ದಕ್ಷಿಣ ಆಫ್ರಿಕಾದಿಂದ ಬಂದು ನಾಪತ್ತೆಯಾಗಿದ್ದ 10 ಮಂದಿ ಪ್ರಯಾಣಿಕರ ಪೈಕಿ ಇದೀಗ ಬಿಬಿಎಂಪಿ 9 ಪ್ರಯಾಣಿಕರನ್ನು ಪತ್ತೆ ಮಾಡಿದೆ. 10 ಜನರ ಪೈಕಿ ಬಿಬಿಎಂಪಿ ಸಂಪರ್ಕಕ್ಕೆ 9 ಮಂದಿ ಸಿಕ್ಕಿದ್ದು, ಪೊಲೀಸ್ ಇಲಾಖೆಯ ಸಹಾಯದಿಂದ 9 ಪ್ರಯಾಣಿಕರನ್ನು ಬಿಬಿಎಂಪಿ ಪತ್ತೆ ಮಾಡಿದೆ.
ಒಮಿಕ್ರಾನ್ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ವಿದೇಶದಿಂದ ಬಂದವರಿಗೆ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಈ ಪೈಕಿ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕರ ಪೈಕಿ 10 ಮಂದಿ ಪ್ರಯಾಣಿಕರು ನಾಪತ್ತೆಯಾಗಿದ್ದರು. ಇದೀಗ 10 ಪ್ರಯಾಣಿಕರ ಪೈಕಿ 9 ಪ್ರಯಾಣಿಕರು ಪತ್ತೆಯಾಗಿದ್ದಾರೆ.