ರಾಜ್ಯಸುದ್ದಿ

`ಪರಮಾತ್ಮ‘ನ ಪುಣ್ಯಸ್ಮರಣೆ, ನೋವಿನಲ್ಲೂ ಪರೀಕ್ಷೆ ಬರೆಯಲಿರೋ ಅಪ್ಪು ಪುತ್ರಿ ವಂದಿತಾ..!

ಸ್ಯಾಂಡಲ್​ವುಡ್​(Sandalwood)ನ ಸರಳತೆಯ ಸಾಮ್ರಾಟ್​, ಅಭಿಮಾನಿಗಳ ಆರಾಧ್ಯದೈವ, ಕನ್ನಡ ಚಿತ್ರರಂಗದ ಬೆಟ್ಟದ ಹೂ, ಯುವಕರ ಪಾಲಿನ ಯುವರತ್ನ, ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​(Power Star Puneeth Rajkumar) ನಮ್ಮನೆಲ್ಲ ಅಗಲಿ ಇಂದಿಗೆ 11ನೇ ದಿನ. ಅಪ್ಪು ಅಗಲಿಕೆಯ ನೋವನ್ನು ಇಂದು ಯಾರೂ ಮರೆತಿಲ್ಲ. ಎಂದಿಗೂ ಮರೆಯುವುದಿಲ್ಲ. ಇಂದು ಅಪ್ಪು ಪುಣ್ಯತಿಥಿ ಹಿನ್ನೆಲೆ ಡಾ.ರಾಜ್​ಕುಮಾರ್​ ಕುಟುಂಬಸ್ಥರು(Dr.Rajkumar Family) ಇಂದು ಕಂಠೀರವ ಸ್ಟುಡಿಯೋಗೆ (Kanteerava Studio)ತೆರಳಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಕುಟುಂಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಬದುಕಿದ್ದಾಗ ಶೂಟಿಂಗ್​ ಇದ್ದ ಕಾರಣ ಇವರನೆಲ್ಲ ಒಟ್ಟಿಗೆ ಭೇಟಿ ಮಾಡಲು ಆಗಿರಲಿಲ್ಲ. ಆದರೆ ಇಂದು ಅವರೆಲ್ಲರೂ ಒಟ್ಟಿಗೆ ಬಂದಿದ್ದಾರೆ. ಆದರೆ ಅಪ್ಪು ಮಾತ್ರ ಇಲ್ಲ ಎಂಬುಂದನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಆದರೆ ಅಪ್ಪನ ಅಗಲಿಕೆಯ ನೋವಲ್ಲೂ, ಎರಡನೇ ಮಗಳು ವಂದಿತಾ(Vanditha) ತಮ್ಮ ಪರೀಕ್ಷೆ(Exam) ಬರೆಯಲಿದ್ದಾರೆ. ಅಪ್ಪನ ಅಗಲಿಕೆಯ ನೋವಿನಲ್ಲೆ ಇಂದು ವಂದಿತಾ ಪರೀಕ್ಷೆ ಬರೆಯಲಿದ್ದಾರೆ.

ನೋವಿನಲ್ಲೂ ಶಾಲೆಗೆ ಹೊರಟಿರುವ ಪುನೀತ್ ಮಗಳು

ಬೆಂಗಳೂರಿನ ಪ್ಯಾಲೇಸ್​ ರಸ್ತೆಯ ಸೋಫಿಯಾ ಶಾಲೆಯಲ್ಲಿ ಅಪ್ಪು ಅವರ ಎರಡನೇ ಪುತ್ರಿ ICSE 10th ತರಗತಿಯಲ್ಲಿ ಓದುತ್ತಿದ್ದಾರೆ. ಮುಂದಿನ ವಾರದಲ್ಲಿ ICSE 10th ಸೆಮಿಸ್ಟರ್ ಎಕ್ಸಾಂ ಹಿನ್ನಲೆ ಇಂದಿನಿಂದ ICSE 10th ಪೂರ್ತ ತಯಾರಿ ಎಕ್ಸಾಂ ಆರಂಭವಾಗಿದೆ. ಹೀಗಾಗಿ ತಂದೆಯ 11ನೇ ದಿನದ ಕಾರ್ಯದ ನಡುವೆಯೂ ಪರೀಕ್ಷೆಯನ್ನು ತಪ್ಪಿಸದೆ ವಂದಿತಾ ಪರೀಕ್ಷೆಗೆ ಹಾಜರಾಗಲಿದ್ದಾಳೆ. ಅಪ್ಪನ ಅಗಲಿಕೆಯ ನೋವಿನಲ್ಲಿ ಪರೀಕ್ಷೆ ಬರೆಯಲು ಶಾಲೆಗೆ ಹೋಗಲು ಮುಂದಾಗಿದ್ದಾಳೆ.

ಅಪ್ಪನ ಸಮಾಧಿಗೆ ಪೂಜೆ ಸಲ್ಲಿಸಿ ಹೊರಟ ಮಗಳು

ತಂದೆಯ ಆಸೆಯಂತೆ ನೋವಿನ ನಡುವೆಯೂ ಎಕ್ಸಾಂ ಬರೆಯಲು ವಂದಿತಾ ಮನಸ್ಸು ಮಾಡಿದ್ದಾಳೆ. ಇಂದಿನಿಂದ ICSE 10th ಪೂರ್ತ ತಯಾರಿ ಎಕ್ಸಾಂ ಆರಂಭವಾಗಿದೆ. ಆಫ್ ಲೈನ್ ಮಾದರಿಯಲ್ಲಿ ಈ ಪರೀಕ್ಷೆ ನಡೆಯಲಿದೆ. ಪುನೀತ್ ರಾಜ್​ಕುಮಾರ್ ಮಗಳು ವಂದಿತಾಗೆ ಎಕ್ಸಾಂ ಇರುವ ಹಿನ್ನಲೆಯಲ್ಲಿ ಪುನೀತ್​ ರಾಜ್​ಕುಮಾರ್​ ಕುಟುಂಬಸ್ಥರು ಬೆಳ್ಳಗ್ಗೆಯೇ ಸಾಧ್ಯವಾದಷ್ಟು ಬೇಗ ಪೂಜಾ ಕಾರ್ಯ ಮುಗಿಸಿದ್ದಾರೆ. ಪುನೀತ್ ರಾಜಕುಮಾರ್ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ರು. ಕಲಿಕೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕಾಳಜಿ ವಹಿಸಿದ್ರು.

Related Articles

Leave a Reply

Your email address will not be published. Required fields are marked *

Back to top button