ಕಲಬುರಗಿ: ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಆ ಮನೆಗಳಲ್ಲಿ ದೀಪಾವಳಿ ಹಬ್ಬ (Deepavali Festival) ಸಂಭ್ರಮ ಇರಬೇಕಿತ್ತು. ದೀಪ ಬೆಳಗಿ ಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆ ಆಗಿತ್ತು. ಮಳೆ ನೀರು (Rain Water) ತುಂಬಿದ್ದ ತಗ್ಗು ಗುಂಡಿಯಲ್ಲಿ ಇಳಿದ ಮೂವರು ಪುಟ್ಟ ಬಾಲಕರು (THREE BOYS) ಬಾರದ ಲೋಕಕ್ಕೆ ಹೋಗಿದ್ದಾರೆ. ಮಕ್ಕಳನ್ನ ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಮನಕಲಕುವ ಘಟನೆಗೆ ಕಲಬುರಗಿ ನಗರದ ಮಹಾಲಕ್ಷ್ಮಿ ಲೇಔಟ್ (Mahalakshmi Layout) ಸಾಕ್ಷಿಯಾಗಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿಂದು ದೀಪಾವಳಿ ಹಬ್ಬದ ಸಡಗರ ಸಂಭ್ರಮ ಬಿಟ್ಟು ಸ್ಮಶಾನಮೌನ ಆವರಿಸಿದೆ.
ಮೂವರು ಬಾಲಕರ ದುರಂತ ಅಂತ್ಯ
ಲೇಔಟ್‌ನಲ್ಲಿ ಮಹಾಜನ್ ಎಂಬುವರು ಮನೆ ಕಟ್ಟಲು ಅಂತಾ ಕಳೆದೆರಡು ದಿನಗಳ ಹಿಂದೆ ಹಳ್ಳ ತೋಡಿದ್ದರು. ಆದರೆ ಕಳೆದ ರಾತ್ರಿ ಸುರಿದ ಧಾರಕಾರ ಮಳೆಯಿಂದ ಇಡೀ ನಿರ್ಮಾಣ ಹಂತದ ಕಟ್ಟಡದ ತಗ್ಗುಗುಂಡಿ ತುಂಬಿ ಹೋಗಿತ್ತು. ಇಂದು ಬೆಳಗ್ಗೆ ಮೂವರು ಬಾಲಕರಾದ 10 ವರ್ಷದ ಪ್ರಶಾಂತ, 12 ವರ್ಷದ ದರ್ಶನ್ ಮತ್ತು 9 ವರ್ಷದ ವಿಘ್ನೇಶ್ ಆಟವಾಡಲು ನೀರಿಗಿಳಿದಿದ್ದಾರೆ. ಇಂದು ಬೆಳಗ್ಗೆ ದರ್ಶನ್ ಅವರ ತಾಯಿ ಮನೆಗೆಲಸಕ್ಕೆ ಅಂತ ಹೋಗಿದ್ರು ಅಲ್ಲಿನ ಮನೆ ಮಾಲೀಕ ದರ್ಶನ್ ಗೆ 50 ರೂಪಾಯಿ ನೀಡಿದ್ದ. ಹಾಗಾಗಿ ತಾಯಿ ಹಣ ತಗೊಂಡು ಹೋಗಿ ಕಟಿಂಗ್ ಮಾಡಿಸ್ಕೊ ಅಂತ ಹೇಳಿದ್ದಾರೆ.
ಸೈಟ್ ಮಾಲೀಕನ ನಿರ್ಲಕ್ಷ್ಯ?
ಅಲ್ಲಿಂದ ಸೀದಾ ಹೇರ್ ಕಟ್ಟಿಂಗ್ ಶಾಪ್ ಗೆ ಹೋಗಿದ್ರೆ ಪಾಪ ಜೀವ ಉಳಿತಿತ್ತು ಆದ್ರೆ ವಿಧಿ ಆಟ ಯಾರ ಬಲ್ಲವರು ಹೇಳಿ ಸಾವು ಆತನನ್ನ ಹೊಂಡಕ್ಕೆ ಕರ್ಕೊಂಡು ಹೋಗಿದೆ. ಮೂರು ಜನ ಸ್ನೇಹಿತರು ನೀರಿನ ಆಳ ಅರಿಯದೆ ಹೊಂಡಕ್ಕೆ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ. ಇನ್ನು ಮನೆ ಮಾಲೀಕ ಅಷ್ಟೊಂದು ಆಳ ಅಗೆದು ಅದಕ್ಕೆ ಸೇಷ್ಟ್ ಪ್ರೀಕಾಶನ್ ತಗೆದುಕೊಂಡಿದ್ರೆ ಈ ದುರಂತ ಆಗ್ತಾ ಇಲ್ಲಿಲ್ಲ. ಸೈಟ್ ಮಾಲೀಕನ ನಿರ್ಲಕ್ಷ್ಯ ಕ್ಕೆ ತಮ್ಮ ಮಕ್ಕಳು ಬಲಿ ಆಗಿದ್ದಾರೆ ಅಂತ ಪೋಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.