ತಮ್ಮ ಬಳಿ ಎಷ್ಟೇ ಹಣವಿದ್ದರೂ ದಾನ, ಧರ್ಮ ಮಾಡುವ ಮನಸ್ಸು ಇರಬೇಕು. ಅಂತಹ ಮನಸ್ಸು ನಾಗೇಶ್ ಅವರಲ್ಲಿದೆ: ಕೆ.ವೈ.ನಂಜೇಗೌಡ
ಮಾಲೂರು:
ತಮ್ಮ ಬಳಿ ಎಷ್ಟೇ ಹಣವಿದ್ದರೂ ದಾನ,ಧರ್ಮ ಮಾಡುವ ಮನಸ್ಸು ಇರಬೇಕು. ಅಂತಹ ಮನಸ್ಸು ನಾಗೇಶ್ ಅವರಲ್ಲಿದೆ ಬಡತನದಲ್ಲಿರುವವರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡುವುದರ ಮೂಲಕ ದೀಪಾವಳಿ ಹಬ್ಬ ದಿನಸಿ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ವೈ.ನಂಜೇಗೌಡ
ಹೇಳಿದರು.
ತಾಲ್ಲೂಕಿನ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಮಾಜಿ ತಾ.ಪಂ ಸದಸ್ಯ ವಿ.ನಾಗೇಶ್ ಅವರು ಉಚಿತವಾಗಿ ದೀಪಾವಳಿ ದಿನಸಿ ಸಾಮಾಗ್ರಿಗಳ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಮಾತನಾಡಿದರು.
ಚಿಕ್ಕತಿರುಪತಿ ವ್ಯಾಪ್ತಿಯಲ್ಲಿ ಬಹಳಷ್ಟು ಜನ ಬಡವರು, ನಿತ್ಯ ಕೂಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಮಧ್ಯಮ ವರ್ಗದವರು ಜೀವನ ಮಾಡುತ್ತಿದ್ದು, ಗ್ರಾಮದ ಪ್ರತಿ ಮನೆಗೂ ದಾನಿಗಳಾದ ತಾಪಂ ಮಾಜಿ ಸದಸ್ಯ ಹಾಗೂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ನಾಗೇಶ್ ಹಾಗೂ ಜಿ.ವಿ.ಮಂಜುನಾಥ್, ಸದಸ್ಯ ರಾಘವೇಂದ್ರ ಅವರು ದೀಪಾವಳಿ ಹಬ್ಬದ ಅಂಗವಾಗಿ ದೀಪಾವಳಿ ದಿನಸಿ ಕಿಟ್ ವಿತರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಣ್ಣೆ, ಬೆಲ್ಲ, ಕೆಂಪಕ್ಕಿ, ಎಳ್ಳು ಸೇರಿ ಹಲವು ಪಡಿತರವನ್ನು ಪಡೆದು ದೀಪಾವಳಿಯನ್ನು ಪ್ರತಿಯೊಬ್ಬರೂ ಆಚರಣೆ ಮಾಡಬೇಕು ಎಂದರು. ಸುಮಾರು 500 ಕುಟುಂಬಗಳಿಗೆ ದೀಪಾವಳಿ ದಿನಸಿ ಕಿಟ್‌ಗಳನ್ನು ವಿತರಿಸಿದರು.
ಗ್ರಾಪಂ ಸದಸ್ಯರಾದ ರಾಘವೇಂದ್ರ, ಕಲ್ಕೇರಿ ಶ್ರೀಧರ್, ಮೂರ್ತಿ, ಎಟ್ಟಕೋಡಿ ಶಶಿಧರ್, ಮುನಿವೇಲು, ಮುಖಂಡ ಎಟ್ಟಕೋಡಿ ವೀರಭಪ್ಪ, ನಾಗೇಶ್, ರಾಜಪ್ಪ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ, ಅಲಂಬಾಡಿ ಗೋಪಾಲ್ ಇದ್ದರು.