ಕ್ರೈಂ

ನಟಿ ರನ್ಯಾ ರಾವ್ ಸ್ಮಗ್ಲಿಂಗ್ ಕೇಸ್ ಪ್ರೋಟೋಕಾಲ್ ದುರ್ಬಳಕೆ ಬಗ್ಗೆ ಸಿಐಡಿ ತನಿಖೆ ಆದೇಶ ವಾಪಸ್‌ ಅನುಮಾನ ಮೂಡಿಸಿದ ಸರ್ಕಾರದ ನಡೆ

ಬೆಂಗಳೂರು: ಚಿನ್ನ ಸ್ಮಗ್ಲಿಂಗ್‌ ಕೇಸ್‌ನಲ್ಲಿಬಂತರಾಗಿರುವ ನಟಿ ರನ್ಯಾ ರಾವ್‌ ಪ್ರೋಟೊಕಾಲ್‌ ದುರ್ಬಳಕೆಯಲ್ಲಿ ಪೊಲೀಸ್‌ ವೈಫಲ್ಯದ ಕುರಿತು ಸಿಐಡಿ ತನಿಖೆ ಆದೇಶವನ್ನು ರಾಜ್ಯ ಸರಕಾರ ವಾಪಸ್‌ ಪಡೆದಿದೆ. ಸರ್ಕಾರದ ಈ ನಡೆ ಅನುಮಾನಗಳಿಗೆ ಕಾರಣವಾಗಿದೆ.ಪ್ರೋಟೊಕಾಲ್‌ ನೆರವು ಪಡೆದು ಆರೋಪಿ ರನ್ಯಾ ಚಿನ್ನ ಸ್ಮಗ್ಲಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಡಿಆರ್‌ಐ ನ್ಯಾಯಾಲಯದಲ್ಲಿ ಪುನರುಚ್ಚರಿಸುತ್ತಿದೆ. ಈ ಬೆಳವಣಿಗೆಗಳ ನಡುವೆಯೇ ಪ್ರೋಟೊಕಾಲ್‌ ಪೊಲೀಸ್‌ ವೈಫಲ್ಯದ ಸಿಐಡಿ ತನಿಖೆ ವಾಪಸ್‌ ಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಪ್ರೋಟೊಕಾಲ್‌ ದುರ್ಬಳಕೆ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ಅವರನ್ನು ತನಿಖಾಕಾರಿಯನ್ನಾಗಿ ನೇಮಿಸಲಾಗಿದ್ದು, ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ಹೀಗಾಗಿ, ಸಿಐಡಿ ತನಿಖೆ ಆದೇಶ ಹಿಂಪಡೆಯುತ್ತಿರುವುದಾಗಿ ಸರಕಾರ ತಿಳಿಸಿದೆ.

