ಸುದ್ದಿ
ನಿದ್ರೆ ಮಾಡಿದರೆ ಸಾಕು 25 ಲಕ್ಷ ರೂ ಸಂಬಳ! ಹೀಗೊಂದು ಕೆಲಸಕ್ಕೆ ಉದ್ಯೋಗಿಗಳು ಬೇಕಂತೆ..!
ಕೆಲವರಿಗೆ ಇಂಜಿನಿಯರ್ ಆಗಬೇಕು, ಡಾಕ್ಟರ್ ಆಗಬೇಕು, ಪೈಲೆಟ್ ಆಗಬೇಕು ಎಂಬ ಕನಸಿರುತ್ತದೆ. ಆ ಕನಸನ್ನು ನನಸು ಮಾಡುವ ಮೂಲಕ ತಮ್ಮ ಕೆಲಸದತ್ತ ತೊಡಗಿಸಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಕೆಲಸವೇ ಕೈಡಿಯುವುದಿಲ್ಲ.
ಮತ್ತೆ ಹಲವರು ಕೆಲಸವೇ ಬೇಡವೆಂದು ಮನೆಯಲ್ಲಯೇ ಆರಾಮಾಗಿ ಟಿವಿ ನೋಡುತ್ತಾ, ತಿನ್ನುತ್ತಾ , ಮಲಗುತ್ತಾ ಬಿದ್ದಿರುತ್ತಾರೆ. ಆದರೆ ಅಂತವರಿಗಾಗಿಯೂ ಇಲ್ಲೊಂದು ಕನಸಿನ ಉದ್ಯೋಗವಿದೆ. ಅದೇನೆಂದರೆ ವ್ಯಕ್ತಿ ಮಲಗಬೇಕು ಮತ್ತು ಟಿವಿ ನೋಡುವ ಕೆಲಸವಾಗಿದೆ. ಮಾತ್ರವಲ್ಲದೆ ವಾರ್ಷಿಕವಾಗಿ ಸಂಬಳವನ್ನು ಪಡೆಯಬಹುದಾಗಿದೆ.
ಅಚ್ಚರಿಯಾದರು ನಿಜ. ಸಾಕಷ್ಟು ಜನರಿಗೆ ಈ ಉದ್ಯೋಗದ ಬಗ್ಗೆ ನಂಬಿಕೆ ಇರಲಿಕ್ಕಿಲ್ಲ. ಆದರೆ ಯುಕೆಯ ಕಂಪನಿಯೊಂದು ಇಂತಹದೊಂದು ಕೆಸಲವನ್ನು ಸೃಷ್ಟಿಸಿದೆ. ಮತ್ತೊಂದು ವಿಚಾರವೆಂದರೆ ಕಚೇರಿಗೆ ತೆರಳದೆ ಉದ್ಯೋಗಿಗಳು ತಮ್ಮ ಮನೆಯಲ್ಲಿಯೇ ಈ ಕೆಲಸ ಮಾಡಬಹುದು.