ರಾಜಕೀಯಸುದ್ದಿ

ನನ್ನ ಬಗ್ಗೆ ಯಾವುದೇ ರಹಸ್ಯ ಇದ್ದರೂ ಬಯಲು ಮಾಡಲಿ: ಯತ್ನಾಳ್​ಗೆ HD Kumaraswamy ಸವಾಲು..!

ವಿಜಯಪುರ: ಸಿಂದಗಿ, ಹಾನಗಲ್​ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ(BY Election) ಹೊಸ್ತಿಲಲ್ಲಿ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ(HD Kumaraswamy) ಅವರ ರಹಸ್ಯ ಇದೆ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ (Basangouda Patil Yatnal )ಹೇಳಿಕೆಗೆ ಎಚ್​ಡಿಕೆ ಸವಾಲು ಹಾಕಿದರು. ನನ್ನ ಚರಿತ್ರೆ ಇದ್ದರೆ, ತಂದು ಬಿಡಿ. ನನ್ನ ಬಗ್ಗೆ ಏನೇನು ಗೊತ್ತಿದೆ ಎಲ್ಲಾನು ತಂದು ಬಿಡಿ. ಪಾಪ ನನ್ನ ಜೊತೆಗೆ ಜೆಡಿಎಸ್ ನಲ್ಲಿ ಎರಡು ವರ್ಷ ಇದ್ದರು. ಅದಕ್ಕಾಗಿ ನನ್ನ ಬಗ್ಗೆ ಇರುವ ಚರಿತ್ರೆ ತರುವಂತೆ ಯತ್ನಾಳ್​​ಗೆ ಕುಮಾರಸ್ವಾಮಿ ಸವಾಲು ಹಾಕಿದರು. ಇನ್ನು RSS ವಿರೋಧಿಸುವ ಮೂಲಕ ಮುಸ್ಲಿಮರ ಮತಗಳನ್ನು ಸೆಳೆಯಲು ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ ಎಂದ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ (bs yediyurappa) ಹೇಳಿಕೆಗೂ ಪ್ರತಿಯಾಗಿ ಎಚ್​ಡಿಕೆ ವಾಗ್ಬಾಣ ಬಿಟ್ಟರು.

ಬಿಜೆಪಿಯವರು ಸಮಯ ಸಾಧಕರು

ನಾವು ಹಿಂದುಗಳು ಅಲ್ವೇ, ಹಿಂದುತ್ವ ಹೆಸರಿನಲ್ಲಿ ಮತಕ್ಕಾಗಿ ಬಿಎಸ್​​ವೈ ರಾಜಕಾರಣ ಮಾಡ್ತಾರೆ. ಹೆಸರಿಗೆ ಮಾತ್ರ ಹಿಂದುತ್ವ ಹೆಸರು ಹೇಳ್ತಾರೆ. ಒಂದು ಕಡೆಗೆ ಮುಸ್ಲಿಂರನ್ನು ದೇಶದಿಂದ ಹೊರಗಡೆಗೆ ಇಡಲು ಹೇಳ್ತಾರೆ. ಮತ್ತೊಂದೆಡೆ ಮುಸ್ಲಿಂ ನಮ್ಮೊಂದಿಗೆ ಬರುಬೇಕು ಎನ್ನುತ್ತಾರೆ. ಬಿಜೆಪಿಯವರು ಸಮಯ ಸಾಧಕರು, ಅವರಿಗೆ ಯಾವ ಯಾವ ಸಂದರ್ಭದಲ್ಲಿ ಏನನ್ನು ಹೇಳಬೇಕು ಎಂಬುವುದು ಗೊತ್ತಿದೆ. ಬಿಜೆಪಿಯವರು ಹೇಳಿದ್ದು ಮರೆತು ಹೋಗ್ತಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಕಟೀಲ್​ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತಿಲ್ಲ

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಡ್ರಗ್​ ಪೆಡ್ಲರ್ ಎಂಬ ನಳೀನ್ ಕುಮಾರ ಕಟೀಲ್ ಹೇಳಿಕೆ ವಿಚಾರವಾಗಿ ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ ಕಿಡಿಕಾರಿದರು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರು ಹತಾಶೆಯಲ್ಲಿದ್ದಾರೆ. ಬಿಜೆಪಿ ಅಧ್ಯಕ್ಷ ಅದ್ರು ಅವರಿಗೆ ಮಾಧ್ಯಮದಲ್ಲಿ ಮತ್ತು ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತಿಲ್ಲ . ಹಾಗಾಗಿ ಹತಾಶವಾಗಿ  ತಾನು ಸುದ್ದಿಯಲ್ಲಿ ಇರಬೇಕು ಅಂತ ಈ ರೀತಿಯ ಹೇಳಿಕೆ ನೀಡ್ತಿದ್ದಾರೆ. ಹತಾಶವಾಗಿ ಕಟೀಲ್ ಪ್ರಜ್ಞೆ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎಂದು ಕುಹಕವಾಡಿದರು.

Related Articles

Leave a Reply

Your email address will not be published. Required fields are marked *

Back to top button