NADA Recruitment 2021: ನ್ಯಾಷನಲ್ ಡೋಪಿಂಗ್ ವಿರೋಧಿ ಏಜೆನ್ಸಿ(National Anti Doping Agency) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 18 ರಿಸರ್ಚ್ ಅಸೋಸಿಯೇಟ್(Research Associate), ಅಡ್ಮಿನಿಸ್ಟ್ರೇಟಿವ್ ಅಸೋಸಿಯೇಟ್(Administrative Associate), ಟೆಕ್ನಿಕಲ್ ಅಸೋಸಿಯೇಟ್(Technical Associate), ಪ್ರೋಗ್ರಾಮ್ ಅಸೋಸಿಯೇಟ್ (Programme Associate) ಹುದ್ದೆಗಳು ಖಾಲಿ ಇವೆ. ಎಲ್ಎಲ್ಬಿ(LLB), ಎಂಎಸ್ಸಿ(M.Sc), ಎಂ.ಫಾರ್ಮಾ(M.Pharma), ಪಿಎಚ್.ಡಿ(Ph.D), ಬ್ಯಾಚಲರ್ ಡಿಗ್ರಿ(Bachelor Degree) ಮಾಡಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಅಭ್ಯರ್ಥಿಗಳು ಆಫ್ಲೈನ್(ಪೋಸ್ಟಲ್) ಮೂಲಕ ಅಕ್ಟೋಬರ್ 11ರಿಂದ ಅ.31ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕೇಂದ್ರ ಸರ್ಕಾರದ ಉದ್ಯೋಗ(Central Government Jobs) ಅರಸುತ್ತಿರುವವರು ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ನ್ಯಾಷನಲ್ ಡೋಪಿಂಗ್ ವಿರೋಧಿ ಏಜೆನ್ಸಿ |
ಹುದ್ದೆಯ ಹೆಸರು | ರಿಸರ್ಚ್ ಅಸೋಸಿಯೇಟ್, ಅಡ್ಮಿನಿಸ್ಟ್ರೇಟಿವ್ ಅಸೋಸಿಯೇಟ್, ಟೆಕ್ನಿಕಲ್ ಅಸೋಸಿಯೇಟ್, ಪ್ರೋಗ್ರಾಮ್ ಅಸೋಸಿಯೇಟ್ |
ಒಟ್ಟು ಹುದ್ದೆಗಳು | 18 |
ವಿದ್ಯಾರ್ಹತೆ | ಎಲ್ಎಲ್ಬಿ, ಎಂಎಸ್ಸಿ, ಎಂಫಾರ್ಮಾ, ಪಿಎಚ್ಡಿ, ಬ್ಯಾಚಲರ್ ಡಿಗ್ರಿ |
ಉದ್ಯೋಗದ ಸ್ಥಳ | ಪ್ಯಾನ್ ಇಂಡಿಯಾ |
ಸಂಬಳ | ಮಾಸಿಕ ₹ 25,000-60,000 |
ಅರ್ಜಿ ಸಲ್ಲಿಸುವ ಬಗೆ | ಆಫ್ಲೈನ್(ಪೋಸ್ಟಲ್) |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ | 11/10/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31/10/2021 |