ರಾಜ್ಯಸುದ್ದಿ

ತಲೆ ತಿರುಗುವ ಸಮಸ್ಯೆ ಇದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ..!

 ಸಾಮಾನ್ಯವಾಗಿ ಹಲವಾರು ಜನರಿಗೆ ಆಗಾಗ ತಲೆತಿರುಗುತ್ತದೆ. ವಯಸ್ಸಾದಂತೆ ಇಂತಹ ಸಮಸ್ಯೆಗಳು ಉಂಟಾಗುತ್ತದೆ. ಆದರೆ ಹದಿಹರೆಯದವರಲ್ಲ ಸಹ ಈ ಸಮಸ್ಯೆಗಳು ಉಂಟಾಗುತ್ತದೆ.  ಇದು ಯಾವುದೇ ಚಲನೆಯಿಲ್ಲದೆ ಸಂಭವಿಸುತ್ತದೆ. ನಿಮ್ಮ ದೇಹವು ಸಮತೋಲನದಲ್ಲಿ ಇದ್ದರೂ  ಸಹ, ನಿಮ್ಮ ಇಂದ್ರಿಯಗಳ ಕಾರಣದಿಂದ ಈ ಸಮಸ್ಯೆ ಉಂಟಾಗುತ್ತದೆ.  ಇದ್ದಕ್ಕಿದ್ದಂತೆ ತಲೆಸುತ್ತು ಬಂದಂತಾಗುವುದು, ಸುತ್ತಮುತ್ತಲಿನ ವಾತಾವರಣ ಸಂಪೂರ್ಣ ತಿರುಗಿದಂತೆ ಕಾಣುವುದು ಇದರ ಜೊತೆಗೆ ವಾಕರಿಕೆ, ವಾಂತಿ, ತಾತ್ಕಾಲಿಕವಾಗಿ ಕಿವಿ ಕೇಳಿಸದಿರುವುದು, ಈ ಎಲ್ಲಾ ಸಮಸ್ಯೆಗಳು ವರ್ಟಿಗೋ ರೋಗಲಕ್ಷಣಗಳಲ್ಲಿ ಒಂದಾಗಿವೆ. ಕೆಲವು ಬಾರಿ ಈ ಸಮಸ್ಯೆಗೆ ಮನೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ಕಲೆವೊಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಹಾಗಾದ್ರೆ ಈ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದು ಇಲ್ಲಿದೆ.

 ಒತ್ತಡ ನಿರ್ವಹಣೆ ಮಾಡಬೇಕು

ಮೆನಿಯರ್ ಕಾಯಿಲೆ ಸೇರಿದಂತೆ ತಲೆತಿರುಗಲು ಕಾರಣವಾಗುವ ಕೆಲವು ಸಮಸ್ಯೆಗಳು ಒತ್ತಡದಿಂದ ಉಂಟಾಗಬಹುದು. ಒತ್ತಡದ ಸಂದರ್ಭಗಳನ್ನು  ಸರಿಯಾಗಿ ನಿರ್ವಹಣೆ ಮಾಡುವುದರಿಂದ ತಲೆತಿರುಗುವುದನ್ನ ಕಡಿಮೆ ಮಾಡಬಹುದು.ಮೊದಲು ನಿಮ್ಮ ಒತ್ತಡಕ್ಕೆ ಕಾರಣವೇನು ಎಂಬುದನ್ನ ತಿಳಿದುಕೊಂಡು ಅದನ್ನು ಹೋಗಲಾಡಿಸಲು ಪ್ರಯತ್ನಿಸಿ.

ಲೆಮೆನ್ ಬಾಮ್

ಲೆಮೆನ್​ ಬಾಮ್​ನಲ್ಲಿರುವ ಆ್ಯಂಟಿ ವೈರಲ್ ಅಂಶಗಳು ಮಾನಸಿಕ ಖಿನ್ನತೆ, ಮಾನಸಿಕ ಆತಂಕ, ಅಧಿಕ ರಕ್ತದ ಒತ್ತಡ, ಮೈಗ್ರೇನ್, ಇನ್ಸೋಮ್ನಿಯಾ, ದೌರ್ಬಲ್ಯ, ವರ್ಟಿಗೊ ಇತ್ಯಾದಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿ ಎನ್ನಲಾಗುತ್ತದೆ. ಅಲ್ಲದೇ ನಿಂಬೆಯ ನೀರನ್ನು ಸೇವನೆ ಮಾಡುವುದು ಸಹ ಈ ಸಮಸ್ಯೆಗೆ ಪರಿಹಾರ ನೀಡುತ್ತದೆ ಎನ್ನಲಾಗುತ್ತದೆ. ಹಾಗಾಗಿ ವರ್ಟಿಗೋ ಸಮಸ್ಯೆಯನ್ನು ಅನುಭವಿಸುತ್ತಿರುವವರು ಪ್ರತಿದಿನ ನಿಂಬೆಯ ನೀರನ್ನು ಸೇವನೆ  ಮಾಡುವುದು ಉತ್ತಮ.

