ತಾತ ತಂದಿಟ್ಟಿದ್ದ ಬ್ರಾಂಡಿ ಕುಡಿದು ಬಾಲಕ ಸಾವು, ಮೊಮ್ಮಗನ ಸ್ಥಿತಿ ಕಂಡು ಮೃತಪಟ್ಟ ಅಜ್ಜ..!
Crime News: ಮಕ್ಕಳಿರಬೇಕು ಮನೆ ತುಂಬಾ ಅಂತಾರೆ. ಹೀಗೆ ಮಕ್ಕಳು ಮನೆಯಲ್ಲಿದ್ದಾಗ ಎಡವಟ್ಟುಗಳ ಆಗುವುದು ಸಹಜ. ಮಕ್ಕಳ ಕೈಗೆ ಅಪಾಯಕಾರಿ ವಸ್ತುಗಳು ಸಿಗದಂತೆ ಪೋಷಕರು ನೋಡಿಕೊಳ್ಳಬೇಕು. ಏನೂ ತಿಳಿಯದ ಮುಗ್ಧ ವಯಸ್ಸಿನಲ್ಲಿ ಮಕ್ಕಳು (Children) ಇರುತ್ತಾರೆ. ಅವರಿಗೆ ಸರಿ ಯಾವುದು, ತಪ್ಪು ಯಾವುದು ಎಂದು ತಿಳಿಯುವುದಿಲ್ಲ. ಮನೆಯಲ್ಲಿ ಪೋಷಕರು ಮಕ್ಕಳ ಎದುರು ಮಾಡಿದ್ದನ್ನೇ ಫಾಲೋ (Kids follow adults) ಮಾಡುತ್ತಾರೆ.
ಪುಟ್ಟ ಪುಟ್ಟ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಪೋಷಕರು ನೋಡಿಕೊಳ್ಳಬೇಕು. ಮನೆಯಲ್ಲಿ ಹಿರಿಯರಿದ್ದರೆ ಹೆಚ್ಚು ಜಾಗೃತವಾಗಿರಬೇಕು. ಇಲ್ಲವಾದರೆ ಎಡವಟ್ಟುಗಳು ಆಗುವುದು ಖಚಿತ. ಇದಕ್ಕೆ ತಕ್ಕ ಉದಾಹರಣೆಯಂತೆ ತಮಿಳುನಾಡಿನಲ್ಲಿ (Tamilnadu) ದುರಂತವೊಂದು ನಡೆದು ಹೋಗಿದೆ. ತಾತ ತಂದಿಟ್ಟಿದ್ದ ಬ್ರಾಂಡಿ(Brandy) ಕುಡಿದು 5 ವರ್ಷದ ಬಾಲಕ (5 year old boy) ಸಾವನ್ನಪ್ಪಿದ್ದಾನೆ. ತನ್ನ ತಪ್ಪಿನಿಂದ ಮೊಮ್ಮಗನನ್ನ ಕಳೆದುಕೊಂಡ ಅಜ್ಜ ಕೂಡಾ ಕೊನೆಯುಸಿರೆಳೆದಿದ್ದಾರೆ. ತಾತಾ ತಂದಿಟ್ಟಿದ್ದ ಬ್ರಾಂಡಿ ಯನ್ನ ಜ್ಯೂಸ್(Juice) ಎಂದು ಭಾವಿಸಿ ಬಾಲಕ ಕುಡಿದು ಬಿಟ್ಟಿದ್ದಾನೆ. ಇದಾದ ಕೆಲ ಗಂಟೆಗಳಲ್ಲೇ ಐದು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ತಮಿಳುನಾಡು (Tamil Nadu) ರಾಜ್ಯದ ಚೆನ್ನೈ (Chennai)ನ ವೆಲ್ಲೂರಿ (Vellore)ನಲ್ಲಿ ಈ ದುರ್ಘಟನೆ ಸಂಭವಿಸಿದೆ. 62 ವರ್ಷದ ಚಿನ್ನಸ್ವಾಮಿ(Chinnasamy) ಎಂಬುವವರಿಗೆ ಕುಡಿಯುವ ಅಭ್ಯಾಸವಿತ್ತು. ಹೀಗಾಗಿ ತನ್ನ ಮನೆಗೆ ಫುಲ್ ಬಾಟಲ್ ಬ್ರಾಂಡಿ ಯನ್ನು ತಂದಿದ್ದರು. ಅದರಲ್ಲಿ ಸ್ವಲ್ಪ ಕುಡಿದು ಉಳಿದಿದ್ದನ್ನು ಮನೆಯಲ್ಲಿಯೇ ಇಟ್ಟಿದ್ದರು. ಇದನ್ನು ಜ್ಯೂಸ್ ಎಂದು ತಪ್ಪಾಗಿ ಅರ್ಥೈಸಿಕೊಂಡ ಮೊಮ್ಮಗ ರುಕೇಶ್(Rukesh) , ಬ್ರಾಂಡಿ ಬಾಟಲ್ ಎತ್ತಿಕೊಂಡು ಕುಡಿದು ಖಾಲಿ ಮಾಡಿದ್ದಾನೆ. ಇದಾದ ಕೆಲ ಹೊತ್ತಲ್ಲೇ ಮೊಮ್ಮಗ ಸಾವನ್ನಪ್ಪಿದ್ದಾನೆ. ಇತ್ತ ಈ ಮೊಮ್ಮಗನ ಪರಿಸ್ಥಿತಿ ಗಮನಿಸಿದ ಚಿನ್ನಸ್ವಾಮಿ ಮೂರ್ಛೆ ಹೋಗಿದ್ದಾರೆ. ಇದಾದ ಕೆಲ ಹೊತ್ತಲ್ಲೇ ಅವರ ಪ್ರಾಣಪಕ್ಷಿಯು ಹಾರಿಹೋಗಿದೆ.