ಇತ್ತೀಚಿನ ಸುದ್ದಿರಾಜ್ಯ

ತೀತಾ ಜಲಾಶಯ ತುಂಬಿ ಕೊಡಿ ಹರಿದು ಪ್ರೇಕ್ಷಕರ ಕಣ್‌ ಮನ ಸೆಳೆತ

ಕೊರಟಗೆರೆ:- ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ ಹಾಗೂ ಪ್ರವಾಸಿ ತಾಣವಾದ ದೇವರಾಯನದರ್ಗ ಬೆಟ್ಟದ ತಪ್ಪಲಿನಲ್ಲಿ ಹುಟ್ಟುವ ಜಯಮಂಗಲಿ ನದಿಯ ನೀರು ಕೊರಟಗೆರೆ ತಾಲೂಕಿನ ಏಕೈಕ ತೀತಾ ಜಲಾಶಯಕ್ಕೆ ನೀರು ಹರಿದು ಬಂದಿದ್ದು, ಕೊಡಿ ಬಿದ್ದು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

ತಾಲೂಕಿನ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನದ ಸಮೀಪ ಇರುವ ತೀತಾ ಜಲಾಶಯ ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರಲಿದೆ. ಮಹಾಲಕ್ಷ್ಮೀ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರು ತಪ್ಪದೇ ಜಲಾಶಯಕ್ಕೆ ಬೇಟಿ ನೀಡಿ ಸುಂದರ ಪರಿಸರ ಇರುವ ತಾಣಕ್ಕೆ ಆಹ್ವಾನ ನೀಡುವಂತ ಜಾಗವಾಗಿದೆ.

ತೀತಾ ಜಲಾಶಯದ ಅಚ್ಚುಕಟ್ಟು ಪ್ರದೇಶ ಒಟ್ಟು 25೦೦ ಎಕರೆ ವ್ಯಾಪ್ತಿ ಹೊಂದಿದೆ. ಜಲಾಶಯದ ವಿಸ್ತೀರ್ಣ 175.35
ಚ.ಕಿ.ಲೋ ಆಗಿದೆ ಏರಿಯ ಉದ್ದ 1017 ಮತ್ತು 16.6ಮೀ. ಎತ್ತರವಿದೆ. ನೀರಿನ ಮಟ್ಟ 28 ಅಡಿ ನೀರು ಭರ್ತಿಯಾಗಿದ್ದು, ಈ ಜಲಾಶಯ ಕೋಡಿ ಬಿದ್ದರೆ ಚಿಕ್ಕಾವಳಿ ಕೆರೆ ಸೇರಿ ನಂತರ ಜಯಮಂಗಲಿ ನದಿ ಮೂಲಕ ಆಂಧ್ರದ ಪರಗಿ ಕೆರೆ ಸೇರಿ ಅಲ್ಲಿಂದ ಸಮುದ್ರ ಸೇರಲಿದೆ.

ಬೋಟಿಂಗ್ ವ್ಯವಸ್ಥೆ ಮಾಡಿ

ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರು ತೀತಾ ಜಲಾಶಯಕ್ಕೆ ಭೇಟಿ ನೀಡುತ್ತಿದ್ದು, ಜಲಾಶಯದಲ್ಲಿ ಪ್ರವಾಸೋದ್ಯೋಮದಿಂದ ಬೋಟಿಂಗ್, ಪಾರ್ಕ್ ಹಾಗೂ ಮಕ್ಕಳುಗಳು ಆಟವಾಡಲು ಉಪಕರಣಗಳನ್ನ ಮಾಡಿದರೆ ಇನ್ನಷ್ಟು ಭಕ್ತರು ಡ್ಯಾಂಗೆ ಭೇಟಿ ನೀಡಲಿದ್ದಾರೆ.

