ನೀವು ಗಮನಿಸಿ ನೋಡಿ ಸಧ್ಯ ಮದುವೆ ಸೀಸನ್ (Marriage Season)ಆರಂಭವಾಗಿದೆ. ಭಾರತದಲ್ಲಿ(India) ಮೊದಲೆಲ್ಲ ಜೀವನ ಸಂಗಾತಿಯನ್ನು ಹಿರಿಯರು ಆಯ್ಕೆ ಮಾಡಿದ ಹುಡುಗನನ್ನ ಹೆಣ್ಣು ಮಕ್ಕಳು ಇಷ್ಡವಿರಲಿ, ಇಲ್ಲದೆ ಇರಲಿ ಮದುವೆಯಾಗುತ್ತಿದ್ದರು. ಆದರೆ ಕಾಲ ಬದಲಾಗಿದೆ. ಅರೇಂಜ್ಡ್ ಮ್ಯಾರೇಜ್ (Arranged Marriage)ಎಂಬ ಪರಿಕಲ್ಪನೆ ನಮ್ಮ ದೇಶದಲ್ಲಿ ಈಗಲೂ ಇದೆ. ಆದರೆ ಹೆಚ್ಚಿನ ಜನರು, ತಮ್ಮ ಜೀವನ ಸಂಗಾತಿಯನ್ನು ತಾವಾಗಿಯೇ ಆಯ್ಕೆ ಮಾಡುತ್ತಾರೆ. ಈಗಿನ ಹೆಣ್ಣು ಮಕ್ಕಳಿಗೆ ಸಂಗಾತಿಯ ಬಗ್ಗೆ ಹಲವಾರು ಕನಸುಗಳಿರುತ್ತವೆ.
ಅವರನ್ನು ಅರ್ಥ ಮಾಡಿಕೊಳ್ಳಬೇಕು, ಪ್ರತಿ ಕ್ಷಣದಲ್ಲೂ ಜೊತೆಯಾಗಿರಬೇಕು ಹೀಗೆ ಹಲವಾರು. ಇನ್ನು ನಮ್ಮ ರಾಶಿ ಚಕ್ರಗಳು ಸಹ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲವರು ಲವ್ ಮಾರೇಜ್(Love Marriage) ಆಗುವುದು ಅವರ ರಾಶಿಯ ಮೇಲೆ ನಿರ್ಧಾರವಾಗುತ್ತದೆ.
ಹಾಗೆಯೆ ಯಾವ ರಾಶಿಯ ಹೆಣ್ಣು ಮಕ್ಕಳು ಲವ್ ಮ್ಯಾರೇಜ್ ಆಗುತ್ತಾರೆ ಎಂಬುದು ಇಲ್ಲಿದೆ.
ಮೇಷ ರಾಶಿ: ಮೇಷ ರಾಶಿಯವರು ತುಂಬಾ ಭಾವನಾತ್ಮಕ ಮತ್ತು ಅವರು ಇಷ್ಟಪಡುವ ಜನರ ಬಗ್ಗೆ ಹೆಚ್ಚು ನಂಬಿಕೆ ಇಡುತ್ತಾರೆ ಮತ್ತು ಅವರನ್ನು ಹೆಚ್ಚು ಪ್ರೀತಿ ಮಾಡುತ್ತಾರೆ. ಅಲ್ಲದೇ ಅವರ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಿರುತ್ತಾರೆ. ಇವರ ಅನೇಕ ಒಳ್ಳೆಯ ಸ್ನೇಹಿತರು ಸಂಗಾತಿಯಾಗಿ ಬದಲಾಗುವ ಸಾಧ್ಯತೆ ಇದೆ. ಮೇಷ ರಾಶಿಯವರ ವಿಷಯದಲ್ಲಿ, ಇವರು ಹೆಚ್ಚು ಸೂಕ್ತವಾಗುವ ಮತ್ತು ಅವರನ್ನು ಅರ್ಥ ಮಾಡಿಕೊಳ್ಳುವ ಸಂಗಾತಿಯನ್ನು ಮದುವೆಯಾಗುವುದು ಒಳ್ಳೆಯದು. ಈ ರಾಶಿಯ ಹೆಣ್ಣು ಮಕ್ಕಳು ಹೆಚ್ಚಾಗಿ ಲವ್ ಮ್ಯಾರೇಜ್ ಆಗುತ್ತಾರೆ. ಅಲ್ಲದೇ ಆ ಮದುವೆ ಯಶಸ್ವಿಯಾಗುತ್ತದೆ.