ಇತ್ತೀಚಿನ ಸುದ್ದಿರಾಜಕೀಯ

ನಮಗೆ ಮತದಾರರೇ ದೇವರು: ಸಿಎಂ ಸಿದ್ದರಾಮಯ್ಯ

ಇಂದು ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಸ್ವಾಭಿಮಾನಿ ಸಮಿತಿಯ ಆಶ್ರಯದಲ್ಲಿ ನಡೆದ ಬೃಹತ್‌ ಜನಕಲ್ಯಾಣ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜೆಡಿಎಸ್ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ದೇವೇಗೌಡರು ಸಿದ್ದರಾಮಯ್ಯನ್ನ ಹಣಕಾಸು ಮಂತ್ರಿ ಮಾಡಿದೆ, ಆಮೆಲೆ ಬೆಳ್ಕಂಡ ಅಂತಾರೆ. ಆದರೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದವರು ನಾವು, ಅವ್ರು ನಮ್ಮನ್ನು ಬೆಳಸಲಿಲ್ಲ ಎಂದರು. ನಾವು ನಿಮ್ಮನ್ನ 1994 ರಲ್ಲಿ ಮುಖ್ಯಮಂತ್ರಿ ಮಾಡೋಕೆ ನಿಮ್ಮ ಜೊತೆ ನಿಲ್ಲದೇ ಹೋಗಿದ್ರೆ ನೀವು ಸಿಎಂ ಆಗ್ತಾ ಇರಲಿಲ್ಲ ಎಂದರು.

ದೇವೇಗೌಡರು ಜೆಡಿಎಸ್‌ನಲ್ಲಿ ಯಾರನ್ನೂ ಬೆಳೆಯಲು ಬಿಟ್ಟಿಲ್ಲ. ಬಿಎಲ್ ಶಂಕರ್, ವೈಕೆ ರಾಮಯ್ಯ ಅವರ ಮನೆ ಮಕ್ಕಳಂತಿದ್ರು, ಆದ್ರೂ ಅವರನ್ನು ಬೆಳೆಸಿಲ್ಲ. ನಮಗೆಲ್ಲಾ ರಾಜಕೀಯ ವನವಾಸ ಮಾಡಿಸಿದ್ರು, ಈಗ ತಮ್ಮ ವನವಾಸವನ್ನು ತಾವೇ ಅನುಭವಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದೆ. ಅದರಲ್ಲೂ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಪುತ್ರ ಭರತ್‌ ಬೊಮ್ಮಾಯಿಯನ್ನು ಗೆಲ್ಲಿಸಿಕೊಳ್ಳಲು ಆಗಲಲಿಲ್ಲ ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಕೆಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್‌ ಕುಮಾಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂದು ಸಿಎಂ ಕುಟುಕಿದರು. ಹಾಗೆಯೇ ಸಂಡೂರಿನಲ್ಲೂ ಕೂಡ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ಗೆಲುವು ಸಾಧಿಸಿದ್ದಾರೆ ಎಂದರು.

ಬಿಜೆಪಿ, ಜೆಡಿಎಸ್‌ ಬಡವರಿಗೆ ಮೋಸ ಮಾಡುವಂತಹ ಕೆಲಸವನ್ನು ಮುಂದುವರೆಸಿವೆ. ಬಡವರಿಗೆ 7 ಕೆ.ಜಿ. ಅಕ್ಕಿ ಕೊಟ್ಟಿದ್ದು ನಾವು. ಬಿಜೆಪಿಯವರು ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಅಕ್ಕಿಯನ್ನು 5 ಕೆ.ಜಿಗೆ ಇಳಿಸಿದರು. ಇಲ್ಲೇ ಗೊತ್ತಾಗುತ್ತದೆ ಬಡವರಿಗೆ ಯಾರು ಅನ್ಯಾಯ ಮಾಡುತ್ತಿದ್ದಾರೆ. ಅವರಿಗೆ ಬಿಪಿಎಲ್‌ ಕಾರ್ಡ್‌ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಅಂತಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಸಿಎಂ, ಯಾವುದೇ ಕಾರಣಕ್ಕೂ ನಮ್ಮ ಐದು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ನಮ್ಮದು ಬಡವರು, ಹಿಂದುಳಿದ ಪರ ಇರುವ ಪಕ್ಷವಾಗಿದೆ. ಆದ್ದರಿಂದ ಮುಂದಿನ ಬಾರಿಯೂ ಕೂಡ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಇಂದಿನ ಹಾಸನ ಸಮಾವೇಶ ಹೊಸ ಇತಿಹಾಸನ ಸೃಷ್ಟಿಸಲಿದೆ. ಹಾಸನದಲ್ಲಿ ಏಳು ವಿಧಾನ ಸಭಾ ಕ್ಷೇತ್ರ ಇವೆ. ಮುಂದಿನ ಬಾರಿ ಏಳಕ್ಕೆ ಏಳು ಗೆದ್ದೇ ಗೆಲ್ತೀವಿ ಅನ್ನೊ ಮಾತು ಹೇಳ್ತಿನಿ. ನನಗೆ ಅವರ ಮೇಲೆ ದ್ವೇಷ ಇಲ್ಲ, ಅವರಿಗೆ ಆರೋಗ್ಯ ಕೊಡಲಿ ಇನ್ನು ರಾಜಕಾರಣ ಮಾಡಲಿ. ಆದರೆ ರಾಜಕೀಯವಾಗಿ ಮುಗಿಸ್ತಿನಿ ಅಂತ ದ್ವೇಷದ ರಾಜಕಾರಣ ಮಾಡಬೇಡಿ. ಮುಂದಿನ ಚುನಾವಣೆಯಲ್ಲಿ ಇಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ತೀವಿ ಅದಕ್ಕಾಗೆ ಈ ಸಮಾವೇಶ ಎಂದು ಸಿದ್ದರಾಮಯ್ಯ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button