
ಗುಂಡ್ಲುಪೇಟೆ:
ಪ್ರಾಕೃತಿಕ ಮಡಿಲಲ್ಲಿ ಆಚರಣೆ ಮಾಡಿಕೊಳ್ಳುವ ಅದೆಷ್ಟೋ ಮಂದಿ, ಕಾಡಿನೊಳಗೆ ಸಫಾರಿಯಲ್ಲಿ ಸಾಗಿ ವನ್ಯ ಜೀವಿಗಳನ್ನು ಕಣ್ಣುಂಬ ಕಂಡು ಆನಂದಿಸುವುದು ವಾಡಿಕೆ. ಆದರೆ, ಈ ಭಾರಿ ವರ್ಷಾಂತ್ಯ ಹಾಗೂ ಹೊಸ ವರ್ಷ ಆಚರಣೆ ಮಾಡಿಕೊಳ್ಳುವ ಪ್ರಕೃತಿ ಪ್ರಿಯರ ಸಫಾರಿ ಕನಸಿಗೆ ತಣ್ಣೀರು ಎರಚಿದಂತಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಡೀ ರಾಜ್ಯದಲ್ಲೇ ಅತ್ಯಧಿಕ ಹುಲಿಗಳನ್ನುಹೊಂದಿರುವ ಜನಪ್ರಿಯ ಅಭಯಾರಣ್ಯವಾಗಿದೆ. ಇದು ಕೇವಲ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶವಾಗಿರದೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಪ್ರದೇಶವನ್ನು ಒಂದುಗೂಡಿಸುವ ವೈಶಿಷ್ಟ್ಯಮಯ ಪರಿಸರವನ್ನು ಹೊಂದಿರುವ ಪ್ರದೇಶವಾಗಿದೆ.
3 ರಾಜ್ಯಗಳ ಪರಿಸರಕ್ಕೆ ಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಅಂದಾಜು 180ಕ್ಕೂ ಹುಲಿಗಳಿದೆ ಎನ್ನಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಆನೆಗಳಿವೆ. ಅಸಂಖ್ಯಾತವಾಗಿ ಕಾಡೆಮ್ಮೆಗಳಿರುವ ಪ್ರದೇಶವಾಗಿದೆ. ಇಲ್ಲಿ ಚುಕ್ಕಿ ಜಿಂಕೆಗಳೇ ಹೆಚ್ಚಾಗಿ ವಾಸ ಮಾಡುತ್ತಿವೆ. ಇದರೊಂದಿಗೆ ಕರಡಿಗಳೂ ವಾಸ ಮಾಡುತ್ತಿವೆ. ಚಿರತೆಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ. ಈ ಎಲ್ಲ ವನ್ಯಜೀವಿಗಳನ್ನು ಸಫಾರಿ ಮಾರ್ಗದಲ್ಲಿ
ಕಂಡು ಕಣ್ಣುಂಬಿಸಿಕೊಳ್ಳಲು ಪ್ರಕೃತಿ ಪ್ರಿಯರು ಹೆಚ್ಚಾಗಿ ಆಗಮಿಸುತ್ತಾರೆ.
ಒಂದು ತಿಂಗಳ ಹಿಂದೆ ಅರಣ್ಯ ಇಲಾಖೆಯು ಸಫಾರಿ ಬಂದ್ ಮಾಡಿದ್ದರಿಂದ ಸಫಾರಿ ಪ್ರಿಯರಿಗೆ ನಿರಾಸೆಯನ್ನುಂಟುಮಾಡಿದೆ. ಸಫಾರಿಯನ್ನೇ ನಂಬಿಕೊಂಡಿದ್ದ ಅದೆಷ್ಟೋ ಕುಟುಂಬಗಳು ಜೀವನ ನಡೆಸಲು ಸಾಧ್ಯವಾಗದ ಸ್ಥಿತಿಗೆ ಬಂದಿದ್ದರೆ, ಸಫಾರಿಯಿಂದಲೇ ಅರಣ್ಯ ಇಲಾಖೆಗೆ ಕೋಟಿಗಟ್ಟಲೆ ಆದಾಯ ಇಲ್ಲದಂತಾಗಿದೆ. ಸಫಾರಿಗೆ ಮೀಸಲಿಟ್ಟ ವಾಹನಗಳು ನಿಂತಲೇ ನಿಂತು ತುಕ್ಕು ಹಿಡಿಯುವಂ ತಾಗಿದೆ.
ಇದರ ನಡುವೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆ ಸಫಾರಿ ಆರಂಭಿಸಬೇಕೆಂದು ಬಂಡೀಪುರ ಸುತ್ತಮುತ್ತಲಿನ ಹೋಂಸ್ಟೇ ಹಾಗೂ ರೆಸಾರ್ಟ್ಗಳ ಮಾಲಕರು, ಸಿಬ್ಬಂದಿ ಮತ್ತು ಇನ್ನಿತರ ವ್ಯಾಪಾರಸ್ಥರು. ಸರಕಾರದ ಮೇಲೆ ನಿರಂತರ ಒತ್ತಡ ತರುತ್ತಿದ್ದಾರೆ.
