ರಾಜ್ಯಸುದ್ದಿ

ನೋಟ್ ಬ್ಯಾನ್ ಆಗಿದ್ದು ಒಳ್ಳೆದಾಯ್ತಾ? ಈಗ ಎಲ್ಲಾ ಕಡೆ ಡಿಜಿಟಲ್ ಪೇಮೆಂಟ್..!

Digital Payment due to Demonetization: ನವೆಂಬರ್ 8, 2021ರಂದು ಭಾರತ ಸರ್ಕಾರವು (Government of India) 1000 ಮತ್ತು 500 ರೂ ಮುಖಬೆಲೆಯ ಕರೆನ್ಸಿ ನೋಟುಗಳ (Currency Notes) ಕಾನೂನು ಟೆಂಡರ್ ಸ್ಥಿತಿಯನ್ನು ರದ್ದುಗೊಳಿಸಲು (Note Ban) ನಿರ್ಧರಿಸಿ 5 ವರ್ಷಗಳಾಗಿದೆ. ಇದು ಭಾರತವನ್ನು ತೆರಿಗೆ-ಅನುಸರಣೆಯಿಲ್ಲದ ಸಮಾಜದಿಂದ ತೆರಿಗೆಯನ್ನು ಸರಿಯಾಗಿ ಕಟ್ಟುವ ಅಥವಾ ಐಟಿ ರಿಟರ್ನ್ಸ್‌ (IT Returns) ಸಲ್ಲಿಸುವ ದೇಶವಾಗಿ ಸ್ಥಳಾಮತರಿಸುವ ದೊಡ್ಡ ಉದ್ದೇಶವಾಗಿದೆ.

ಇನ್ನು, ಈ ನೋಟ್‌ ಬ್ಯಾನ್‌ ಅಥವಾ ಡಿಮಾನಿಟೈಸೇಷನ್‌ನಿಂದ (Demonitization) ಡಿಜಿಟಲ್ ವಹಿವಾಟುಗಳ ಬಳಕೆಯಲ್ಲಿ, ವಿಶೇಷವಾಗಿ ಯುವಜನರಲ್ಲಿ ಶಾಶ್ವತ ಹೆಚ್ಚಳಕ್ಕೆ ಕಾರಣವಾಯಿತು ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ (Harvard University) ಕಾರ್ಯಾಗಾರವು ಕಂಡುಹಿಡಿದಿದೆ. ಅಲ್ಲದೆ, ಡಿಜಿಟಲ್ ವಹಿವಾಟಿಗೆ ಬದಲಾದವರು ವರ್ಷಗಳಾದರೂ ನಗದು ಪಾವತಿಗೆ ಮರಳಿಲ್ಲ ಎಂದೂ ಹೇಳಿದೆ.

ನರೇಂದ್ರ ಮೋದಿ ಸರ್ಕಾರವು 8ನೇ ನವೆಂಬರ್ 2016 ರಂದು ಹಲವಾರು ಉದ್ದೇಶಗಳೊಂದಿಗೆ 1000 ರೂ. ಮತ್ತು 500 ರೂ. ಮುಖಬೆಲೆಯ ಕರೆನ್ಸಿ ನೋಟುಗಳ ಕಾನೂನು ಟೆಂಡರ್ ಸ್ಥಿತಿಯನ್ನು ರದ್ದುಗೊಳಿಸಲು ನಿರ್ಧರಿಸಿತ್ತು

ಆ ಉದ್ದೇಶಗಳು

(i) ಕಪ್ಪುಹಣವನ್ನು ಹೊರಹಾಕುವುದು

(ii) ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು (FICN) ಅನ್ನು ನಾಶ ಪಡಿಸುವುದು

( iii) ಭಯೋತ್ಪಾದನೆ ಮತ್ತು ಎಡಪಂಥೀಯ ಉಗ್ರವಾದದ ಹಣಕಾಸಿನ ಮೂಲವನ್ನು ಹೊಡೆಯುವುದು

(iv) ತೆರಿಗೆ ಮೂಲ ಮತ್ತು ಉದ್ಯೋಗ ವಿಸ್ತರಿಸಲು ಅನೌಪಚಾರಿಕ ಆರ್ಥಿಕತೆಯನ್ನು ಔಪಚಾರಿಕ ಆರ್ಥಿಕತೆಯಾಗಿ ಪರಿವರ್ತಿಸುವುದು

(v) ಭಾರತವನ್ನು ಕಡಿಮೆ ನಗದು ಆರ್ಥಿಕತೆಯನ್ನಾಗಿಸಲು ಪಾವತಿಗಳ ಡಿಜಿಟಲೀಕರಣಕ್ಕೆ ದೊಡ್ಡ ಉತ್ತೇಜನ ನೀಡುವುದು.

Related Articles

Leave a Reply

Your email address will not be published. Required fields are marked *

Back to top button