ಸುದ್ದಿ

ತಾತನಿಂದ ಕಲಿತ ವಾಮಾಚಾರ ಪ್ರಯೋಗ ಮಾಡಿದ ಗೆಳೆಯರು.. ಪೂಜೆ ವೇಳೆ ಹೆಣ ಬಿದ್ದೇ ಬಿಡ್ತು!

ಮೈಸೂರು: ಅವ್ರೆಲ್ಲ ಒಂದೇ ಊರಿನ ಚೆಡ್ಡಿದೋಸ್ತ್ ಗಳು (Friends). ಇನ್ನೂ ಮೀಸೆ ಚಿಗುರದಿದ್ರೂ ಅವ್ರು ಮಾಡೋ  ಕೆಲ್ಸ ಮಾತ್ರ ಭಯ ಹುಟ್ಟಿಸುವಂತದ್ದು. ಸ್ನೇಹಿತರು ಕರಿತಿದ್ದಾರೆ ಅಂತಾ ಹಿಂದೆ ಮುಂದೆ ಯೋಚನೆ ಮಾಡದೆ ಸ್ನೇಹಿತರೊಟ್ಟಿಗೆ ಹೋದ ಆ ಬಾಲಕ ಸಾವಿನ ಮನೆ (Teenager Killed) ಸೇರಿದ್ದಾನೆ. ಚಿಕ್ಕ ವಯಸ್ಸಿನಲ್ಲಿ ಮೌಢ್ಯಕ್ಕೆ ಮಾರು ಹೋದವ್ರು ಚೆಡ್ಡಿ ದೊಸ್ತ್ ಅನ್ನೇ ಬಲಿ ಪಡೆದಿದ್ದಾರೆ.  ವಾಮಾಚಾರ (Black Magic )ಮಾಡಿರೋ ಅಸಾಮಿಗಳ್ಯಾರು ಜ್ಯೋತಿಷಿಗಳಲ್ಲ ಬದಲಿಗೆ ಇನ್ನೂ ಚಿಗುರು ಮೀಸೆಯೂ ಬಾರದ ಎಸ್ ಎಸ್ ಎಲ್ ಸಿ ಯುವಕರು. ಅಂದಹಾಗೆ ಒಂದೇ ಊರಿನ ಚಡ್ಡಿ ದೋಸ್ತ್ ಗಳು ಮಾಡಿದ ಖತರ್ನಾಕ್ ಕೆಲ್ಸಕ್ಕೆ ಏನೂ ಅರಿಯದ ಬಾಲಕ ಬಲಿಯಾಗಿದ್ದಾನೆ. ಘಟನೆ ನಡೆದಿರೋದು ಜ.2 ರಂದು ನಂಜನಗೂಡು ತಾಲೂಕಿನ ಹಳೆಪುರ ಗ್ರಾಮದ ಮಹೇಶ್ ಅಲಿಯಾಸ್ ಮನು(16) ಬಲಿಯಾಗಿದ್ದಾನೆ.

ಸ್ನೇಹಿತರು ಹೇಳಿದಂತೆ ಕೇಳಿ ಹೆಣವಾದ 

ಮೃತ ಮಹೇಶ್ ಹಾಗೂ ಅಪ್ರಾಪ್ತ ಆರೋಪಿಗಳು ಸ್ನೇಹಿತರು. ಒಬ್ಬ ಆರೋಪಿ ಚಿಕ್ಕ ವಯಸ್ಸಿನಲ್ಲೇ ತಾತನಿಂದ ವಾಮಾಚಾರ ಮಾಡುವುದನ್ನ ಕಲಿತಿದ್ದನಂತೆ, ಧನುರ್ಮಾಸದ ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಇಷ್ಟಾರ್ಥ ಸಿದ್ದಿಗಳು ನೆರವೇರುತ್ತವೆ ಎಂಬ ನಂಬಿಕೆ ಇದ್ಯಂತೆ. ಇದೇ ದೃಷ್ಟಿಯಿಂದ ಮಹೇಶ್ ನನ್ನು ಆರೋಪಿಗಳು  ಪುಸಲಾಯಿಸಿದ ಕೆರೆ ಬಳಿಗೆ ಕರೆತಂದಿದ್ದಾರೆ. ಸ್ಥಳದಲ್ಲಿ ಗೊಂಬೆಯೊಂದನ್ನ ತಯಾರಿಸಿ ಅದರ ಮೇಲೆ ಮಹೇಶ್ ಹೆಸರು ಬರೆದು ನಂತರ ಪೂಜೆ ಮಾಡಿದ್ದಾರೆ. ಸ್ನೇಹಿತರ ಉದ್ದೇಶ ಅರಿಯದ ಅಮಾಯಕ ಮಹೇಶ್ ಜೊತೆಗೆ ಬಂದಿದ್ದಾನೆ. ಪೂಜೆ ನಂತರ ಮಹೇಶ್ ನನ್ನು ಆರೋಪಿಗಳು ಕೆರೆಗೆ ತಳ್ಳಿದ್ದಾರೆ.

