ವಜನಿಕರಿಗೆ ಪೆಟ್ರೋಲ್ ಬೆಲೆ ಇಳಿಕೆ ಮಾಡಲು ಮುಂದಾಗಿರಬಹುದು.

494128660

ಬೇರೆ ದೇಶಗಳಲ್ಲಿ ಏರಿದ್ದ ಪೆಟ್ರೋಲ್ ಬೆಲೆ

ಕುತೂಹಲ ಎಂದರೆ 2021ರ ಅಕ್ಟೋಬರ್ ತಿಂಗಳಿಂದ 2023ರ ಅಕ್ಟೋಬರ್ ತಿಂಗಳವರೆಗೆ ಎರಡು ವರ್ಷದ ಅವಧಿಯಲ್ಲಿ ಹೆಚ್ಚಿನ ದೇಶಗಳಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳವಾದರೆ, ಭಾರತದಲ್ಲಿ ಒಂದು ಪ್ರತಿಶತದಷ್ಟು ಬೆಲೆ ಇಳಿಕೆ ಆಗಿದೆ. ಭಾರತದ ಎಲ್ಲಾ ನೆರೆಯ ದೇಶಗಳಲ್ಲೂ ಶೇ. 50ಕ್ಕಿಂತ ಹೆಚ್ಚು ಪೆಟ್ರೋಲ್ ದುಬಾರಿಯಾಗಿದೆ. ಅಮೆರಿಕ, ಬ್ರಿಟನ್, ಕೆನಡಾ, ಜರ್ಮನಿ ಇತ್ಯಾದಿ ಹಲವು ದೇಶಗಳಲ್ಲೂ ಪೆಟ್ರೋಲ್ ಬೆಲೆ ಏರಿದೆ.

Related Articles

Leave a Reply

Your email address will not be published. Required fields are marked *

Back to top button