ಇತ್ತೀಚಿನ ಸುದ್ದಿ
Trending

ದಸರಾ ಕವಿಗೋಷ್ಠಿಗೆ ರೈತ ಕವಿ ದೋ.ಚಿ ಗೌಡ ಆಯ್ಕೆ,ಆಸರೆ ಸೇವಾ ಟ್ರಸ್ಟ್ ವತಿಯಿಂದ ಅಭಿನಂದನೆ

ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಇದೆ ಮಂಗಳವಾರ ಮೈಸೂರು ವಿಶ್ವವಿದ್ಯಾಲಯದ ಬಿ.ಎಂ ಶ್ರೀ ಸಂಭಾಗಣದಲ್ಲಿ ನಡೆಯಲಿರುವ ಪ್ರಭಾತ ,( ಪ್ರಾದೇಶಿಕ) ಕವಿಗೋಷ್ಠಿಗೆ ನಾಡಿನಾದ್ಯಂತ ರೈತ ಕವಿ ಎಂದೇ ಗುರುತಿಸಲ್ಪಡುವ ದೊಡ್ಡರಸಿನಕೆರೆ ಗ್ರಾಮದ ರೈತಕವಿ ದೋ.ಚಿ ಗೌಡ ರವರನ್ನು ಕೆ.ಎಂ ದೊಡ್ಡಿಯ ಆಸರೆ ಸೇವಾ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.

ಕೆ.ಎಂ ದೊಡ್ಡಿ ಆಸರೆ ಸೇವಾ ಟ್ರಸ್ಟ್ ನ ಕಚೇರಿಯಲ್ಲಿ ಟ್ರಸ್ಟ್ ಅಧ್ಯಕ್ಷರಾದ ರಘು ವೆಂಕಟೇಗೌಡ ಹಾಗೂ ಪ್ರಗತಿಪರ ಸಂಘಟನೆಯ ಮುಖಂಡರ ಜೊತೆಗೂಡಿ ರೈತ ಕವಿ ದೋ.ಚಿ ಗೌಡರವರನ್ನು ಅಭಿನಂದಿಸಲಾಯಿತು.

ಇದೆ ಸಂದರ್ಭದಲ್ಲಿ ಮಾತನಾಡಿದ ಆಸರೆ ಸೇವಾ ಟ್ರಸ್ಟ್ ಅಧ್ಯಕ್ಷ ರಘು ವೆಂಕಟೆಗೌಡ ನಮ್ಮ ಜಿಲ್ಲೆಯ ಹೆಮ್ಮೆಯ ಕವಿಗಳಲ್ಲಿ ಒಬ್ಬರಾಗಿರುವ, ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ನಾಡು ನುಡಿಗೆ ಹಾಗೂ ಅನ್ನದಾತರ ಪರವಾಗಿ ಕವಿತೆಗಳನ್ನು ರಚಿಸಿ ನಾಡಿಗೆ ಉತ್ತಮ ಸಂದೇಶಗಳನ್ನು ಸಾರುತ್ತಿರುವ ದೋ.ಚಿ ಗೌಡರವರಿಗೆ ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿಗೆ ಆಯ್ಕೆಯಾಗಿರಿವುದು ನಮ್ಮ ತಾಲೋಕಿಗೆ ಹೆಮ್ಮೆಯ ಸಂಗತಿಯಾಗಿದೆ,ದಸರಾ ಕವಿಗೋಷ್ಠಿಯಲ್ಲಿ ಉತ್ತಮ ವಾಚನ ಮಾಡಿ ಜಿಲ್ಲೆಗೆ ಒಳ್ಳೆಯ ಹೆಸರನ್ನು ತಂದು ಕೊಡಲಿ ಎಂದು ಪ್ರಗತಿಪರ ಸಂಘಟನೆಗಳು ಒಕ್ಕೊರಲಿನಿಂದ ಆಶಿಸುತ್ತೇವೆ ಎಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ರೈತ ಕವಿ ದೋ.ಚಿ.ಗೌಡ ರವರು ಸ್ಥಳೀಯವಾಗಿ ನಾಡು ನುಡಿಯ ಬಗ್ಗೆ ಅಪಾರವಾದ ಗೌರವವನ್ನಟ್ಟಿಕೊಂಡಿರಿರುವ ಕೆ.ಎಂ ದೊಡ್ಡಿ ಭಾಗದ ಅಸರೆ ಸೇವಾ ಟ್ರಸ್ಟ್ ಹಾಗೂ ಪ್ರಗತಿಪರ ಸಂಘಟನೆಗಳು ನನ್ನ ಮೇಲೆ ಅಪಾರ ಪ್ರೀತಿಯನ್ನು ತೋರುತ್ತ ಬಂದಿರುತ್ತಾರೆ ಅವರ ಈ ಪ್ರೀತಿಗೆ ನಾನು ಸದಾ ಋಣಿಯಾಗಿರುತ್ತೇನೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಆಸರೆ ಸೇವಾ ಟ್ರಸ್ಟ್ ಖಜಾಂಚಿ ವಿಕಾಸ್, ಪ್ರಗತಿಪರ ಸಂಘಟನೆಯ ಕರಡಕೆರೆ ಯೋಗೇಶ್, ಗ್ರಾಮ ಪಂಚಾಯಿತಿ ಸದಸ್ಯ ಕಾರ್ಕಳ್ಳಿ ಮಹೇಶ್, ಅಣ್ಣೂರು ಸೊಸೈಟಿ ನಿರ್ದೇಶಕ ವೀರೇಂದ್ರ ಗುರುದೇವರಹಳ್ಳಿ ನವೀನ್,ತಮಟೆ ಕಲಾವಿದ ಜಗ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು..

Related Articles

Leave a Reply

Your email address will not be published. Required fields are marked *

Back to top button