Facial Recognition: 21ನೇ ಶತಮಾನ(21st Century)ದ ನಾಗಾಲೋಟದ ಜಗತ್ತಿ(World)ನಲ್ಲಿ ಎಲ್ಲ ವ್ಯವಸ್ಥೆಯಲ್ಲೂ ಬದಲಾವಣೆಗಳಾಗುತ್ತಿವೆ. ಆರ್ಥಿಕ ವಲಯದಿಂದ ಹಿಡಿದು ಪ್ರತಿಯೊಂದು ವಲಯವು ತನ್ನದೇ ತತ್ವ ಸಿದ್ಧಾಂತಗಳ ಅಡಿ ಕಾರ್ಯಗಳನ್ನು ಕೈಗೊಳ್ಳುತ್ತಿವೆ. ಇದಕ್ಕೆ ಪಾವತಿ ವ್ಯವಸ್ಥೆ(Payment System)ಯು ಹೊರತಾಗಿಲ್ಲ. ಡಿಜಿಟಲ್ ಪೇಮೆಂಟ್(Digital Payment) ಮಾಡುವುದು ಇನ್ನುಮುಂದೆ ಹಳೆಯ ಸ್ಟೈಲ್ ಆಗುತ್ತೆ.
ಯಾಕೆ ಅಂತೀರಾ? ಮುಂದೆ ನೋಡಿ. ಇನ್ಮುಂದೆ ನೀವು ಸೂಪರ್ ಮಾರ್ಕೆಟ್(Super Market)ಗೆ ಹೋಗಿ ಏನಾದರೂ ಖರೀದಿಸಿದರೆ, ನಿಮ್ಮ ಫೋನ್(Phone) ಹಾಗೂ ಕಾರ್ಡ್(Card)ಗಳನ್ನ ಬಳಸದೇ, ಪಾವತಿ ಮಾಡಬಹುದು. ಹೌದು, ಇತಂಹದ್ದೊಂದು ಹೊಸ ವ್ಯವಸ್ಥೆ(New System) ಬಂದಿದೆ. ಶಾಪಿಂಗ್(Shopping) ಮಾಡಿದ ಮೇಲೆ ಕಾರ್ಡ್ ಮನೆಯಲ್ಲೇ ಮರೆತು ಪೇಚಿಗೆ ಸಿಲುಕುವ ಪ್ರಸಂಗ ಬರೋದಿಲ್ಲ. ಯಾಕಂದ್ರೆ ಜಸ್ಟ್ ನಿಮ್ಮ ಫೇಸ್ ಸ್ಕ್ಯಾನ್(Face Scan) ಮಾಡಿ ನೀವು ಹಣ ಪಾವತಿಸಬಹುದು. ಪಾವತಿ ವ್ಯವಸ್ಥೆಯನ್ನು ಇನ್ನೂ ಸುಲಭಗೊಳಿಸಲು ಈ ಮುಖ ಗುರುತು ವ್ಯವಸ್ಥೆ ಬಹಳ ಸಹಾಯ ಮಾಡುತ್ತೆ.

ಎಲ್ಲೆಡೆ ಮುನ್ನೆಲೆಗೆ ಬರುತ್ತಿದೆ ಈ ವ್ಯವಸ್ಥೆ
ಎಲ್ಲೆಡೆ ಇದೀಗ ಪಾವತಿ ವ್ಯವಸ್ಥೆಯಲ್ಲಿ ಮುಖ ಗುರುತು (Facial Recognition) ಮುನ್ನೆಲೆಗೆ ಬರುತ್ತಿದೆ. ಇನ್ನು ಕೋವಿಡ್-19ನಿಂದಾಗಿ ಈಗಾಗಲೇ ಬಯೋಮೆಟ್ರಿಕ್ ಸಂಪರ್ಕರಹಿತ ಪಾವತಿ ವಿಧಾನಗಳನ್ನು ಉತ್ತೇಜಿಸಿದೆ. ಈ ಪಾವತಿ ವಿಧಾನವು ಒಂದು ಹೆಜ್ಜೆ ಮುಂದಿದೆ.ಇದು ವೈಜ್ಞಾನಿಕ ವಿಧಾನದಂತೆ ತೋರಿದರೂ ಈಗಾಗಲೇ ಎಲ್ಲೆಡೆ ಬಳಕೆಯಾಗುತ್ತಲಿದೆ. ಈ ಹೈಟೆಕ್ ಪಾವತಿ ವಿಧಾನದಿಂದಾಗಿ, ನೀವು ಸ್ಮಾರ್ಟ್‍ಫೋನ್, ಬ್ಯಾಂಕ್ ಕಾರ್ಡ್ ಅಥವಾ ಯಾವುದೇ ರೀತಿಯ ಗುರುತಿನ ಚೀಟಿ ಒಯ್ಯುವ ಅಗತ್ಯವಿರುವುದಿಲ್ಲ ಅಥವಾ ಪಾವತಿ ಮಾಡಲು ಪಿನ್ ಸಂಖ್ಯೆಯನ್ನು ನಮೂದಿಸುವ ಅಗತ್ಯವಿಲ್ಲ.
ಇದು ಹೇಗೆ ಕೆಲಸ ಮಾಡುತ್ತದೆ?
• ಮುಖವನ್ನು ಸ್ಕ್ಯಾನ್ ಮಾಡುವ ಮತ್ತು ಬಳಕೆದಾರರನ್ನು ಗುರುತಿಸುವ ಸಾಧನದ ಪರದೆಯ ಮೇಲೆ ಬಳಕೆದಾರರು ‘ಪೇ ವಿತ್ ಫೇಸ್ ರೆಕಗ್ನಿಷನ್’ ಟ್ಯಾಪ್ ಮಾಡಬೇಕು.
• ಬಳಕೆದಾರರು ನಂತರ ಪಾವತಿಯನ್ನು ದೃಢೀಕರಿಸಿ ಅದನ್ನು ಟ್ಯಾಪ್ ಮಾಡುತ್ತಾರೆ ಮತ್ತು ಈ ಮೋಡ್ ಮೂಲಕ ಪಾವತಿಯನ್ನು ಸ್ವಯಂಚಾಲಿತವಾಗಿ ಮಾಡಲಾಗುತ್ತದೆ.