ಡ್ರೈ ಫ್ರೂಟ್ಸ್ಗಳಲ್ಲಿ ಒಂದಾದ ವಾಲ್ನಟ್ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವು..
ವಾಲ್ ನಟ್ಸ್ ನಲ್ಲಿ ಮೆಗ್ನೀಸಿಯಮ್, ತಾಮ್ರ, ವಿಟಮಿನ್ ಎ, ಡಿ , ಆ್ಯಂಟಿ ಆಕ್ಸಿಡೆಂಟ್ ಸೇರಿದಂತೆ ವಿವಿಧ ಪೋಷಕಾಂಶಗಳನ್ನು ಹೊಂದಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಪ್ರತಿದಿನ 4 ರಿಂದ 6 ವಾಲ್ನಟ್ ತಿಂದು ನೀರು ಕುಡಿಯುವುದರಿಂದ ನಿಮ್ಮ ತೂಕ ಇಳಿಯುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿದೆ. ಒಮೆಗಾ 3 ಕೊಬ್ಬಿನಾಮ್ಲಗಳು, ಪ್ರೋಟೀನ್ ಇರುವುದರಿಂದ ಹಸಿವಾಗದಂತೆ ತಡೆಯುತ್ತದೆ.
ಗರ್ಭಿಣಿಯರಲ್ಲಿ ಕೆಲವೊಮ್ಮೆ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ, ಇದು ಮಗುವಿನ ಆರೋಗ್ಯಕ್ಕೆ ಅಪಾಯ, ಹಾಗಾಗಿ ಗರ್ಭಿಣಿಯರು ದಿನಕ್ಕೆ 2 ವಾಲ್ನಟ್ ತಿನ್ನುವುದು ಒಳ್ಳೆಯದು.
ವಾಲ್ನಟ್ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ಹೆಚ್ಚು ಉತ್ತಮ. ವಾಲ್ ನಟ್ಸ್ನಲ್ಲಿ ಅಪಾರ ಪ್ರಮಾಣದ ಮೊನೊಸಾಚುರೇಟೆಡ್ ಕೊಬ್ಬುಗಳಿದ್ದು, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ವಾಲ್ ನಟ್ಸ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದ್ದು, ಅನೇಕ ರೋಗಗಳು ನಮ್ಮನ್ನ ಕಾಡದಂತೆ ತಡೆಯುತ್ತವೆ. ಇದನ್ನು ದಿನಕ್ಕೆ ಒಂದು ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
ವಾಲ್ನಟ್ನಲ್ಲಿರುವ ಮೈಕ್ರೋಬಯೋಟಾ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಈ ಮೂಲಕ ನಮ್ಮ ಜೀರ್ಣಕ್ರಿಯೆಯ ಮೇಲೆ ಸಹ ಪರಿಣಾಮ ಬೀರುವುದರಿಂದ , ಯಾವುದೇ ರೀತಿಯ ಜೀರ್ಣಕ್ರಿಯೆ ಸಮಸ್ಯೆ ಬರದಂತೆ ತಡೆಯುತ್ತದೆ
ವಾಲ್ ನಟ್ಸ್ ಫೈಟೊಕೆಮಿಕಲ್ಗಳನ್ನು ಒಳಗೊಂಡಿರುತ್ತವೆ, ಇದು ಮೆದುಳಿನ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ವೈದ್ಯರು. ಇದರಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಮೆದುಳಿನಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೇವಲ ಗರ್ಭಿಣಿಯರು ಮಾತ್ರವಲ್ಲ , ಅಧಿಕ ರಕ್ತದೊತ್ತಡದ ಸಮಸ್ಯೆ ಇರುವ ಯಾವುದೇ ವ್ಯಕ್ತಿಗಳು, ದಿನಕ್ಕೆ ಒಂದಾದರೂ ವಾಲ್ನಟ್ ತಿನ್ನಿ ಎಂದು ವೈದ್ಯರು ಸಲಹೆ ನೀಡುತ್ತಾರೆ.
ವಾಲ್ನಟ್ ಸೇವನೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಬರದಂತೆ ತಡೆಯಬಹುದು ಎನ್ನಲಾಗುತ್ತದೆ. ಅಲ್ಲದೇ ಈಗಾಗಲೇ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದರೆ, ಇದನ್ನು ತಿಂದರೆ ಪರಿಣಾಮಕಾರಿ ಪ್ರಯೋಜನ ನೀಡುತ್ತದೆ.
ವಾಲ್ನಟ್ ಸೇವನೆ ಪುರುಷರಿಗೆ ಹೆಚ್ಚು ಸಹಾಯ ಮಾಡುತ್ತದೆ. ಇದು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವುದಲ್ಲದೇ, ವೀರ್ಯ ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.