shikshana
ಪಿಯು ಬೋರ್ಡ್ ಎಡವಟ್ಟು: 40 ಅಂಕ ಪಡೆದ್ರೂ ನೀಡಿದ್ದು ಮಾತ್ರ 4 ಅಂಕ.!
ಬೆಂಗಳೂರು: ಈ ವರ್ಷ ಪಿಯು ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆ ಮಾಡದೇ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಪಿಯು ಬೋರ್ಡ್ ನಿರ್ಧಾರ ಮಾಡಿತ್ತು, ಆದರೆ ಯಾರಿಗೆ ತಮ್ಮ ಅಂಕದ ಬಗ್ಗೆ ಅಸಮಾಧಾನದವಿತ್ತೋ ಅಂತಹವರು ಪಿಯು ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆ ಯನ್ನು ತೆಗೆದುಕೊಳ್ಳಬಹುದಾಗಿತ್ತು .
ಅದರಂತೆ ಗಂಗಾವತಿಯ ವೆಂಕಟೇಶ್ವರ ಪಿಯು ಕಾಲೇಜಿನ ಭೂಮಿಕಾ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಈ ನಡುವೆ ವಿದ್ಯಾರ್ಥಿನಿ ಭೂಮಿಕಾ 40 ಅಂಕ ಪಡೆದಿದ್ದರೂ 4 ಅಂಕ ಕೊಟ್ಟು ಅನುತ್ತೀರ್ಣ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ರಸಾಯನ ಶಾಸ್ತ್ರದಲ್ಲಿ ಭೂಮಿಕಾ 40 ಅಂಕಗಳನ್ನು ಪಡೆದುಕೊಂಡಿದ್ದರು ಕೂಡ ಕೇವಲ 4 ಅಂಕ ನೀಡಿ ವಿದ್ಯಾರ್ಥಿನಿಯನ್ನು ಫೇಲ್ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಫಲಿತಾಂಶ ನೋಡಿ ಭೂಮಿಕ ತುಂಬಾ ಹತಾಶೆಗೊಂಡಿದ್ದಳು ಈ ಕೂಡಲೇ ಪಿಯು ಬೋರ್ಡ್ ಮಾಡಿರುವ ಯಡವಟ್ಟನ್ನು ಸರಿ ಪಡಿಸಬೇಕು ಅಂತ ಭೂಮಿಕ ತಂದೆ ಆಗ್ರಹಿಸಿದ್ದಾರೆ.