ಇತ್ತೀಚಿನ ಸುದ್ದಿಸುದ್ದಿ
ಡಿಡಿಪಿಐ ಶಿಕ್ಷಕಿ ವರ್ಗಾವಣೆಗೆ ಲಂಚ ಕಚೇರಿ ಅಧೀಕ್ಷಕ ಲೋಕಾಯುಕ್ತ ಬಲೆ

ಹಾಸನ:ಲಂಚ ಸ್ವೀಕರಿಸುತ್ತಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮತ್ತು ಕಚೇರಿ ಅಧೀಕ್ಷಕನನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.ಡಿಡಿಪಿಐ ಹೆಚ್.ಕೆ.ಪಾಂಡು ಮತ್ತು ಕಚೇರಿ ಅಧೀಕ್ಷಕ ಎ.ಎಸ್.ವೇಣುಗೋಪಾಲ್ ರಾವ್ ಸಿಕ್ಕಿಬಿದ್ದ ಅಧಿಕಾರಿಗಳು. ಇವರು ಖಾಸಗಿ ಶಾಲೆಯ ಶಿಕ್ಷಕಿಯ ವರ್ಗಾವಣೆಗೆ ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ಶಿಕ್ಷಕಿಯ ಪತಿ ಅಭಿಜಿತ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಲಂಚ ಮೊದಲ ಕಂತಿನಲ್ಲಿ 40 ಸಾವಿರ ರೂ. ಅನ್ನು ಶಿಕ್ಷಕಿ ಡಿಡಿಪಿಐಗೆ ನೀಡುತ್ತಿದ್ದಾಗ ಅವರು ಅಧೀಕ್ಷಕರ ಮೂಲಕ ಕೇಳಿದ್ದಾರೆ ಎಂದು ಶಿಕ್ಷಕಿಯ ಪತಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಬಾಲು ಹಾಗೂ ಶಿಲ್ಪಾ ನೇತೃತ್ವದ ತಂಡವು ಆರೋಪಿಗಳಿಬ್ಬರನ್ನೂ ಹಣದ ಸಮೇತ ಬಂಧಿಸಿತು.
ನ್ಯೂಸ್10ಕನ್ನಡ ರಿಪೋರ್ಟರ್ – ಸುನಿಲ್ ಗೌಡ 🖋️