ಇಡೀ ವಿಶ್ವವೇ ಕೊರೊನಾ(Corona) ಕೈಗೆ ಸಿಲುಕಿ ನಲುಗಿ ಹೊಗಿತ್ತು. ಪ್ರತಿ ದಿನ ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣ ಹೆಚ್ಚುತ್ತಲೇ ಇತ್ತು. ಎಲ್ಲ ದೇಶಗಳಲ್ಲೂ ಲಾಕ್‌ಡೌನ್(Lockdown) ಮಾಡಲಾಗಿತ್ತು. ಇದೀಗ ಮತ್ತೆ ಚೀನಾ(China)ದಲ್ಲಿ ಕೋವಿಡ್(Covid) ತನ್ನ ಆರ್ಭಟವನ್ನು ಮತ್ತೆ ಶುರುಮಾಡಿಕೊಂಡಿದೆ. ಚೀನಾದ ಕೆಲವೆಡೆ ಮತ್ತೆ ಲಾಕ್‌ಡೌನ್ ಮಾಡಲಾಗಿದೆ. ಆದರೆ ಕೊರೋನಾ ಬಂದಾಗಿನಿಂದಲೂ ಈವರೆಗೆ ಅತ್ಯಂತ ಕಡಿಮೆ(Very Low) ಕೊರೋನಾ ಕೇಸ್ ದಾಖಲಾಗಿದ್ದ ನ್ಯೂಜಿಲೆಂಡ್(New Zealand)ನಲ್ಲಿ ಏಕಾಏಕಿ ಕೊರೋನಾ ಸ್ಫೋಟಗೊಂಡಿದೆ(Corona Exploded). ಒಂದೇ ದಿನ 206 ಕೇಸ್‌ಗಳು ದಾಖಲಾಗಿವೆ. . ಇದು ಕೋವಿಡ್ ಸಾಂಕ್ರಾಮಿಕ ಆರಂಭದ ಬಳಿಕ ದಾಖಲಾದ ಅತ್ಯಂತ ಗರಿಷ್ಠ ಸಂಖ್ಯೆಯಾಗಿದೆ. ಇಲ್ಲಿಯವರೆಗೂ ಈ ಪ್ರಮಾಣದಲ್ಲಿ ಪ್ರಕರಣ ಪತ್ತೆಯಾಗಿರಲಿಲ್ಲ. ಈ 206 ಪ್ರಕರಣಗಳ ಪೈಕಿ ನ್ಯೂಜಿಲೆಂಡ್‌ನ ಪ್ರಮುಖ ನಗರ ಮತ್ತು ರಾಜಧಾನಿ ಆಕ್ಲೆಂಡ್(Auckland)ಒಂದರಲ್ಲೇ 200 ಕೇಸ್‌ಗಳು ದಾಖಲಾಗಿವೆ. ಇದು ದೇಶದಲ್ಲಿ ಆತಂಕ ಮೂಡಿಸಿದೆ.
ಈ ಹಿಂದೆ 1 ಕೇಸ್ ದಾಖಲಾಗುತ್ತಿದ್ದಂತೆ, ನ್ಯೂಜಿಲೆಂಡ್ ಸರ್ಕಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಿತ್ತು. ಗಡಿಯಲ್ಲಿ ಸಾಕಷ್ಟು ನಿರ್ಬಂಧಗಳನ್ನು ವಿದೇಶಿಗರ ಮೇಲೆ ಅದು ಹೇರಿತ್ತು. ಈ ಮೂಲಕ ಕೋವಿಡ್ ಮೇಲೆ ನಿಯಂತ್ರಣ ಸಾಧಿಸಿತ್ತು. ಆದಾಗ್ಯೂ ತನ್ನ 50 ಲಕ್ಷ ಜನಕ್ಕೆ ಲಸಿಕೆ ನೀಡಲು ನ್ಯೂಜಿಲೆಂಡ್ ಸರ್ಕಾರ ಹರಸಾಹಸ ಪಡುತ್ತಿದೆ. ಡೆಲ್ಟಾಕೊರೋನಾ ತಳಿ ಭೀತಿಯಿಂದ ಜನತೆ ಸುಮಾರು 3 ತಿಂಗಳಿನಿಂದ ನಿರ್ಬಂಧದ ನಡುವೆಯೇ ಬದುಕುತ್ತಿದ್ದಾರೆ.
ಇಂದು ನಿರ್ಬಂಧ ಸಡಿಲಿಸುವ ಸಾಧ್ಯತೆ ಇತ್ತು. ಆದರೆ ಅದರ ನಡುವೆಯೇ ಇದೀಗ ಡೆಲ್ಟಾರೂಪಾಂತರಿ ವೈರಸ್ ಸ್ಫೋಟಗೊಂಡಿದೆ. ಅದಾಗ್ಯೂ ಪ್ರಧಾನಿ ಜಸಿಂದಾ ಆರ್ಡೆರ್ನ್ ಅವರು ಆಕ್ಲೆಂಡ್ ನಿವಾಸಿಗಳು, ಬೇಸಿಗೆ ರಜೆ ಮತ್ತು ಕ್ರಿಸ್‌ಮಸ್‌ಗಾಗಿ ಪ್ರಯಾಣಿಸಬಹುದು ಎಂದಿದ್ದಾರೆ. ‘ನಾವು ಆಕ್ಲೆಂಡ್ ನಿವಾಸಿಗಳನ್ನು ಐಸೋಲೇಶನ್‌ನಲ್ಲಿ ಇರಿಸಲು ಬಯಸುವುದಿಲ್ಲ. ಆದರೆ ಈಗಿನ ಸೋಂಕು ಜನರಿಗೆ ವ್ಯಾಕ್ಸಿನ್ ಮಹತ್ವವನ್ನು ತಿಳಿಸಿದೆ’ ಎಂದಿದ್ದಾರೆ.