ತುಂಬಾಡಿ ಕೆರೆಗೆ ಬಿದ್ದು ತಂದೆ ಮಗಳ ಧಾರುಣ ಸಾವು.
ಕೊರಟಗೆರೆ :- ಬೆಂಗಳೂರು ಮೂಲದ ಪ್ರವಾಸಿಗರು ತುಂಬಾಡಿಕೆರೆ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮಗಳು ಕಾಲು ಜಾರಿ ಬಿದ್ದ ಪರಿಣಾಮ ಮಗಳನ್ನು ಕಾಪಾಡಲು ತಂದೆ ತಾಯಿ ಇಬ್ಬರು ನೀರಿನಲ್ಲಿ ಮುಳುಗಿ ಅದೃಷ್ಟವಶಾತ್ ಸಾರ್ವಜನಿಕರ ಸಹಕಾರದಲ್ಲಿ ತಾಯಿ ಬದುಕುಳಿದು ಮಗಳು ಹಾಗೂ ತಂದೆ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕ್ ನಲ್ಲಿ ಜರುಗಿದೆ. ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತುಂಬಾಡಿಕೆರೆಯಲ್ಲಿ ಈ ಘಟನೆ ಜರುಗಿದ್ದು ಬೆಂಗಳೂರಿನ ಶಿವಾಜಿನಗರ ಮೂಲದ ಪಿರ್ಧೋಷ್ (39 ವರ್ಷ) ಮಗಳು ಅಹೀಮಾ ( 6 ವರ್ಷ) ನೀರಿನಲ್ಲಿ ಮುಳುಗಿ ಸಾವಿಗೀಡಾದರೆ ಅದೃಷ್ಟವಶಾತ್ ಮಡದಿ ಸರೀನಾ ಸಾರ್ವಜನಿಕರ ಸಹಕಾರದಿಂದ ಬದುಕುಳಿತಿದ್ದಾಳೆ. ಬೆಂಗಳೂರು ಮೂಲದ ದಂಪತಿಗಳು ಕೊರಟಗೆರೆ ಪಟ್ಟಣದ ಗಿರಿನಗರದ ಸ್ನೇಹಿತರ ಮನೆಗೆ ಆಗಮಿಸಿದ್ದು, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಉದ್ದೇಶದಿಂದ ತುಂಬಾಡಿ ಕೆರೆಗೆ ಆಗಮಿಸಿದ ಸಂದರ್ಭದಲ್ಲಿ ಈ ದುರ್ಘಟನೆ ಜರುಗಿದ್ದು, ಮಗಳು ಅಹೀಮಾ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದ ಪರಿಣಾಮ ಮಗಳನ್ನು ಉಳಿಸಲು ತಂದೆ ಪಿರ್ಧೋಷ್ ನೀರಿಗೆ ಹಾರಿದ್ದು ಮಗಳ ಸಹಿತ ತಂದೆ ನೀರಿನಲ್ಲಿ ಮುಳುಗಿರುವುದನ್ನ ಕಂಡ ತಾಯಿ ಸರೀನಾ ತಾನು ನೀರಿನಲ್ಲಿ ಅವರನ್ನು ಕಾಪಾಡಲು ಪ್ರಯತ್ನಿಸಿ ಆಕೆಯು ನೀರಿಗೆ ಬಿದ್ದಿದ್ದಾಳೆ ಎನ್ನಲಾಗಿದೆ.
ದಂಪತಿಗಳು ಸ್ನೇಹಿತರೊಂದಿಗೆ ತುಂಬಾಡಿ ಕೆರೆಗೆ ಆಗಮಿಸಿದ ಸಂದರ್ಭದಲ್ಲಿ ಕೆರೆ ಕೋಡಿ ಸಮೀಪ ಕೆರೆ ಕೋಡಿ ಮೈದುಂಬಿ ಹರಿಯುವಂತ ಮನೋಹರ ದೃಶ್ಯವನ್ನು ನೋಡುತ್ತಾ ಮೈಮರೆತು ದೃಶ್ಯ ಸವಿಯುವಂತ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಮಗಳನ್ನು ಕಾಪಾಡಲು ತಂದೆ ಸಹ ನೀರಿಗೆ ಹಾರಿದ್ದು ತಂದೆ ಮಗಳು ಇಬ್ಬರೂ ಮೇಲೆ ತೇಲದ ಕಾರಣ ಹೆಂಡತಿ ಕಿರಿಚಾಡಿ ತಾನು ನೀರಿಗೆ ಗಂಡ ಹಾಗೂ ಮಗಳನ್ನು ಕಾಪಾಡಲು ನೀರಿಗೆ ಹಾರಿದ ಪರಿಣಾಮ ಮೂರು ಜನ ನೀರಿನಲ್ಲಿ ಮುಳುಗಿದ್ದು, ಸಾರ್ವಜನಿಕರು ಮೂರು ಜನರನ್ನ ಮೇಲತ್ತಲು ಪ್ರಯತ್ನಿಸಿದಾಗ ಮಡದಿ ಸರೀನಾ ಸಾರ್ವಜನಿಕರ ಸಹಕಾರದಿಂದ ಅದೃಷ್ಟವಶಾತ್ ಬದುಕಿ ಉಳಿದಿದ್ದು, ತಂದೆ ಪಿರ್ಧೋಷ್ ಖಾನ್ ಹಾಗೂ ಮಗಳು ಅಹೀಮಾ ನೀರಿನಲ್ಲಿ ಮುಳುಗಿ ಸಾವಿಗಿಡಾಗಿದ್ದಾರೆ, ಅಗ್ನಿಶಾಮಕದಳದ ಅವಿರತ ಪ್ರಯತ್ನದಿಂದ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಅನಿಲ್ ಹಾಗೂ ಪಿಎಸ್ಐ ಚೇತನ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.