ಮದ್ಯಪಾನ ಮಾಡಬೇಡಿ

ವೆಸ್ಟಿಬುಲರ್ ಡಿಸಾರ್ಡರ್ಸ್ ಅಸೋಸಿಯೇಷನ್ ​​ಪ್ರಕಾರ, ಕುಡಿಯುವಾಗ ನೀವು ಅನುಭವಿಸುವ ತಲೆತಿರುಗುವಿಕೆಯನ್ನು ಮೀರಿ, ಆಲ್ಕೋಹಾಲ್ ನಿಮ್ಮ ಒಳಗಿನ ಕಿವಿಯಲ್ಲಿ ದ್ರವದ ಸಂಯೋಜನೆಯನ್ನು ಬದಲಾಯಿಸಬಹುದು. ಆಲ್ಕೋಹಾಲ್ ಕೂಡ ನಿಮ್ಮನ್ನು ನಿರ್ಜಲೀಕರಣಗೊಳಿಸುತ್ತದೆ. ಈ ವಿಷಯಗಳು ನಿಮ್ಮ ಸಮತೋಲನದ ಮೇಲೆ ಪರಿಣಾಮ ಬೀರಬಹುದು. ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು ನಿಮ್ಮ ವರ್ಟಿಗೋ ಸಮಸ್ಯೆಗೆ ಪರಿಹಾರ ನೀಡಬಹುದು.

ಹೆಚ್ಚು ನೀರು ಕುಡಿಯಿರಿ

ಕೆಲವೊಮ್ಮೆ ವರ್ಟಿಗೋ ನಿರ್ಜಲೀಕರಣದಿಂದ ಉಂಟಾಗುತ್ತದೆ. ಇದು ನೀವು ಸೋಡಿಯಂ ಸೇವನೆಯನ್ನು ಕಡಿಮೆ ಮಾಡಿದರೆ ಸಹಾಯ ಮಾಡಬಹುದು. ಆದರೆ ಹೈಡ್ರೇಟೆಡ್ ಆಗಿ ಉಳಿಯಲು ಉತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು. ನಿಮ್ಮ ನೀರಿನ ಸೇವನೆಯನ್ನು ಮಾಡಿ. ನೀವು ಎಷ್ಟು ನೀರು ಕುಡಿಯುತ್ತಿದ್ದೀರಿ ಎಂಬುದರ ಮೇಲೆ ನಿಮ್ಮ ತಲೆ ತಿರುಗುವಿಕೆ ಕಡಿಮೆಯಾಗುತ್ತದೆ.

ಶುಂಠಿ ತಿನ್ನಿ

ಶುಂಠಿ ತಿನ್ನುದರಿಂದ ಈ ಸಮಸ್ಯೆಗೆ ಮುಕ್ತಿ ಲಭಿಸುತ್ತದೆ.  ಇದು ತಲೆಸುತ್ತು ಬರುವಿಕೆ, ಮೈಗ್ರೇನ್ ಸಮಸ್ಯೆ ಹಾಗೂ ಇನ್ನಿತರ ತೊಂದರೆಗಳನ್ನು ಶುಂಠಿ ಚಹಾ ನಿಯಮಿತವಾಗಿ ಸೇವನೆ ಮಾಡುವುದರಿಂದ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ.  ಅಲ್ಲದೇ ಕೆಲವು ಬಾರೀ ಲವಂಗ ಮತ್ತು ಕೊತ್ತಂಬರಿ ಬೀಜಗಳ ಬಳಕೆ ಈ ಸಮಸ್ಯೆಗೆ ಪರಿಹಾರ ಎನ್ನಲಾಗುತ್ತದೆ. ಆದರೆ ನಿಮ್ಮ ಸಮಸ್ಯೆ ಹೆಚ್ಚಾಗುತ್ತಿದೆ ಅನಿಸಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Related Articles

Leave a Reply

Your email address will not be published. Required fields are marked *

Back to top button