ಕ್ರೈಂ

ಡೇಟಿಂಗ್ ಆ್ಯಪ್ ಮೂಲಕ ಸ್ನೇಹ: ಬೆಂಗಳೂರಿನಲ್ಲಿ ಮೂವರು ಯುವಕರಿಗೆ ಲಕ್ಷಾಂತರ ರೂ. ವಂಚನೆ..

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಇತ್ತೀಚೆಗೆ ಡೇಟಿಂಗ್​ ಆ್ಯಪ್​ಗಳ ಮೂಲಕ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಈ ಸಂಬಂಧ ಆಗ್ನೇಯ ವಿಭಾಗ ಸಿಎಎನ್​ ಠಾಣೆಯಲ್ಲಿ ಮೂರು ಎಫ್​ಐಆರ್​ ದಾಖಲಾಗಿವೆ.

ವಿಲಾಸಿತ್ ಕುಮಾರ್, ತುಷಾರ್ ಗೋಯಲ್, ಫೆನಿಲ್ ಸುಚಕ್ ಎಂಬುವವರಿಗೆ ಡೇಟಿಂಗ್​ ಆ್ಯಪ್​ಗಳ ಮೂಲಕ 1 ಲಕ್ಷದ 22 ಸಾವಿರ ರೂಪಾಯಿ ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಡೇಟಿಂಗ್​ ಆ್ಯಪ್​ಗಳ ಮುಖಾಂತರ ಸ್ನೇಹ ಬೆಳೆಸಿಕೊಂಡು ವಿಡಿಯೋ ಕರೆ ಮಾಡುತ್ತಿದ್ದ ಯುವತಿಯರು, ಅದನ್ನು ರೆಕಾರ್ಡ್​ ಮಾಡಿಟ್ಟುಕೊಂಡು ನಂತರ ಹಣಕ್ಕೆ ಬೇಡಿಕೆ ಇಡುತ್ತಿದ್ದರು.

ಒಂದು ವೇಳೆ ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಇದೇ ರೀತಿ ಬೆದರಿಕೆ ಹಾಕಿ ಮೂವರಿಂದ ಹಣ ವಸೂಲಿ ಮಾಡಿದ್ದರು. ಸದ್ಯ ಆಗ್ನೇಯ ವಿಭಾಗದ ಸೈಬರ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button