ದೆಹಲಿ ಗಣರಾಜ್ಯೋತ್ಸವ ಪರೇಡ್ನ ಎನ್ಸಿಸಿ ನೇತೃತ್ವ ಮೈಸೂರು ಚಹಾ ಮಾರಾಟಗಾರರ ಮಗಳ ಹೆಗಲಿಗೆ!
ಮೈಸೂರು: ನಾಳಿದ್ದು ಬುಧವಾರ ದೆಹಲಿಯಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ (73rd Republic day) ವೇಳೆ ಪರೇಡ್‌ನಲ್ಲಿ ಮೈಸೂರಿನ ವಿದ್ಯಾರ್ಥಿನಿಗೆ NCC ನೇತೃತ್ವ ವಹಿಸುವ ಜವಾಬ್ದಾರಿ ಒಲಿದುಬಂದಿದೆ. ಮೈಸೂರಿನ ಮಹಾರಾಣಿ ಕಾಲೇಜಿನ BSc ವಿದ್ಯಾರ್ಥಿನಿ ಪ್ರಮೀಳಾ ಕುನ್ವರ್ NCC ತಂಡದ ನೇತೃತ್ವ ವಹಿಸಲಿದ್ದಾರೆ. ಮಹಾರಾಣಿ ಕಾಲೇಜಿನ ಬಿಎಸ್‌ಸಿ ವಿದ್ಯಾರ್ಥಿನಿ ಪ್ರಮೀಳಾ ಕುವರ್ ಮೈಸೂರಿನ ವಿವಿ ಮೊಹಲ್ಲಾದ ನಿವಾಸಿ. ಎನ್ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿರುವ ಪ್ರಮೀಳಾ ಅವರು ಪ್ರತಾಪ್ ಸಿಂಗ್ ಪುಷ್ಪಾ ಕುವರ್ ಅವರ ಪುತ್ರಿ. ಅಂದಹಾಗೆ, ಪ್ರತಾಪ್ ಸಿಂಗ್ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. 2018 ದಸರಾ ಮೆರವಣಿಗೆಯಲ್ಲೂ ಪ್ರಮೀಳಾ NCC ತಂಡದ ನೇತೃತ್ವ ವಹಿಸಿದ್ದರು.
73ನೇ ಗಣರಾಜ್ಯೋತ್ಸವ: ಈ ಬಾರಿಯ ಪರೇಡ್ನ ವಿಶೇಷತೆಗಳೇನು? ಗಣರಾಜ್ಯೋತ್ಸವ ದಿನಾಚರಣೆಯ ಪಥಸಂಚಲನದ ರಿಹರ್ಸಲ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿದೆ. ವಿಜಯ್ ಚೌಕ್ ನಿಂದ ಆರಂಭವಾಗುವ ಪರೇಡ್ ನೇಷನಲ್ ಸ್ಟೇಡಿಯಂ ಪ್ರವೇಶಿಸಲಿದೆ. ಫುಲ್ ಡ್ರೆಸ್ ರಿಹರ್ಸಲ್ ಇದಾಗಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ರೈಲು, ಮೆಟ್ರೋ ಹಾಗೂ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ರೈಲ್ವೇ ಮಾಹಿತಿಯಂತೆ ಜನವರಿ 23 ಹಾಗೂ 26 ರಂದು ಹಲವು ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಅದೇ ರೀತಿ ರಸ್ತೆ ಸಂಚಾರದಲ್ಲಿ ಕೂಡ ನಿರ್ಬಂಧಗಳನ್ನು ಹೇರಲಾಗಿದೆ. ವಿಜಯ್ ಚೌಕ್ನಿಂದ ಇಂಡಿಯಾ ಗೇಟ್ ವರೆಗಿನ ರಾಜ್ಪಥ್ ಮಾರ್ಗದಲ್ಲಿ ಪಥಸಂಚಲನ ರಿಹರ್ಸಲ್ ಮುಗಿಯುವ ವರೆಗೂ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.
ಪಥಸಂಚಲನ ಹಿನ್ನೆಲೆಯಲ್ಲಿ ಪೊಲೀಸ್ ಜಂಟಿ ಆಯುಕ್ತ ವಿವೇಕ್ ಕಿಶೋರ್ ಕೊರೊನಾ ನಿಯಮ ಪಾಲನೆಯ ಕುರಿತಾಗಿಯೂ ಹೇಳಿಕೆ ನೀಡಿದ್ದಾರೆ. ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ವೈದ್ಯಕೀಯ ತಂಡಗಳು ಇರಲಿವೆ. ಜನವರಿ 26ರ ಪಥಸಂಚಲನ ವೇಳೆಯಲ್ಲಿ ಇವು ಕಾರ್ಯನಿರ್ವಹಿಸಲಿವೆ. ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಿರುವ ವ್ಯಕ್ತಿಗೆ ವೈದ್ಯಕೀಯ ನೆರವು ಬೇಕು ಎಂದು ಆದರೂ ವೈದ್ಯಕೀಯ ತಂಡವು ತಕ್ಷಣವೇ ಅವರಿಗೆ ಅಗತ್ಯಸೇವೆ ನೀಡಲಿದೆ ಎಂದು ಹೇಳಲಾಗಿದೆ.