ನೂತನ ಸಂಸತ್ ಭವನದ ಮೇಲೆ ರಾಷ್ಟ್ರ ಲಾಂಛನ!
ಭಾರತದ ನೂತನ ಸಂಸತ್ ಭವನದ ಮೇಲೆ ನಿರ್ಮಿಸಲಾಗಿರುವ ರಾಷ್ಟ್ರೀಯ ಲಾಂಛನವು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ರಾಜ ಅಶೋಕನ ಸಾರನಾಥ ಸಿಂಹದ ಲಾಂಛನವು ಉತ್ತಮವಾಗಿದ್ದು, ಈ ವಿಷಯದಲ್ಲಿ ರಾಜಕೀಯ ಟೀಕೆಗಳು ಸರಿಯಲ್ಲ ಎಂಬುದು ರಾಜಕೀಯ ತಜ್ಞರ ವಾದವಾಗಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಾಜಿ ಎಡಿಜಿ ಬಿಆರ್ ಮಣಿ ಮಾತನಾಡಿ, ಮೂಲ ಸ್ತಂಭವು 7-8 ಅಡಿಗಳಿದ್ದರೆ ಸಂಸತ್ ಭವನದ ಮೇಲಿರುವ ರಾಷ್ಟ್ರೀಯ ಲಾಂಛನವು ಸುಮಾರು ಮೂರು ಪಟ್ಟು ಎತ್ತರವಾಗಿದೆ.
“ಕಳೆದ 1905ರಲ್ಲಿ ಉತ್ಖನನ ಮಾಡಿದ ಅಶೋಕ ಸ್ತಂಭವನ್ನು ಸಂಸತ್ ಭವನದ ಮೇಲೆ ಸ್ಥಾಪಿಸುವ ಉದ್ದೇಶದಿಂದ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಡಿಜಿ ಮಣಿ, ನಾನು ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ಆಧಾರರಹಿತ ಅಥವಾ ಅರ್ಥಹೀನ ಎಂದು ದೂಷಿಸುವುದಿಲ್ಲ. ಆದರೆ ಲಾಂಛನದ ಬಗ್ಗೆ ರಾಜಕೀಯ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಲಾಂಛನ ನಿರ್ಮಾಣದಲ್ಲಿ ಕಲಾವಿದನ ದೃಷ್ಟಿಕೋನ: “ನೂತನ ಸಂಸತ್ ಭವನದ ಮೇಲೆ ಚಿತ್ರಿಸಲಾಗಿರುವ ರಾಷ್ಟ್ರ ಲಾಂಛನವು ಅಮೋಘ ಮತ್ತು ಅದ್ಭುತವಾಗಿದೆ. ಅಶೋಕನ ಸಾರನಾಥ ಸಿಂಹದ ಲಾಂಛನವನ್ನು ಉತ್ತಮವಾಗಿ ಚಿತ್ರಿಸಲಾಗಿದೆ. 7 ರಿಂದ 8 ಅಡಿ ಎತ್ತರದ ಸಿಂಹ ಮತ್ತು 20 ರಿಂದ 21 ಅಡಿ ಸಿಂಹದ ಲಾಂಛನವನ್ನು ಚಿತ್ರಿಸುವಾಗ ಕಲಾವಿದನ ದೃಷ್ಟಿಕೋನವು ಭಿನ್ನವಾಗಿರುತ್ತದೆ,” ಎಂದು ಎಡಿಜಿ ಬಿಆರ್ ಮಣಿ ಹೇಳಿದ್ದಾರೆ.
“ನೀವು ಎತ್ತರದಲ್ಲಿ ನಿರ್ಮಿಸಲಾದ ಏನನ್ನಾದರೂ ನೋಡಿದರೆ, ಅದು ಕೆಳಗಿನಿಂದ ವಿಭಿನ್ನವಾಗಿ ಕಾಣುತ್ತದೆ, ಆದರೆ ಯಾವುದೇ ಗಮನಾರ್ಹ ವ್ಯತ್ಯಾಸವಿಲ್ಲ. ಸಾರಾನಾಥದಲ್ಲಿ ದೊರೆತ ಅಶೋಕ ಸ್ತಂಭದ ಉತ್ತಮ ಕೃತಿಯನ್ನು ಮಾಡಿದ್ದಾರೆ ಎಂಬುದು ನನ್ನ ನಂಬಿಕೆ,” ಎಂದು ಹೇಳಿದ್ದಾರೆ.
