ಭಾರತ(India) ಚಿತ್ರರಂಗ ಕಂಡ ದಂತಕಥೆ(Legend), ಆಂಗ್ರಿ ಯಂಗ್ ಮ್ಯಾನ್ (Angry young man) ಅಮಿತಾಭ್ ಬಚ್ಚನ್ (Amitabh Bachchan). ನಟನೆಯಲ್ಲಿ ಅವರಿಗೆ ಅವರೇ ಸಾಟಿ. ಒಬ್ಬ ವ್ಯಕ್ತಿ ತಮ್ಮ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಹದೋ ಅದೆಲ್ಲವನ್ನೋ ಬಿಗ್ ಬಿ ಮಾಡಿದ್ದಾರೆ. ಭಾರತೀಯ ಚಿತ್ರರಂಗದ ದಿಗ್ಗಜ ನಟ ಅಮಿತಾಭ್ ಬಚ್ಚನ್ ಅವರು ಅಕ್ಟೊಬರ್ 11ರಂದು 79ನೇ ಜನ್ಮದಿನ(Birthday) ಆಚರಿಸಿಕೊಂಡಿದ್ದರು.
ದಣಿಯರಿಯದ ಚಿರಯುವಕನಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ಶುಭಾಶಯ ಕೋರಿದ್ದದರು. ಈ ವಯಸ್ಸಿನಲ್ಲೂ ಹದಿಹರೆಯದ ಯುವಕನಂತೆ ಆಕ್ಟೀವ್ ಆಗಿದ್ದಾರೆ ಅಮಿತಾಭ್ ಬಚ್ಚನ್. ಈಗಲೂ ಅವರಿಗೆ ಒಂದು ರೇಂಜ್ ಇದೆ. ಈಗಲೂ ಬಹುಬೇಡಿಕೆ ನಟ, ಹೊಸ ಹೀರೋಗಳಿಗೆ ಸವಾಲೊಡ್ಡುವ ಚಾರ್ಮ್(Charm) ಅಮಿತಾಬ್ನಲ್ಲಿದೆ. ಆದರೆ ಸಲ್ಮಾನ್ ಖಾನ್(Salman Khan) ತಂದೆ ಸಲೀಂ ಖಾನ್ (Salim Khan) ಅಮಿತಾಭ್ ಬಚ್ಚನ್ ಈಗ ನಿವೃತ್ತಿ(Retire) ಹೊಂದಬೇಕು ಎಂದು ಹೇಳಿರುವುದು ಸಾಮಾಜಿಕ ಜಾಲತಾಣ(Social Media) ದಲ್ಲಿ ಸಖತ್ ವೈರಲ್ ಆಗಿದೆ. ಮೊದಲಿಗೆ ಯಾಕೆ ಹೀಗೆ ಹೇಳಿದ್ದಾರೆ ಅಂತ ಅಭಿಮಾನಿಗಳು ಶಾಕ್ ಆಗಿದ್ರು. ಬಳಿಕ ಸಲೀಂ ಖಾನ್ ಕೊಟ್ಟ ವಿವರಣೆ ಕಂಡು ಸುಮ್ಮನಾಗಿದ್ದಾರೆ.
ಅಮಿತಾಭ್ ಬಚ್ಚನ್ ಅವರ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಬಹುದೋ ಅದೆಲ್ಲವನ್ನೂ ಮಾಡಿದ್ದಾರೆ. ಒಬ್ಬ ವ್ಯಕ್ತಿ ಅವರಿಗಾಗಿಯೇ ಜೀವನದ ಕೆಲವು ವರ್ಷಗಳನ್ನಾದರೂ ಮೀಸಲಿಡಬೇಕು ಎಂದು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಹೇಳಿದ್ದಾರೆ. ಅಮಿತಾಭ್ ಬಚ್ಚನ್ ತುಂಬಾ ಸಾಧಿಸಿದ್ದಾರೆ. ಚಿತ್ರರಂಗದಿಂದ ಈಗ ಅವರು ನಿವೃತ್ತಿಯಾಗಲಿ. ಈಗ ಅಮಿತಾಭ್ ಬಚ್ಚನ್ ಚಿತ್ರರಂಗದ ಓಟದಿಂದ ಹಿಂದೆ ಸರಿಯಬೇಕು, ನಿವೃತ್ತಿ ಹೊಂದಬೇಕು ಎಂದು ಸಲೀಂ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.