ಪ್ರತಿ ವರ್ಷ ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆಯ ಹಿನ್ನೆಲೆ ಮೇ ಮತ್ತು ವರ್ಷಾಂತ್ಯ ಹಾಗೂ ಹೊಸ ವರ್ಷದ ಆಚರಣೆ ಹಿನ್ನಲೆ ಡಿಸೆಂಬರ್ ತಿಂಗಳಲ್ಲಿ ಅತೀ ಹೆಚ್ಚು ಪ್ರವಾಸಿಗರು ಸಫಾರಿ ಮಾಡುತ್ತಿದ್ದರು.
ಬಂಡೀಪುರದಲ್ಲಿ ಮತ್ತೆ ಸಫಾರಿ ಆರಂಭಿಸಲು ಚಿಂತನೆ ಮಾಡುತ್ತಿದ್ದಂತೆ, ಸಫಾರಿ ಆರಂಭಕ್ಕೆ ರೈತರು ಮತ್ತು ಕಾಡಂಚಿನ ಗ್ರಾಮಗಳ ನಿವಾಸಿಗಳಿಂದ ವಿರೋಧ ವ್ಯಕ್ತವಾಗುತ್ತಿವೆ.
ಬಂಡೀಪುರದಲ್ಲಿ ಸಫಾರಿ ಬಂದ್ ಬಆಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಸಫಾರಿಗೆಂದು ತಮಿಳುನಾಡಿನ ಮಧುಮಲೈ ಸಫಾರಿಯತ್ತ ಸಾಗುತ್ತಿದ್ದಾರೆ. ಇದರಿಂದಾಗಿ ತಮಿಳುನಾಡಿನ ಮಧುಮಲೈ ಸಫಾರಿ ಮತ್ತು ಖಾಸಗಿ ಸಫಾರಿ ಕೇಂದ್ರಗಳಲ್ಲಿ ಗಣನೀಯವಾಗಿ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದೆ. ಮಧುಮಲೈ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಇದು ಸಹ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತೆ ಇದೆ. ಆದರೂ ಪ್ರವಾಸಿಗರು ಬಂಡೀಪುರ ಸಫಾರಿಯನ್ನೇ ಹೆಚ್ಚಾಗಿ ಆಕರ್ಷಿತರಾಗಿದ್ದಾರೆ.
ಸಾಕು ಪ್ರಾಣಿಗಳು ಮತ್ತು ಮಾನವರ ಮೇಲೆ ದಾಳಿ ನಡೆಸುತ್ತಿದೆ. ಇದರಿಂದಾಗಿ ಬಂಡೀಪುರ ವ್ಯಾಪ್ತಿಯಲ್ಲಿ ಸಫಾರಿ ಆರಂಭಿಸುವ ಚಿಂತನೆಗೆ ವಿಘ್ನವಾಗಿದೆ. ಇದರಿಂದ ಪ್ರಾಣಿ ಮತ್ತು ಪರಿಸರ ಪ್ರಿಯರಿಗೆ ಕಾಡು ಮತ್ತು ಪ್ರಾಣಿಗಳ ಸಂರಕ್ಷಣೆಗೆ ಸರಿಯಾದ ನಿಲುವಾಗಿದೆ ಎಂದು ಹೇಳಲಾಗುತ್ತಿದ್ದರೆ, ವರ್ಷಾಂತ್ಯ ಹಾಗೂ ಹೊಸ ವರ್ಷ ಸ್ವಾಗತಿಸುವ ಸಲುವಾಗಿ ಪ್ರಕೃತಿ ಸಿರಿಯನ್ನು ಸವಿದು, ಸಫಾರಿಯಲ್ಲಿ
ಬಂಡೀಪುರ ಪ್ರವಾಸಿಗರ ಸ್ವರ್ಗ ಎಂದು ಕರೆಯುತ್ತಾರೆ. ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ಸಫಾರಿ ತೆರಳುತ್ತಿದ್ದರು. ಕಳೆದ 2025ರ ವರ್ಷಾಂತ್ಯ ಮತ್ತು ಹೊಸ ವರ್ಷದ ಆಚರಣೆಯಲ್ಲಿ ಹೆಚ್ಚಾಗಿ ಪ್ರವಾಸಿಗರು ಬಂಡೀಪುರಕ್ಕೆ ಭೇಟಿ ಕೊಟ್ಟಿದ್ದರು. ಪ್ರಸ್ತುತ ಇಲಾಖೆಯ ಸೂಚನೆಯಂತೆ ಬಂಡೀಪುರದಲ್ಲಿ ಸಫಾರಿ ಬಂದ್ ಆಗಿದೆ. ಪ್ರತಿನಿತ್ಯ ಸಫಾರಿ ಇದೆ ಎಂದು ಪ್ರವಾಸಿಗರು ಬರುತ್ತಿದ್ದಾರೆ. ಸಫಾರಿ ಇಲ್ಲ ಎಂದು ತಿಳಿದು ನಿರಾಸೆಯಿಂದ ತೆರಳುತ್ತಿದ್ದಾರೆ.
ಡಾ.ಎನ್.ಪಿ. ನವೀನ್ ಕುಮಾರ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಂಡೀಪುರ
ವನ್ಯಜೀವಿಗಳನ್ನು ಕಾಣಲು ತವಕದಿಂದರುವವರ ಕನಸು ನಿರಾಸೆಯನ್ನುಂಟುಮಾಡಿದೆ. ಬಂಡೀಪುರದಲ್ಲಿ ಸಫಾರಿ ಆರಂಭವಾಗುವುದೇ ಎಂದು ಸಫಾರಿಪ್ರಿಯರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ರಾಜ್ಯ ಸರಕಾರ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.

