Rajakiya
ನೆರೆ ಪರಿಹಾರ ನೀಡುವಲ್ಲಿ ಡಬಲ್ ಎಂಜಿನ್ ಸರ್ಕಾರಗಳಿಂದ ಮಹಾಮೋಸ: ಕಾಂಗ್ರೆಸ್
ಬೆಂಗಳೂರು: ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೋಸ ಮಾಡಿವೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.
ಈ ಕುರಿತು ಪ್ರಜಾವಾಣಿ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕೆಪಿಸಿಸಿ, ‘ನೆರೆ ಪರಿಹಾರ ನೀಡುವಲ್ಲಿ ಡಬಲ್ ಎಂಜಿನ್ ಸರ್ಕಾರಗಳ ಮಹಾಮೋಸದಿಂದ ಸಂತ್ರಸ್ತರು ನಲುಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
‘2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಸಹ ಮನೆ ನೀಡದ ಬಿಜೆಪಿ ಸರ್ಕಾರ 2020 ಹಾಗೂ 2021ರ ಪ್ರವಾಹಗಳ ಪರಿಹಾರ ನೀಡುತ್ತದೆಯೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಅನಗತ್ಯ ವಿಚಾರಗಳ ಬಗ್ಗೆ ದೊಡ್ಡದಾಗಿ ಮಾತನಾಡುವ ಬಿಜೆಪಿ ನಾಯಕರು ಇದಕ್ಕೆ ಉತ್ತರಿಸುವರೇ ಎಂದೂ ಕೆಪಿಸಿಸಿ ಕೇಳಿದೆ.
2019ರ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿದ್ದ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬಿದರಹಳ್ಳಿ ಸರ್ಕಲ್‌ನ ನೆರೆ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ್ದರು. ಇದನ್ನು ಆಧರಿಸಿ ಪ್ರಜಾವಾಣಿ ವರದಿ ಮಾಡಿತ್ತು.