
ಕುಣಿಗಲ್ : ಪಟ್ಟಣದಲ್ಲಿ ಬಿ ಖಾತ ಅಭಿಯಾನ 2ನೇ ಬಾರಿಗೆ ಪಾದರ್ಪಣೆ ಮಾಡಿ ಖಾತೆಯನ್ನು ಪಡೆಯಲು ಕೆಲವು ದಲ್ಲಾಳಿಗಳನ್ನು ಆಶ್ರಯಿಸುವರು, ಇದೆಲ್ಲಾಳಿ ಹಾವಳಿ ತಪ್ಪಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ” ಎಚ್ ಡಿ ರಂಗನಾಥ್” ಅವರು ತಿಳಿಸಿದರು.
ಬಿ “ಖಾತೆಗೆ ಯಾವುದೇ ಕಾರಣಕ್ಕೂ ಯಾರು ಒಂದು ರೂಪಾಯಿ ನೀಡಬಾರದು, 23 ವಾರ್ಡ್ಗಳಲ್ಲಿಯೂ ಅಭಿಯಾನ ನಡೆಯಲಿದೆ, ನಾಗರೀಕರು ತಮ್ಮ ಬಳಿ ಇರುವ ದಾಖಲೆಗಳನ್ನು ನೀಡಬೇಕು, ಪ್ರತಿದಿನ ಎಷ್ಟು ಅರ್ಜಿಗಳು ಬಂದವು,ಅವುಗಳಲ್ಲಿ ತಾಂತ್ರಿಕ ಸಮಸ್ಯೆಗಳು ಇರುವ ಅರ್ಜಿಗಳು ಎಷ್ಟು, ಯಾವ ತಾಂತ್ರಿಕ ಸಮಸ್ಯೆ ಇದೆ, ಎನ್ನುವುದನ್ನು ಪ್ರಕಟಿಸಲಾಗುವುದು ಎಂದರು.
ಬಿ ‘ಖಾತೆಗಳಿಗಾಗಿ ಪುರಸಭೆ ಹತ್ತಿರ ಬರುವ ಪ್ರಮಯವೇ ಬರುವುದಿಲ್ಲ, ಪುರಸಭೆ ಸದಸ್ಯರನ್ನು ಪಕ್ಷಾತೀತವಾಗಿ ವಿಶ್ವಾಸಕ್ಕೆ ಪಡೆದು ಈ ಕೆಲಸ ಮಾಡಲಾಗುವುದು, ನಾಗರೀಕರಿಗೆ ಅನುಕೂಲ ಮಾಡುವುದೇ ನಮ್ಮ ಮುಖ್ಯ ಉದ್ದೇಶ ಆಗಬೇಕು, ಸಾರ್ವಜನಿಕರ ವಿಶಾಸಕ್ತಿ ಕಾಪಾಡುವುದು ನನ್ನ ಧ್ಯೇಯವಾಗಿದೆ ಎಂದರು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಜೊತೆಗೂಡಿ ಬೀದಿಗಳಲ್ಲಿ ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ತೊಡಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಾನೊಬ್ಬ ಈ ತಾಲೂಕಿನ ಅತ್ಯುತ್ತಮ ಶಾಸಕನಾಗಿ ಪ್ರತಿನಿತ್ಯ ಸಾರ್ವಜನಿಕರ ಕಷ್ಟ ಸುಖದಲ್ಲಿ ಸದಾ ಭಾಗಿಯಾಗುವುದು ನನ್ನ ಗುರಿ ಹಾಗೂ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ, ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮ ಅವ್ಯವಹಾರಗಳು ಕೈಬರಹದಲ್ಲಿ ನಡೆಯುತ್ತಿದ್ದು ಅವುಗಳಿಗೆ ಸಂಪೂರ್ಣ ಕಡಿಯೋಣ ಹಾಕಿ, ಪಟ್ಟಣದ ನಾಗರಿಕರಿಗೆ ಅನುಕೂಲವಾಗುವಂತೆ ಸರ್ಕಾರದ ಆದೇಶದಂತೆ ಇಲಾಖೆಯವರಿಗೆ ಖಡಕ್ ಸೂಚನೆ ನೀಡಿದ್ದೇನೆ ಎಂದು ಮಾತನಾಡಿದರು.