ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಆಗೋದು ಫಿಕ್ಸ್ – ಆರ್ ಅಶೋಕ್

ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಬಿಜೆಪಿ ಪಕ್ಷದ ಅಸಮಾಧಾನ, ಸಿಎಂ ಬದಲಾವಣೆ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.ಪಕ್ಷದ ಆಂತರಿಕ ಸಂಘರ್ಷದ ಬಗ್ಗೆ ಮಾತನಾಡಿರುವ ಆರ್ ಅಶೋಕ್, ಪಕ್ಷದಲ್ಲಿ ನಡೆಯುತ್ತಿರುವ ಘಟನೆ ಬೇಸರ ತಂದಿದೆ. ಗುಂಪುಗಾರಿಕೆ, ಎರಡು ಬಣ ಮಾಡಿರೋದು ಒಳ್ಳೆಯದಲ್ಲ. ಇದರಿಂದ ಪಕ್ಷಕ್ಕೂ ಒಳ್ಳೆಯದಲ್ಲ. ನಾನು ಬಿಜೆಪಿ ಪಕ್ಷಕ್ಕೆ ಬಂದು 50 ವರ್ಷ ಆಗಿದೆ. ಕೇವಲ 18 ವರ್ಷ ವಯಸ್ಸಿನಲ್ಲೇ ನಾನು ಪಕ್ಷಕ್ಕೆ ಎಂಟ್ರಿ ಕೊಟ್ಟಿದ್ದೆ. ಆದ್ರೆ ಎಮರ್ಜೆನ್ಸಿಯಲ್ಲಿ ಜೈಲಿನಲ್ಲಿದ್ದೆ, ನಾನು ಚಿಕ್ಕಪ್ಪ, ತಮ್ಮ ಎಲ್ಲರೂ ಜೈಲಿನಲ್ಲಿದ್ದೆವು. ಆದ್ದರಿಂದ ನಾವು ಹೋರಾಟ ಮಾಡಿಕೊಂಡೇ ಬಂದವರು. ಒಂದೇ ಬಾರಿ ಲೀಡರ್ ಆಗಿಲ್ಲ, ಹಂತ ಹಂತವಾಗಿ ಮೇಲೆ ಬಂದಿದ್ದೇನೆ.
ಆದ್ದರಿಂದ ಗುಂಪುಗಾರಿಕೆ, ಎರಡು ಬಣ ಮಾಡಿರೋದು ಒಳ್ಳೆಯದಲ್ಲ ಎಲ್ಲಾ ಸರಿಯಾಗಬೇಕು. ಇದು ಪಾರ್ಟಿಗೂ ಒಳ್ಳೆಯದಲ್ಲ, ಜನರಿಗೂ ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ವಿರೋಧ ಪಕ್ಷವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡೋದು ನಮ್ಮ ಕರ್ತವ್ಯ. ಇನ್ನು ಕೇಂದ್ರದ ನಾಯಕರ ಜೊತೆ ಟಚ್ ಅಲ್ಲಿದ್ದೇನೆ. ಪಕ್ಷದಲ್ಲಿ ನಡೆಯುತ್ತಿರುವ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇನೆ.ಕೇಂದ್ರ ನಾಯಕರು ಎಲ್ಲಾ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಅಧ್ಯಕ್ಷರಾಗಬೇಕು ಅನ್ನೋದು ಎಲ್ಲರಿಗೂ ಆಸೆ ಇರುತ್ತೆ. ಆದರೆ ಇದನ್ನು ತೀರ್ಮಾನ ಮಾಡೋದು ಅಮಿತ್ ಶಾ. ನಾನು ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡ್ತಿದ್ದೇನೆ. ಯತ್ನಾಳ ಕೂಡ ಬಿಜೆಪಿ ನಾಯಕರೇ, ವಿಜಯೇಂದ್ರ ಕೂಡಾ ಬಿಜೆಪಿ ನಾಯಕರೇ. ಆದರೆ ರಾಜ್ಯಾಧ್ಯಕ್ಷರ ತೀರ್ಮಾನ ಮಾತ್ರ ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದಾಗಿನಿಂದ ಸಿಎಂ ಸೀಟ್ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇದೀಗ ಸಿಎಂ ಬಲದಾವಣೆ ಬಗ್ಗೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ವಿಪಕ್ಷ ನಾಯಕ ಆರ್ ಅಶೋಕ್ ಕೂಡಾ ನಾನು ಜ್ಯೋತಿಷಿ ಅಲ್ಲ, ಆದರೆ ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಆಗೋದು ಶತಸಿದ್ಧ ಎಂದು ಹೇಳಿದ್ದಾರೆ.ಸಿಎಂ ಬದಲಾವಣೆ ಮಾಡೋದರ ಚರ್ಚೆ ಬಗ್ಗೆ ಮದ್ದೂರಿನಲ್ಲಿ ವಿಪಕ್ಷ ನಾಯಕ ಮಾತನಾಡಿದ ಆರ್ ಅಶೋಕ್, ನಾನು ಈಗಾಗಲೇ ಸಿಎಂ ಬದಲಾವಣೆ ಬಗ್ಗೆ ಹೇಳಿದ್ದೇನೆ. ಆದರೆ ನಾನು ಜ್ಯೋತಿಷ್ಯದ ಗಿರಾಕಿ ಅಲ್ಲ ಡಿಕೆ ಶಿವಕುಮಾರ್, ಪರಮೇಶ್ವರ್ ಜ್ಯೋತಿಷ್ಯ ಕೇಳ್ತಾರೆ. ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದೆ. ನಾನು ವಿಪಕ್ಷ ನಾಯಕ ಆದ್ದರಿಂದ ಈ ಬಗ್ಗೆ ನನಗೂ ಮಾಹಿತಿ ಬರುತ್ತೆ. ಆದ್ದರಿಂದ ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಖಚಿತ. ಯಾರಿಗೆ ಸಿಎಂ ಚೇರ್ ಸಿಗುತ್ತೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ.