ರಾಜ್ಯಸುದ್ದಿ

ತೂಕ ಇಳಿಸಲು ಕಪ್ಪು ಅಕ್ಕಿ ಬಹಳ ಸಹಕಾರಿ: ಇದರ ಮತ್ತಷ್ಟು ಪ್ರಯೋಜನಗಳು ಇಲ್ಲಿವೆ..!

ದಕ್ಷಿಣ ಭಾರತ( South India)ದ ಆಹಾರ ಪದ್ಧತಿಯಲ್ಲಿ ಅಕ್ಕಿ(Rice) ಪ್ರಮುಖ ಪಾತ್ರ ವಹಿಸುತ್ತದೆ. ಬಗೆ ಬಗೆಯ ತಿಂಡಿ, ತಿನಿಸುಗಳನ್ನ ಅಕ್ಕಿ ಬಳಸಿ ಮಾಡಲಾಗುತ್ತೆ. ಬಗೆ ಬಗೆ ಭಕ್ಷ ತಿಂದರೂ, ಅನ್ನ ತಿಂದರೆ ಮಾತ್ರ ಮನಸ್ಸಿಗೆ ತೃಪ್ತಿ ಅನ್ನುತ್ತಾರೆ ಜನ. ಅಷ್ಟರ ಮಟ್ಟಿಗೆ ಅಕ್ಕಿ ಜನರ ಜೀವನದ ಜತೆ ಬೆರೆತು ಹೋಗಿದೆ. ಅಕ್ಕಿಯಲೂ ವಿಧ ವಿಧದ ಬಣ್ಣದ ಅಕ್ಕಿಗಳು ಸಿಗುತ್ತವೆ. ಕುಚಲಕ್ಕಿ(parboiled rice), ಬಿಳಿ ಅಕ್ಕಿ(white rice) , ಕಂದು ಬಣ್ಣದ ಅಕ್ಕಿ(brown rice) , ಬಾಸ್ಮತಿ ಅಕ್ಕಿ(basmathi rice) , ಕೆಂಪು ಅಕ್ಕಿ (red rice) ಹೀಗೆ ಬೇರೆ ಬೇರೆ ಕಲರ್​ಗಳಲ್ಲಿ ನೀವು ಅಕ್ಕಿಯನ್ನ ನೋಡಿರುತ್ತೀರಾ.

ಆದರೆ ಕಪ್ಪು ಅಕ್ಕಿ(Black Rice) ಅಥವಾ ನೇರಳೆ ಅಕ್ಕಿ ಬಗ್ಗೆ ನಿಮಗೆಷ್ಟು ಗೊತ್ತು? ಬಹುತೇಕ ಜನರಿಗೆ ಕಪ್ಪು ಅಕ್ಕಿಯ ಬಗ್ಗೆ ಗೊತ್ತೆ ಇರುವುದಿಲ್ಲ. ಇದನ್ನು ಸೇವಿಸಿದವರ ಸಂಖ್ಯೆಯೂ ವಿರಳ. ಇದರ ಬಗ್ಗೆ ಕೇಳಿರುವವರ ಸಂಖ್ಯೆಯೂ ತುಂಬಾ ಕಡಿಮೆ. ಈ ವೈವಿಧ್ಯಮಯ ಅಕ್ಕಿ ಸೂಪರ್​ ಫುಡ್(Super food)ಗಿಂತ ಹೆಚ್ಚು ಉತ್ತಮ ಎಂದು ಪರಿಗಣಿಸಲಾಗಿದೆ. ಈ ಕಪ್ಪು ಅಕ್ಕಿಯನ್ನ ಈಶಾನ್ಯ ರಾಜ್ಯ ಮಣಿಪುರ(Manipur)ದಲ್ಲಿ ಹೆಚ್ಚಾಗಿ ಬೆಳಯಲಾಗುತ್ತೆ.

ಈ ಕಪ್ಪು ಅಕ್ಕಿಗೆ, ನೇರಳೆ ಅಕ್ಕಿಎಂದು ಕರೆಯುತ್ತಾರೆ. ಮಣಿಪುರ(Manipur) ದಲ್ಲಿ ಇದನ್ನು ಚಕ್-ಹಾವ್(​Chakhao) ಎಂದು ಕರೆಯಲಾಗುತ್ತೆ. ತಜ್ಞರ ಪ್ರಕಾರ ಈ ಕಪ್ಪು ಅಕ್ಕಿಯನ್ನು ಬೆಳೆಯುವುದು ಸ್ವಲ್ಪ ಕಷ್ಟ. ಆದರೆ ಈ ಅಕ್ಕಿಯಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆಯಂತೆ. ಈ ಕಪ್ಪು ಅಕ್ಕಿ ನಿಜಕ್ಕೂ ಸಖತ್​ ಫೇಮಸ್​ ಅಂತೆ. ಅಷ್ಟೇ ಅಲ್ಲದೇ ಈ ಅಕ್ಕಿಗೆ ಬೇರೆ ರಾಜ್ಯಗಳಲ್ಲಿ ಡಿಮ್ಯಾಂಡ್​ ಕೂಡ ಹೆಚ್ಚಿದೆ. ಆದರೆ ಈ ಕಪ್ಪು ಅಕ್ಕಿಯ ಮಹತ್ವದ ಅನೇಕ ಜನರಿಗೆ ತಿಳಿದಿಲ್ಲ. ನಿಜಕ್ಕೂ ಕಪ್ಪು ಅಕ್ಕಿ ಆರೋಗ್ಯಕ್ಕೆ ಉತ್ತಮನಾ? ಕಪ್ಪು ಅಕ್ಕಿಯ ಆರೋಗ್ಯಕರ ಲಾಭಗಳು ಇಲ್ಲಿದೆ ನೋಡಿ.

Related Articles

Leave a Reply

Your email address will not be published. Required fields are marked *

Back to top button