ಸುದ್ದಿ
ದುಬಾರಿ ಬೆಕ್ಕು ಕಳುವಾಗಿದೆ.. ಹುಡುಕಿ ಕೊಟ್ಟವರಿಗೆ 35 ಸಾವಿರ ಬಹುಮಾನ..!
ಬೆಂಗಳೂರು: ನಗರದ ತಿಲಕನಗರ ಪೊಲೀಸ್ ಠಾಣೆಯಲ್ಲಿ ಬೆಕ್ಕು ಕಳ್ಳತನವಾಗಿದೆ ಎಂದು ಎಫ್ಐಆರ್ ದಾಖಲಾಗಿದೆ.
ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬುವವರ ಮನೆಯ ದುಬಾರಿ ಬೆಲೆಯ ಬೆಕ್ಕು ಜನವರಿ 15ರಂದು ನಾಪತ್ತೆಯಾಗಿದೆ.
ಯಾರೋ ದುಷ್ಕರ್ಮಿಗಳು ಮೇಲ್ಛಾವಣಿಯಿಂದ ಬಂದು ಬೆಕ್ಕನ್ನು ಕಳ್ಳತನ ಮಾಡಿದ್ದಾರೆ ಎಂದು ಮಿಸ್ಬಾ ಶರೀಫ್ ದೂರು ನೀಡಿದ್ದು, ಬೆಕ್ಕು ಹುಡುಕಿಕೊಟ್ಟರೆ 35 ಸಾವಿರ ರೂಪಾಯಿ ಕೊಡುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ.
ಸದ್ಯ ತಿಲಕನಗರ ಠಾಣೆಯಲ್ಲಿ ಬೆಕ್ಕು ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಾಗಿದೆ.