ಸಿನಿಮಾಸುದ್ದಿ

ನಡೆಯಬೇಕಿದ್ದ Anushka Shetty ಮದುವೆ ನಿಲ್ಲಿಸಿದ್ದರಂತೆ ಪ್ರಭಾಸ್​..!

ಟಾಲಿವುಡ್​ ಡಾರ್ಲಿಂಗ್​ ಪ್ರಭಾಸ್​ ಅವರು ಇಂದು 42ನೇ ಹುಟ್ಟುಹಬ್ಬ ಸಂಭ್ರಮ. ತೆಲುಗು ಸಿನಿರಂಗದ ಮೋಸ್ಟ್​ ಎಲಿಜಿಬಲ್ ಬ್ಯಾಚುಲರ್​ ಪ್ರಭಾಸ್​ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹೆಸರು ತಂದುಕೊಟ್ಟುದ್ದು ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಸಿನಿಮಾಗಳು. ಹೌದು, ಬಾಹುಬಲಿ ಪಾತ್ರದಲ್ಲಿ ಮಿಂಚಿದ ಪ್ರಭಾಸ್​ ಈಗ ನ್ಯಾಷನಲ್​ ಸ್ಟಾರ್​. ಈ ಸಿನಿಮಾದಲ್ಲಿ ಪ್ರಭಾಸ್​ ಅವರಿಗೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ.

ಹೌದು, ಈ ಜೋಡಿ ಟಾಲಿವುಡ್​ನ ಬಹುತೇಕರ ಹಾಟ್​ ಫೇವರಿಟ್​. ಇವರು ನಿಜ ಜೀನವದಲ್ಲೂ ಮದುವೆಯಾದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಈಗಲೂ ಅಭಿಮಾನಿಗಳು ಇಷ್ಟ ಪಡುತ್ತಾರೆ. ಏಕೆಂದರೆ ಈ ಇಬ್ಬರೂ ಇನ್ನೂ ಮದುವೆಯಾಗಿಲ್ಲ. ಸಿಂಗಲ್ಲಾಗಿರುವ ಇವರು ಯಾವಾಗ ಮಿಂಗಲ್ ಆಗ್ತಾರೆ ಅಂತಾ ಫ್ಯಾನ್ಸ್​ ಕಾಯುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ನಟಿಸಿದ ಸಿನಿಮಾಗಳೂ ಸಹ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಿವೆ.

ಈ ಜೋಡಿ ಇಂದಿಗೂ ತಾವು ಒಳ್ಳೆಯ ಸ್ನೇಹಿತರು ಎಂದೇ ಹೇಳಿಕೊಳ್ಳುತ್ತಾರೆ. ಈ ಹಿಂದೊಮ್ಮೆ ಅನುಷ್ಕಾ ಶೆಟ್ಟಿ ಸ್ನೇಹಿತ ಪ್ರಭಾಸ್​ ಬಗ್ಗೆ ಕೊಟ್ಟಿದ್ದ ಹೇಳಿಕೆ ಸಖತ್ ವೈರಲ್​ ಆಗುತ್ತು. ಪ್ರಭಾಸ್​ ನನ್ನ 3 AM ಫ್ರೆಂಡ್​ ಎಂದಿದ್ದರು. ಇನ್ನು ಪ್ರಭಾಸ್​ ಅವರು ಈ ಹಿಂದೆ ಅನುಷ್ಕಾ ಶೆಟ್ಟಿ ಅವರ ಮದುವೆ ನಿಲ್ಲಿಸಿದ್ದರಂತೆ. ಈ ವಿಷಯ ತುಂಬಾ ಕಡಿಮೆ ಜನರಿಗೆ ಗೊತ್ತು.

Related Articles

Leave a Reply

Your email address will not be published. Required fields are marked *

Back to top button