ತಾಲಿಬಾನಿ(Taliban’s)ಗಳ ಅಟ್ಟಹಾಸಕ್ಕೆ ಅಫ್ಘಾನಿಸ್ತಾನ(Afghanistan) ನಲುಹೋಗಿದೆ. ಇದೀಗ ಅಂತಹದ್ದೇ ಸ್ಥಿತಿಗೆ ಮತ್ತೊಂದು ದೇಶ ಸೇರಿಕೊಳ್ಳುತ್ತಿದೆ. ಪ್ರತಿದಿನ ನಡೆಯುತ್ತಿರುವ ದಾಳಿಯಿಂದಾಗಿ ಜನ ಅಸುನೀಗುತ್ತಿದ್ದಾರೆ, ಮೊದಲೇ ಬಡತ(Poverty)ನಕ್ಕೆ ಸಿಲುಕಿ, ಒಂದು ತುತ್ತಿನ ಅನ್ನಕ್ಕೂ ಜನ ಪರದಾಡುತ್ತಿದ್ದಾರೆ. ಇದರ ಮಧ್ಯೆ ಪ್ರತಿದಿನ ನೈಜೀರಿಯಾದ(Nigeria)ಲ್ಲಿ ಬಂಡುಕೋರರು(Rebels) ರಕ್ತದೋಕುಳಿ ಆಡುತ್ತಿದ್ದಾರೆ. ಸಿಕ್ಕ ಸಿಕ್ಕವರನ್ನು ಕೊಂದು ಕ್ರೌಯ ಮೆರೆಯುತ್ತಿದ್ದಾರೆ. ಇತ್ತೀಚೆಗೆ ನೈಜೀರಿಯಾದ ವಾಯುವ್ಯ ರಾಜ್ಯಗಳಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದೆ.
ಒಂದು ವಾರದ ಅಂತರದಲ್ಲಿ 3 ಬಾರಿ ದಾಳಿ(Attack) ನಡೆಸಿರುವ ಬಂಡುಕೋರರು 80 ಕ್ಕೂ ಹೆಚ್ಚು ಮಂದಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ನಿನ್ನೆ ಉತ್ತರ ನೈಜೀರಿಯಾದ ಮಸೀದಿ(Mosque)ಯೊಂದ ಮೇಲೆ ಮುಸುಕುಧಾರಿಗಳು ದಾಳಿ ನಡೆಸಿದ್ದು, 18 ಮಂದಿ ಮೃತಪಟ್ಟಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ(Prayer) ಮಾಡುತ್ತಿದ್ದವರ ಮೇಲೆ ಮುಸುಕುಧಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. 18 ಮಂದಿ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯಾಡಳಿತ ಪ್ರದೇಶದ ಅಧ್ಯಕ್ಷ ಅಲ್ಹಾಸನ್ ಇಸಾ(Alhassan Isa) ಮಾಹಿತಿ ನೀಡಿದ್ದಾರೆ.