ವಿಐಪಿ ಪ್ರೋಟೊಕಾಲ್‌ ವ್ಯವಸ್ಥೆ ರಕ್ಷಣೆ ಪಡೆದು ಆರೋಪಿ ನಟಿ ರನ್ಯಾ ರಾವ್‌ ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಚಿನ್ನ ಸ್ಮಗ್ಲಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯವು(ಡಿಆರ್‌ಐ) ಬುಧವಾರ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ತಿಳಿಸಿತು.ಚಿನ್ನ ಸ್ಮಗ್ಲಿಂಗ್‌ ಕೇಸ್‌ನಲ್ಲಿಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಪ್ರಬಲ ಆಕ್ಷೇಪಣೆ ಸಲ್ಲಿಸಿರುವ ಡಿಆರ್‌ಐ ಪರ ವಿಶೇಷ ಸರಕಾರಿ ಅಭಿಯೋಜಕ ಮಧು ಎನ್‌. ರಾವ್‌, ಆರೋಪಿ ರನ್ಯಾ ಮಾಡಿರುವ ಚಿನ್ನ ಸ್ಮಗ್ಲಿಂಗ್‌ ತಂತ್ರವನ್ನು ನ್ಯಾಯಾಲಯದ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟರು.ಆರೋಪಿ ರನ್ಯಾ ದುಬೈನಿಂದ ಚಿನ್ನ ಸ್ಮಗ್ಲಿಂಗ್‌ ಮಾಡಿಕೊಂಡು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದರು. ರಾಜ್ಯದ ವಿಐಪಿ ಪ್ರೋಟೊಕಾಲ್‌ ಅಧಿಕಾರಿಗಳ ನೆರವಿನಿಂದ ಇಮ್ಮಿಗ್ರೇಶನ್‌ ಹಾಗೂ ವಿಐಪಿ ಮಾರ್ಗದ ಮುಖೇನ ಹೊರಗಡೆ ಬರುತ್ತಿದ್ದರು. ಇಮ್ಮಿಗ್ರೇಶನ್‌ ಬಳಿ ತೆರಳುತ್ತಿದ್ದ ಪ್ರೋಟೊಕಾಲ್‌ ಸಿಬ್ಬಂದಿ ರನ್ಯಾರ ಲಗೇಜ್‌ ಪಡೆದು ಫಾಸ್ಟ್‌ ಟ್ರ್ಯಾಕ್‌ ಸೆಕ್ಯೂರಿಟಿ ವಿನಾಯಿತಿ ಪಡೆದು ಹೊರ ಕರೆತರುತ್ತಿದ್ದರು. ಈ ಮೂಲಕ ರನ್ಯಾ ತಪಾಸಣೆಯಿಂದ ತಪ್ಪಿಸಿಕೊಂಡು ಸ್ಮಗ್ಲಿಂಗ್‌ ಮಾಡುತ್ತಿದ್ದರು ಎಂದು ಎಸ್‌ಪಿಪಿ ಮಧುರಾವ್‌ ನ್ಯಾಯಾಲಯಕ್ಕೆ ವಿವರಿಸಿದರು.ಆರೋಪಿ ರನ್ಯಾ ಕಸ್ಟಡಿ ವೇಳೆ ತನಿಖೆಗೆ ಸಹಕರಿಸುತ್ತಿಲ್ಲ. ಚಿನ್ನ ಸ್ಮಗ್ಲಿಂಗ್‌ ಜಾಲದ ಹಿಂದೆ ದೊಡ್ಡ ಸಿಂಡಿಕೇಟ್ ಭಾಗಿಯಾಗಿರುವ ಶಂಕೆಯಿದೆ. ಆರೋಪಿಗೆ ಅಂತಾರಾಷ್ಟ್ರೀಯ ಸ್ಮಗ್ಲಿಂಗ್‌ ದಂಧೆ ಸಂಪರ್ಕದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಭಾರಿ ಪ್ರಮಾಣದ ಚಿನ್ನ ಕಳ್ಳಸಾಗಣೆ ನಡೆದಿರುವ ಈ ಪ್ರಕರಣದಲ್ಲಿಹವಾಲಾ ದಂಧೆ ನಡೆದಿದೆ. ಹೀಗಾಗಿ, ಪ್ರಕರಣದ ಸಮಗ್ರ ತನಿಖೆ ನಡೆಯಬೇಕಿದ್ದು, ಈ ಹಂತದಲ್ಲಿಜಾಮೀನು ನೀಡಬಾರದು ಎಂದು ಎಸ್‌ಪಿಪಿ ವಾದಿಸಿದರು.ನಟಿ ರನ್ಯಾ ಬಳಿ ದುಬೈ ನಿವಾಸಿ ಎಂಬ ಗುರುತಿನ ಚೀಟಿ ಪತ್ತೆಯಾಗಿದ್ದು, ಜಾಮೀನು ನೀಡಿದರೆ ದೇಶ ಬಿಟ್ಟು ಹೋಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ಪ್ರಭಾವಿ ಆಗಿರುವ ಆರೋಪಿ ಸಾಕ್ಷ್ಯ ನಾಶಪಡಿಸಬಹುದು. ಸಾಕ್ಷಿಗಳಿಗೆ ಬೆದರಿಕೆವೊಡ್ಡಬಹುದು ಎಂದು ಎಸ್‌ಪಿಸಿ ನ್ಯಾಯಾಲಯಕ್ಕೆ ತಿಳಿಸಿದರು.


Related Articles

Leave a Reply

Your email address will not be published. Required fields are marked *

Back to top button