ಹೊಳವನಹಳ್ಳಿ ಹೋಬಳಿಯ ತಿಮ್ಮನಹಳ್ಳಿ, ಹೊನ್ನಾರನಹಳ್ಳಿ, ಗೊರವನಹಳ್ಳಿ ತೀತಾ, ಮಾದವಾರ, ತುಂಬಗಾನಹಳ್ಳಿ, ಚಿಕ್ಕಾವಳಿ, ರಾಜಯ್ಯನಪಾಳ್ಯ, ಕ್ಯಾಮೇನಹಳ್ಳಿ, ಬಿದಲೋಟಿ, ಕೋಡ್ಲಹಳ್ಳಿ, ವೆಂಕಟಾಪುರ ಗ್ರಾಮಗಳಿಗೆ ಸೇರಿದ ಸಾವಿರಾರು ರೈತರಿಗೆ ಜೀವನಾಡಿಯಾಗಿ ರೈತರ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಏರಿಕೆಯಾಗಿ ರೈತರು ನೆಮ್ಮದಿಯ ಜೀವನ ನಡೆಸಲಿದ್ದಾರೆ. ಗೊರವನಹಳ್ಳಿ ತೀತಾ ಗ್ರಾಮಗಳ ಮದ್ಯೆ ಇರುವ ಮೇಲ್ಸುತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಅದರಿಂದ ಸ್ಥಳಕ್ಕೆ ಬೇಟಿ ನೀಡಿ ಸಾರ್ವಜನಿಕರು ಓಡಾಡಲು ಬೇರೆ ವ್ಯವಸ್ಥೆಯನ್ನ ಮಾಡಲಾಗುತ್ತಿದೆ.

ಬಾಕ್ಸ್ ಬಳಸಿ..

ಗೊರವನಹಳ್ಳಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬರುತ್ತಾರೆ ಅದರ ಜೊತೆಗೆ ತೀತಾ ಜಲಾಶಯಕ್ಕೆ ಭೇಟಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನ ಅಭಿವೃದ್ದಿ ಪಡಿಸಲಾಗುವುದು.

ಕೊಟ್ಟುರು ಶಿವಪ್ಪ
ಮಧುಗಿರಿ ಉಪವಿಭಾಗಧಿಕಾರಿ ..

ತೀತಾ ಜಲಾಶಯಕ್ಕೆ ಬಹಳಷ್ಟು ಒಳಹರಿವು ಹೆಚ್ಚಾಗಿದ್ದು, ಎಲೆರಾಂಪುರ ಕೆರೆಯ ಕೋಡಿ ನೀರು ಯಥೇಚ್ಛವಾಗಿ ಬರುತ್ತಿರುವುದರಿಂದ ಚಿಕ್ಕಾವಳ್ಳಿ ಕೆರೆ ಸಹ ತುಂಬುವ ಸಾಧ್ಯತೆಯಿದ್ದು, ಈ ನೀರು ಹರಿಯುವ ಜಲಮೂಲ ನದಿ ಪಾತ್ರಗಳಲ್ಲಿ ಜನತೆ ಎಚ್ಚರಿಕೆ ವಹಿಸುವುದು, ಜನ ಜನವಾರು ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳದಲ್ಲಿಟ್ಟು ಕಾಪಾಡಿಕೊಳ್ಳುವುದರ ಜೊತೆಗೆ ಸುರಕ್ಷಿತ ಸ್ಥಳದಲ್ಲಿದ್ದು ವಾಸಿಸುವುದು ಬಹಳ ಮುಖ್ಯ

ಮಂಜುನಾಥ್ ಕೆ ತಹಶೀಲ್ದಾರ್ ಕೊರಟಗೆರೆ.

ತೀತಾ ಜಲಾಶಯ ಕೋಡಿ ಬಿದ್ದರೆ ಸಾವಿರಾರು ರೈತರ ಭೂಮಿ ಹಸಿರು ಆಗುತ್ತದೆ. ರೈತರ ಬೋರ್‌ವೆಲ್‌ಗಳು ರಿಜಾರ್ಜ್ ಆಗುತ್ತವೆ. ಈ ಕೆರೆಯಿಂದ ಹೊಳವನಹಳ್ಳಿ ಹೋಬಳಿಯ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಗೊರವನಹಳ್ಳಿ ದೇವಸ್ಥಾನದ ಸಮೀಪ ಇರುವ ತೀತಾ ಜಲಾಶಯವನ್ನ ಪ್ರವಾಸಿ ತಾಣವನ್ನಾಗಿ ಮಾಡಬೇಕು ರೈತ ಸಿದ್ದರಾಜು..
ಅಧ್ಯಕ್ಷ ರೈತ ಸಂಘ ತಾಲೂಕ್ ಘಟಕ, ಕೊರಟಗೆರೆ…

Related Articles

Leave a Reply

Your email address will not be published. Required fields are marked *

Back to top button