ನಲಪಾಡ್ ಕೈ ತಪ್ಪುತ್ತಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ..?
ಪ್ರಸ್ತುತ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಕ್ಷಾ ರಾಮಯ್ಯ ಅವರ ಅವಧಿ ಜನವರಿ 30ರಂದು ಮುಕ್ತಾಯವಾಗಲಿದೆ. ಇವರ ನಂತರದ ಅಧಿಕಾರವನ್ನು ನಲಪಾಡ್ಗೆ ಹಸ್ತಾಂತರಿಸಬೇಕಿತ್ತು. ಅದರೆ ಈಗ ನಲಪಾಡ್ ಹ್ಯಾಕರ್ ಶ್ರೀಕಿ ಜೊತೆ ಗುರುತಿಸಿ ಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೈ ತಪ್ಪುವ ಸಾಧ್ಯತೆಯಿದೆ ಎನ್ನಲಾಗಿದೆ. ಒಂದು ವೇಳೆ ನಲಪಾಡ್ಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಬಿಜೆಪಿಗೆ ವಾಗ್ಬಾಣವಾಗಲಿದೆ. ಜೊತೆಗೆ ಪಕ್ಷದ ಪ್ರತಿಷ್ಠೆಗೆ ಕುಂದುಂಟಾಗಲಿದೆ ಎಂದು ಈಗಾಗಲೇ ಕೆಲ ನಾಯಕರು ಹೈಕಮಾಂಡ್ಗೆ ಮಾಹಿತಿ ರವಾನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಲಪಾಡ್ ಪರವಿದ್ದಾರೆ. ಆದರೆ, ಉಳಿದ ನಾಯಕರಿಗೆ ನಲಪಾಡ್ ಬಗ್ಗೆ ಒಲವಿಲ್ಲ. ನಲಪಾಡ್ಗೆ ಅಧಿಕಾರಕೊಟ್ಟರೆ ಪಕ್ಷದ ಮರ್ಯಾದೆಗೆ ಕುಂದುಂಟಾಗಲಿದೆ. ಹೀಗಾಗಿ, ರಕ್ಷಾ ರಾಮಯ್ಯ ಅವರನ್ನೇ ಮುಂದುವರೆಸುವಂತೆ ರಾಜ್ಯ ಕೈ ಉಸ್ತುವಾರಿ ಸುರ್ಜೇವಾಲರ ಮೂಲಕ ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ಕೆಲ ನಾಯಕರು ಒತ್ತಾಯಿಸಿದ್ದಾರೆ.
ಹೀಗಾಗಿ, ಮೊಹಮ್ಮದ್ ನಲಪಾಡ್ಗೆ ಅಧಿಕಾರ ಮಿಸ್ ಆಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಆಪ್ತ ಮೂಲಗಳಿಂದ ಮಾಹಿತಿ ಸಿಕ್ಕಿದೆ.