ದೀಪಾವಳಿ(Diwali) ಹಬ್ಬದ ಸಂಭ್ರಮ ಆರಂಭವಾಗಿದೆ. ಈ ದಿನ ಎಣ್ಣೆ ಸ್ನಾನ ಮಾಡಲಾಗುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಎಣ್ನೆ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ಆದರೆ ದೇಹಕ್ಕೆ ಎಣ್ಣೆ ಸವರಿ ನಮ್ಮ ಸಾಂಪ್ರದಾಯಿಕ ಸ್ನಾನ ಮಾಡುವ ಪದ್ಧತಿ ಇಂದು ಸಂಪೂರ್ಣ ಕಣ್ಮರೆಯಾಗುತ್ತಿದೆ. ವರ್ಷಕ್ಕೊಮ್ಮೆ ಹೆಚ್ಚೆಂದರೆ ದೀಪಾವಳಿಯಂದು ಮಾತ್ರ ಎಣ್ಣೆ ಸ್ನಾನ(Oil Bathing) ಮಾಡುತ್ತಾರೆ. ಆದರೆ ನಮ್ಮ ಪೂರ್ವಜರು ಕೆಲವು ದಿನಗಳಲ್ಲಿ ಎಣ್ಣೆ ಸ್ನಾನ ಮಾಡಬೇಕು ಎಂದು ಹೇಳುತ್ತಾರೆ. ಪುರುಷರು ಬುಧವಾರ ಮತ್ತು ಶನಿವಾರದಂದು ಮತ್ತು ಮಹಿಳೆಯರು ಮಂಗಳವಾರ ಮತ್ತು ಶುಕ್ರವಾರದಂದು ಎಣ್ಣೆ ಸ್ನಾನ ಮಾಡಬಹುದು. ಭಾನುವಾರದಂದು ಎಣ್ಣೆ ಸ್ನಾನ ಮಾಡುವಂತಿಲ್ಲ ಎನ್ನಲಾಗುತ್ತದೆ.
ಎಣ್ಣೆ ಸ್ನಾನ ಯಾಕೆ ಮಾಡಬೇಕು?
ಎಣ್ಣೆ ಕೂಡ ನಮ್ಮ ದೇಹಕ್ಕೆ ಅತ್ಯಗತ್ಯವಾದ ವಸ್ತು ಎಂಬುದನ್ನ ಮರೆಯಬಾರದು. ಕೂದಲು ಮತ್ತು ಚರ್ಮ ಎರಡೂ ನೈಸರ್ಗಿಕವಾಗಿ ಆರೋಗ್ಯಯುತವಾಗಿರಲು ಎಣ್ಣೆ ಅತಿ ಅವಶ್ಯಕ. ಇವೆರಡೂ ನಮ್ಮ ತ್ವಚೆ ಮತ್ತು ಕೂದಲನ್ನು ರಕ್ಷಿಸುವ ಶಕ್ತಿ ಹೊಂದಿವೆ. ಹಾಗಾಗಿ, ವಾರಕ್ಕೆ ಎರಡು ಬಾರಿ ಎಣ್ಣೆ ಸ್ನಾನ ಮಾಡುವುದು ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ, ನಮ್ಮ ದೇಹದಲ್ಲಿ ಉಷ್ಣತೆಯ ಹೆಚ್ಚಳದಿಂದ ವಿವಿಧ ಸಮಸ್ಯೆಗಳು ಉಂಟಾಗುತ್ತವೆ. ಬೇಸಿಗೆಯ ದದ್ದುಗಳು, ಹೀಗೆ ಹಲಾರು ಸಮಸ್ಯೆಗಳು ಉಂಟಾಗುತ್ತದೆ. ಆಯಿಲ್ ಸ್ಕ್ರಬ್ ಇಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.