RIP Puneeth rajkumar: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರನ್ನು ಅಗಲಿ 4 ದಿನಗಳು ಗತಿಸಿವೆ. ನಾಳೆ ಹಾಲು-ತುಪ್ಪ ಕಾರ್ಯಕ್ರಮ ಮಾಡಲು ರಾಜ್ ಕುಟುಂಬ(raj family) ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಕಂಠೀರವ ಸ್ಟುಡಿಯೋಗೆ (kanteerava studio) ಸೋದರ ರಾಘವೇಂದ್ರ ರಾಘವೇಂದ್ರ ರಾಜ್ ಕುಮಾರ್ (raghvendra raj kumar), ಅವರ ಪುತ್ರ ಯುವ ರಾಜ್ ಕುಮಾರ್ (yuva rajkumar) ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಳೆ ಹಾಲು-ತುಪ್ಪ ವಿಧಿವಿಧಾನ ಹಿನ್ನೆಲೆ, ಕಾರ್ಯಕ್ರಮದ ಸಿದ್ಧತೆಯ ಬಗ್ಗೆ ರಾಘವೇಂದ್ರ ರಾಜ್ ಕುಮಾರ್, ಯುವ ರಾಜ್ ಕುಮಾರ್ ಹಾಗೂ ಚಿನ್ನೇಗೌಡರು ವೀಕ್ಷಿಸಿದರು. ನಾಳಿನ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದರು.
ಇದಕ್ಕೂ ಮುನ್ನ ಶಿವರಾಜ್ ಕುಮಾರ್ ಮಾತನಾಡಿ, ನಾಳೆ ಹಾಲು ತುಪ್ಪ ಕಾರ್ಯಕ್ರಮ ಇದೆ. ಇದಾದ ಬಳಿಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದರು. ಈ ಕುರಿತು ಸಿಎಂ ಜೊತೆ ಸಹ ಮಾತನಾಡುತ್ತೇನೆ ಎಂದರು.
ಸಮಾಧಿ ಸ್ಥಳಕ್ಕೆ ತಮಿಳು ನಟ ಶಿವಕಾರ್ತಿಕೇಯನ್ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಶಿವಕಾರ್ತಿಕೇಯನ್, ಪುನೀತ್ ಅದ್ಬುತ ನಟ. ಅವರ ನಿಧನ ನೋವು ತಂದಿದೆ. ಒಂದು ತಿಂಗಳ ಹಿಂದೆ ಪುನೀತ್ ರನ್ನು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದೆ. ಮನೆಗೆ ಬಂದು ಭೇಟಿಯಾಗುವಂತೆ ಆಹ್ವಾನಿಸಿದ್ರು. ಆದ್ರೆ ಅವರನ್ನು ಭೇಟಿ ಮಾಡಲು ಸಾಧ್ಯವೇ ಆಗಲಿಲ್ಲ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.