
ಮಾಲೂರು: ನಮ್ಮಕರ್ನಾಟಕ ಸೇನೆಯ ಚೊಕ್ಕಂಡಹಳ್ಳಿ ಗ್ರಾಮ ಶಾಖೆಯ ಅಧ್ಯಕ್ಷರಾಗಿ ನವೀನ್ ಅವರನ್ನು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಎಸ್.ಎಂ.ರಾಜು ನೇಮಕ ಮಾಡಿದ್ದಾರೆ.ನಮ್ಮ ಕರ್ನಾಟಕ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾಕನಹಳ್ಳಿ ನಾಗರಾಜ್ ಅವರ ಆದೇಶದಂತೆ ಗ್ರಾಮ ಶಾಖೆಯ ಅಧ್ಯಕ್ಷರಾಗಿ ನವೀನ್ ಅವರನ್ನು ನೇಮಕ ಮಾಡಿ ಗುರುತಿನ ಐಡಿ ಕಾರ್ಡ್, ನೇಮಕ ಆದೇಶ ಪತ್ರ ನೀಡಿ ಕನ್ನಡ ನೆಲ, ಜಲ ಹಾಗೂ ಸಂಘಟನೆಗೆ ಹೆಚ್ಚು ಒತ್ತು ನೀಡುವಂತೆ ಸೂಚಿಸಲಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ವಿ.ಹನುಮಂತಪ್ಪ ನಮ್ಮ ಕರ್ನಾಟಕ ಸೇನೆ ರಾಜ್ಯ ಉಪಾಧ್ಯಕ್ಷ ಆಟೋಶ್ರೀನಿವಾಸ್, ಜಿಲ್ಲಾ ಕಾರ್ಯಾಧ್ಯಕ್ಷ ಆಂಜಿಕನ್ನಡಿಗ, ತಾಲ್ಲೂಕು ಅಧ್ಯಕ್ಷ ಮಾದನಹಟ್ಟಿ ರವಿಕುಮಾರ್, ಪ್ರದಾನಕಾರ್ಯದರ್ಶಿ, ಕೆ.ಎನ್.ಜಗದೀಶ್, ನಗರಾಧ್ಯಕ್ಷ ಜ್ವಾಲಾಮುಖಿ ಸತೀಶ್, ಕರವೇ ಎ.ಎನ್.ದಯಾನಂದ್, ಮಾದನಹಟ್ಟಿ ಅಶೋಕ್, ನಂದೀಶ್, ಸೇರಿದಂತೆ ಹಲವಾರು ಕಾರ್ಯಕರ್ತರು ಹಾಜರಿದ್ದರು.