ಗೊಂಬೆ, ಕೋಳಿ, ಮಡಿಕೆ ಪತ್ತೆ 

ಕೃತ್ಯವೆಸಗಿದ ನಂತರ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮಹೇಶ್ ಕೆರೆಗೆ ಬಿದ್ದಿದ್ದಾನೆ ಎಂದು ಸ್ನೇಹಿತನೊಬ್ಬ ಗ್ರಾಮದ ಹಿರಿಯರಿಗೆ ಮಾಹಿತಿ ತಿಳಿಸಿದ್ದಾನೆ. ಗ್ರಾಮದ ಜನ ಕೆರೆಯಲ್ಲಿ ಶೋಧನೆ ಮಾಡಿದಾಗ ಮಹೇಶ್ ಮೃತದೇಹ ದೊರೆತಿದೆ. ಅಲ್ಲದೆ ಕೆರೆ ಬಳಿ ವಾಮಾಚಾರ ಪೂಜೆ ಮಾಡಿದ ಕುರುಹುಗಳು ಪತ್ತೆಯಾಗಿದೆ. ಗೊಂಬೆ, ಕೋಳಿ, ಮಡಿಕೆ ಸೇರಿದಂತೆ ಇನ್ನಿತರ ಪದಾರ್ಥಗಳು ದೊರೆತಿದೆ. ಕೌಲಂದೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರುಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

ಅಪ್ರಾಪ್ತರು ವಶಕ್ಕೆ 

ಹಳೆ ಚಾಳಿ ಮನೆ ಮಂದಿಗೆಲ್ಲ ಅಂತಾ, ತಾತಾ ವಾಮಾಚಾರ ಮಾಡ್ತಿದ್ದ ಅಂತಾ, ಎನೋ ಮಾಡಲು ಹೋಗಿ ಆರೋಪಿಗಳು ಅಮಾಯಕ ಬಾಲಕನನ್ನ ಬಲಿ ಪಡೆದಿದ್ದಾರೆ. ಇದೀಗ ಮಾಡಿದುಣ್ಣೊ ಮಾರಾಯ ಅಂತಾ ಕಂಬಿ ಹಿಂದೆ ಬಿದ್ದಿದ್ದಾರೆ. ಇನ್ನೂ ಬಂದಿತರೆಲ್ಲರೂ ಅಪ್ರಾಪ್ತರು ಎನ್ನುವ ಮಾತುಗಳ ಸಹ ಕೇಳಿ ಬರುತ್ತಿದ್ದೆ. ಆದ್ರೆ ಅವರ ಮೇಲೆ ಕಾನೂನಿನಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಿರೋ ಕಾದು ನೋಡಬೇಕಿದೆ.

ಜ.3ರಂದು ಇಳಕಲ್ ನಗರದಲ್ಲಿ ಮಧ್ಯರಾತ್ರಿ ಗಂಡನೇ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕಣ್ಣೆದುರೇ ತಾಯಿಯ ಸಾವನ್ನ ಕಂಡ ಮಕ್ಕಳಿಬ್ಬರು ಅಘಾತಕ್ಕೊಳಗಾಗಿದ್ದಾರೆ. ಇಳಕಲ್ ನಗರದ ಕವಿಶೆಟ್ಟಿ ಗಲ್ಲಿಯಲ್ಲಿ ಮಕ್ಕಳ ಎದುರೇ ರಾಡ್ ನಿಂದ ಹೊಡೆದು ಪತ್ನಿಯನ್ನ ಕೊಲೆಗೈಯಲಾಗಿದೆ. ಗಂಡ ಮೆಹಬೂಬ್ ಬಂಡಿ ಎಂಬುವನು ತನ್ನ ಹೆಂಡತಿ ಮದೀನಾ ಬಂಡಿ (27) ಅನ್ನು ಕೊಂದಿದ್ದಾನೆ. ಇವರಿಗೆ 9 ಹಾಗೂ 5 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತ್ನಿಯನ್ನು ಕೊಲೆಗೈದ ಬಳಿಕ ಮಕ್ಕಳನ್ನ ಮನೆಯಲ್ಲೇ ಕೂಡಿ ಹಾಕಿದ್ದ. ಮಕ್ಕಳು ತಾಯಿಯ ಶವದ ಎದುರು ಗಂಟೆಗಟ್ಟಲೇ ರೋದಿಸುತ್ತಾ ರಾತ್ರಿ ಕಳೆದಿವೆ. ಮಕ್ಕಳನ್ನು ಹೊರಗೂ ಬಿಡದೆ ತಂದೆಯಾದವನು ಅಮಾನುಷವಾಗಿ ನಡೆದುಕೊಂಡಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button