ಡ್ರ್ಯಾಗನ್ ರಾಷ್ಟ್ರದ ಮತ್ತೊಂದು ಸಿಟಿ ಲಾಕ್ಡೌನ್..!
ಚೀನಾ: ಡೆಡ್ಲಿ ಕೊರೋನಾ ಚೀನಾವನ್ನು ಬೆಚ್ಚಿ ಬೀಳಿಸುತ್ತಿದ್ದು, ಡ್ರ್ಯಾಗನ್ ರಾಷ್ಟ್ರದ ಮತ್ತೊಂದು ಸಿಟಿ ಲಾಕ್ಡೌನ್ ಆಗಿದೆ. ಕೊರೋನಾದಿಂದ ಶಾಂಘೈ ನಗರ ಪೂರ್ಣ ಲಾಕ್ ಮಾಡಲಾಗಿದ್ದು, ಶಾಂಘೈನ 2.6 ಕೋಟಿ ಜನರಿಗೂ ಕೊರೋನಾ ಟೆಸ್ಟ್ ಮಾಲಾಗಿದೆ.2019ರ ನಂತರ ಚೀನಾದಲ್ಲೇ ಅತೀ ದೊಡ್ಡ ಲಾಕ್ಡೌನ್ ಮಾಡಲಾಗಿದ್ದು, ಚೀನಾದ ಎಕನಾಮಿಕ್ ಕ್ಯಾಪಿಟಲ್ ಶಾಂಘೈ ನಗರ, ಸೋಮವಾರದಿಂದ ಶುಕ್ರವಾರದವರೆಗೂ ಪೂರ್ಣ ಲಾಕ್ ಆಗಿದೆ. ಮನೆಯಲ್ಲೇ ಇದ್ದು ಎಲ್ಲರೂ ಟೆಸ್ಟ್ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದ್ದು, ಲಾಕ್ಡೌನ್ ಕಾರಣಕ್ಕೆ ಭಾನುವಾರ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.
ಶಾಂಘೈನಲ್ಲಿ ನಡೆಯಬೇಕಿದ್ದ ಎಲ್ಲಾ ಉತ್ಸವಗಳೂ ಏಪ್ರಿಲ್ 10ವರೆಗೆ ರದ್ದು ಮಾಡಲಾಗಿದ್ದು, ಭಾನುವಾರ ಒಂದೇ ದಿನ ಶಾಂಘೈನಲ್ಲಿ 3500 ಕೊರೋನಾ ಕೇಸ್ ಪತ್ತೆಯಾಗಿದೆ. ಚೀನಾದ್ಯಂತ 50 ಸಾವಿರಕ್ಕೂ ಹೆಚ್ಚು ಕೇಸ್, ಮಾರ್ಚ್ವರೆಗೆ 4000 ಡೆತ್ ಆಗಿದ್ದು, ಚೀನಾದ ಪ್ರಮುಖ ನಗರಗಳಲ್ಲಿ ಲಾಕ್ ಹೇರಿ ಕೊರೋನಾ ಟೆಸ್ಟ್ ಮಾಡಲಾಗುತ್ತಿದೆ.