ರಾಷ್ಟ್ರೀಯ ಲಾಂಛನವನ್ನು ವಿರೂಪಗೊಳಿಸಿದ ಆರೋಪ: ಕೇಂದ್ರ ಸರ್ಕಾರವು ರಾಷ್ಟ್ರೀಯ ಲಾಂಛನವನ್ನು “ವಿರೂಪಗೊಳಿಸಿದೆ” ಎಂದು ಕಾಂಗ್ರೆಸ್ ಮತ್ತು ಆರ್‌ಜೆಡಿ ಸೇರಿದಂತೆ ಹಲವು ಪಕ್ಷಗಳು ಆರೋಪಿಸಿವೆ. ವಿರೋಧ ಪಕ್ಷಗಳೂ ಲಾಂಛನ ಅನಾವರಣ ಮಾಡಿದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿವೆ.
ಸಂಸತ್ತಿನ ರಾಷ್ಟ್ರೀಯ ಲಾಂಛನವು “ಗ್ರೇಟ್ ಸಾರನಾಥದ ಪ್ರತಿಮೆ” ಅಥವಾ “ಜಿಐಆರ್ ಸಿಂಹದ ವಿಕೃತ ಆವೃತ್ತಿಯಾಗಿದ್ದು,” ಕೇಂದ್ರ ಸರ್ಕಾರವು ಈ ಬಗ್ಗೆ ಪರಿಶೀಲಿಸಬೇಕು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.”ದಯವಿಟ್ಟು ಅದನ್ನು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಅದನ್ನು ಸರಿಪಡಿಸಿ” ಎಂದು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸಿಂಹದ ಮುಖದಲ್ಲಿ ಅಕ್ರಮಣಶೀಲತೆ: ಈಗ ಚಿತ್ರಿಸಲಾಗಿರುವ ಅಶೋಕ ಸಿಂಹಗಳ ಚಿತ್ರಣವು “ಅನಗತ್ಯವಾಗಿ ಆಕ್ರಮಣಕಾರಿ ಮತ್ತು ಅಸಮಂಜಸವಾಗಿದೆ” ಎಂದು ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸಿರ್ಕಾರ್ ಟೀಕಿಸಿದ್ದಾರೆ. “ಸೂಕ್ಷ್ಮವಾಗಿ ಗಮನಿಸಿದರೆ ಸಿಂಹದ ಮುಖದ ನೋಟದಲ್ಲಿ ಆಕ್ರಮಣಶೀಲತೆ ಇದೆ ಎಂದು ತಿಳಿಯುತ್ತದೆ, ಆದರೆ ಸಾಮ್ರಾಟ್ ಅಶೋಕ ಹೇಳಲು ಪ್ರಯತ್ನಿಸುತ್ತಿರುವುದು ನಿಯಂತ್ರಿತ ನೀತಿಯಾಗಿದೆ. ಸಿಂಹಗಳಂತಹ ಆಕ್ರಮಣಕಾರಿ ಜೀವಿಗಳ ಮುಖದಲ್ಲಿನ ಶಾಂತ ಅಭಿವ್ಯಕ್ತಿ ಸಂದೇಶದ ಸಾಕಾರವಾಗಿದೆ. ಅಶೋಕನು ಶಾಂತಿಯನ್ನು ನೀಡಲು ಪ್ರಯತ್ನಿಸುತ್ತಿದ್ದನು,” ಎಂದು ಟಿಎಂಸಿ ನಾಯಕ ಜವಾಹರ್ ಸಿರ್ಕಾರ್ ಹೇಳಿದ್ದಾರೆ.
ನೂತನ ಸಂಸತ್ ಮೇಲೆ ರಾಷ್ಟ್ರ ಲಾಂಛನ: ನವದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದ ಮೇಲೆ ರಾಷ್ಟ್ರ ಲಾಂಛನವನ್ನು ಬಿತ್ತರಿಸುವುದಕ್ಕೆ ನಾಲ್ಕು ಮುಖದ ಸಿಂಹವನ್ನು ಚಿತ್ರಿಸಲಾಗಿದೆ. ಬರೋಬ್ಬರಿ 9500 ಕೆಜಿ ತೂಕದ ಲಾಂಛನವನ್ನು ಕಂಚಿನಿಂದ ಮಾಡಲ್ಪಟ್ಟಿದ್ದು, 6.5 ಮೀಟರ್ ಎತ್ತರವನ್ನು ಹೊಂದಿದೆ. ಹೊಸ ಸಂಸತ್ ಕಟ್ಟಡದ ಕೇಂದ್ರ ದ್ವಾರದ ಮೇಲ್ಭಾಗದಲ್ಲಿ ಈ ಲಾಂಛನವನ್ನು ಬಿತ್ತರಿಸಲಾಗಿದೆ. ಇದೇ ಲಾಂಛನದ ಮೇಲೆ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ.