
ಬೆಂಗಳೂರು: ನಮ್ಮ ಮೆಟ್ರೋ (Namma Metro) ಟಿಕೆಟ್ ದರ (Ticket Price) ಏರಿಕೆ ಪ್ರಶ್ನಿಸಿ ಸನತ್ ಕುಮಾರ್ ಶೆಟ್ಟಿ ಎಂಬುವರು ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ (High Court) ವಜಾಗೊಳಿಸಿದೆ. “ಮೆಟ್ರೋ ಆಡಳಿತ ಮಂಡಳಿಗೆ ದರ ಏರಿಕೆ ಅಧಿಕಾರವಿದೆ. ತಜ್ಞರು ಕೈಗೊಳ್ಳುವ ತೀರ್ಮಾನಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಸಾಧ್ಯವಿಲ್ಲ. ದರ ನಿಗದಿ ಸಮಿತಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು” ಎಂದು ಸಿಜೆ ಎನ್.ವಿ. ಅಂಜಾರಿಯಾ, ನ್ಯಾ. ಕೆ.ವಿ.ಅರವಿಂದ್ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ನಮ್ಮ ಮೆಟ್ರೋದ ಪ್ರಯಾಣದರವನ್ನು ಏರಿಕೆಯಾಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿತ್ತು. ಫೆಬ್ರವರಿ 10 ರಂದು ಸೋಮವಾರ ಹಿಂದಿನ ವಾರಕ್ಕೆ ಹೋಲಿಸಿದರೆ 8.29 ಲಕ್ಷ ಮಂದಿ ಪ್ರಯಾಣಿಸಿದ್ದಾರೆ, ಸಂಖ್ಯೆಯಲ್ಲಿ 4ರಷ್ಟು ಕುಸಿತ ಕಂಡುಬಂದಿತ್ತು.ಏರೋ ಇಂಡಿಯಾ 2025 ಇರುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಪರಿಷ್ಕರಣೆಯ ನಂತರ ಕನಿಷ್ಠ ಟಿಕೆಟ್ ದರ 10 ರೂಪಾಯಿಗಳಾಗಿದ್ದು, ಗರಿಷ್ಠ ಟಿಕೆಟ್ ದರವನ್ನು ಶೇ. 50 ರಷ್ಟು ಹೆಚ್ಚಿಸಲಾಗಿದ್ದು, 60 ರೂಪಾಯಿಗಳಿಂದ 90 ರೂಪಾಯಿಗಳಿಗೆ ಏರಿಕೆಯಾಗಿದೆ.
ಪ್ರಯಾಣ ದರ ಏರಿಕೆಗೂ ಮೊದಲು ಫೆ.8 ರಂದು 8.07 ಲಕ್ಷ ಪ್ರಯಾಣಿಕರು ಪ್ರಯಾಣ ಫೆ.9ರಂದು ದರ ಏರಿಕೆ ಬಳಿಕ ಪ್ರಯಾಣಿಕರ ಸಂಖ್ಯೆ 6.23 ಲಕ್ಷಕ್ಕೆ ಇಳಿಕೆ ಫೆಬ್ರುವರಿ 10 ರಂದು ಪ್ರಯಾಣಿಕರ ಸಂಖ್ಯೆ 8.28 ಲಕ್ಷ ಫೆಬ್ರುವರಿ 11 ರಂದು ಪ್ರಯಾಣಿಕರ ಸಂಖ್ಯೆ 7.78 ಲಕ್ಷಕ್ಕೆ ಇಳಿಕೆಪ್ರಯಾಣಿಕರ ಸಂಖ್ಯೆ ಕುಂಠಿತವಾಗುತ್ತಿದ್ದಂತೆಯೇ ಸಹಜವಾಗಿ ಕಲೆಕ್ಷನ್ ಸಹ ಕಡಿಮೆಯಾಗಿದೆ. ದರ ಏರಿಕೆ ಮಾಡುವ ಮೊದಲು ಒಂದು ದಿನಕ್ಕೆ 2 ಕೋಟಿ ರೂಪಾಯಿಂದ 2.50 ಕೋಟಿ ರುಪಾಯಿ ಕಲೆಕ್ಷನ್ ಆಗುತ್ತಿತ್ತು. ದರ ಏರಿಕೆ ಬಳಿಕ ದಿನಕ್ಕೆ ಒಂದೂವರೆಯಿಂದ 2 ಕೋಟಿ ರೂ.ವರೆಗೆ ಮಾತ್ರ ಕಲೆಕ್ಷನ್ ಆಗುತ್ತಿದ್ಯಂತೆ.