shikshanaಇತ್ತೀಚಿನ ಸುದ್ದಿರಾಜ್ಯಸುದ್ದಿ

ಪರೀಕ್ಷಾ ಕೆಂದ್ರದ ಸುತ್ತ 144 ಸೆಕ್ಷನ್ ಜಾರಿ! ಹೆತ್ತವರು ಮಕ್ಕಳ ಭವಿಷ್ಯದ ಬಗ್ಗೆ ಗಮನ ಹರಿಸಬೇಕು : ಧಾರ್ಮಿಕ ಮುಖಂಡ ರೆಹಮಾನ್ ರಜ್ವೀ..

ಮೈಸೂರು: ಮೈಸೂರಿನಲ್ಲೂ ಸೂಕ್ತ ಭದ್ರತೆ ನಡುವೆ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೆಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.ಮೈಸೂರಿನ ಒಟ್ಟು 149 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, 38,138 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ 40 ಸಾವಿರ ಮಾಸ್ಕ್ ಗಳ ವಿತರಣೆ ಮಾಡಲಾಗಿದ್ದು,  ಕೋವಿಡ್ ಲಕ್ಷಣ ಇದ್ದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ಏರ್ಪಾಡು ಮಾಡಲಾಗಿದೆ.  ಹಾಲ್ ಟಿಕೆಟ್ ತೋರಿಸಿದ್ರೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ 14022 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವವರಾಗಿದ್ದಾರೆ. 7229 ಬಾಲಕರು, 6793 ಬಾಲಕಿಯರು . ಜಿಲ್ಲೆಯಲ್ಲಿ ಒಟ್ಟು 56 ಪರೀಕ್ಷಾ ಕೇಂದ್ರಗಳಿವೆ.  ಸಾವಿರದ ಇನ್ನೂರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್​ ಗೆ ಅವಕಾಶವಿಲ್ಲ. ಗೊಂದಲಕ್ಕೆ ಅವಕಾಶವಿಲ್ಲದಂತೆ ಪರೀಕ್ಷೆ ನಡೆಸಲು ಇಲಾಖೆ ತಯಾರಿ ನಡೆಸುತ್ತಿದೆ. ಧರ್ಮಗುರುಗಳು ಶಿಕ್ಷಣ ಮುಖ್ಯ ಎಂದು ಬುದ್ಧಿಮಾತು ಹೇಳಿದ್ದಾರೆ.

ಈ ಹಿನ್ನೆಲೆ ಧಾರ್ಮಿಕ ಮುಖಂಡ ರೆಹಮಾನ್ ರಜ್ವೀ ಅವರು ಮಾತನಾಡಿ ಮಾನ್ಯ ಪ್ರೀತಿಯ ಸಮಾಜ ಬಾಂಧವರೇ, ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿ. ಈ ವರ್ಷ ಶೈಕ್ಷಣಿಕ ವರ್ಷ ಮುಗಿದಿದೆ ಪರೀಕ್ಷೆಗಳು ಆರಂಭವಾಗಿದೆ, ಹೆತ್ತವರು ಮಕ್ಕಳ ಭವಿಷ್ಯದ ಬಗ್ಗೆ ಗಮನ ಹರಿಸಬೇಕು ಎಂದು ಕರೆ ನೀಡಿದ್ದಾರೆ. ದೂರದೃಷ್ಟಿಯನ್ನು ಇಟ್ಟುಕೊಂಡು ನಾವು ನಿರ್ಧಾರ ಮಾಡಬೇಕು.  ಉಲಾಮಾಗಳು ಖಾಜಿಗಳು ಹೇಳಿದಂತೆ ಶೈಕ್ಷಣಿಕ್ಕೂ ಜೀವನಕ್ಕೂ ಮಹತ್ವ ಕೊಡಬೇಕು. ಹಿಜಾಬ್​ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.  ಎಲ್ಲವೂ ಪೂರಕವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಕನ್ನಡ ಪರೀಕ್ಷೆಇಂದು ನಡೆಯಲಿದೆ.  ಮುಸಲ್ಮಾನ ವಿದ್ಯಾರ್ಥಿಗಳು ಹಿಜಾಬ್ ಇಲ್ಲದೆ ಶಾಲೆಗೆ ಬರುತ್ತಿದ್ದಾರೆ. ಪೋಷಕರು ಎಕ್ಸಾಮ್ ಸೆಂಟರ್ ಗೆ ಕರೆದು ಕೊಂಡು ಬರುತ್ತಿದ್ದಾರೆ.  ಅಧಿಕಾರಿಗಳು ವಿಶೇಷ ಭದ್ರತೆಯಲ್ಲಿ ಪ್ರಶ್ನೆಪತ್ರಿಕೆ ತಂದಿದ್ದು, ಪ್ರಶ್ನೆ ಪತ್ರಿಕೆಗೆ ಗನ್ ಮ್ಯಾನ್ ಭಧ್ರತೆ ನೀಡಲಾಗಿತ್ತು, ಶಾಲಾ ಮುಖ್ಯೋಪಾಧ್ಯಾಯರಿಗೆ ಪ್ರಶ್ನೆಪತ್ರಿಕೆ ಹಸ್ತಾಂತರ ಮಾಡಲಾಗಿದೆ.  ಮುಸ್ಲಲ್ಮಾನ ಪ್ರಮುಖರು  ಶಿಕ್ಷಣ ಮುಖ್ಯ ಪರೀಕ್ಷೆಯಲ್ಲಿ ಭಾಗವಹಿಸಿ ಎಂದು ಹೇಳಿದ್ದಾರೆ.  ಪರೀಕ್ಷಾ ಕೇಂದ್ರಕ್ಕೆ ಪೋಷಕರಿಗೆ ಅನುಮತಿ ಇಲ್ಲ, ಬುರ್ಕಾ ಮತ್ತು ಹಿಜಾಬ್​ ತೆಗೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಶಾಲೆಯಲ್ಲಿ ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿ ನೇಮಕ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button