ರಾಜ್ಯ
Trending

ಡಿಕೆ ಬ್ರದರ್ಸ್​ ಬುಡಕ್ಕೆ ನ್ಯಾಷನಲ್ ಹೆರಾಲ್ಡ್ ಪ್ರಕರಣ

ನವದೆಹಲಿ/ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ (National Herald Case) ಈಗ ಡಿಸಿಎಂ ಡಿಕೆ ಶಿವಕುಮಾರ್ (DK Shivakumar)  ಹಾಗೂ ಮಾಜಿ ಸಂಸದ ಡಿಕೆ ಸುರೇಶ್​  (DK Suresh) ಬುಡಕ್ಕೆ ಬಂದಿದೆ. ಯಂಗ್‌ ಇಂಡಿಯಾಗೆ ಡಿಕೆ ಶಿವಕುಮಾರ್‌ ಮತ್ತು ಡಿಕೆ ಸುರೇಶ್‌ 2.5 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ಚಾರ್ಜ್ ಶೀಟ್ ನಲ್ಲಿ ಇಬ್ಬರ ಹೆಸರು ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ಡಿಕೆ ಬ್ರದರ್ಸ್​ಗೆ ಇಡಿ ಸಂಕಷ್ಟ ಎದುರಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಹೋದರರು, ನಾನು 25 ಲಕ್ಷ, ನನ್ನ ತಮ್ಮ ಡಿ.ಕೆ.ಸುರೇಶ್ 25 ಲಕ್ಷ ಕೊಟ್ಟಿದ್ದಾನೆ. ನಮ್ಮ ಪಕ್ಷ ನಡೆಸುತ್ತಿದ್ದ ಪತ್ರಿಕೆಗೆ ದೇಣಿಗೆ ಕೊಟ್ಟರೆ ತಪ್ಪೇನು? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಕೆ ಶಿವಕುಮಾರ್, ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಗೆ ನಾವು 50 ಲಕ್ಷ ರೂ. ಹಣ ಕೊಟ್ಟಿದ್ದೇವೆ. ನಾನು 25 ಲಕ್ಷ, ನನ್ನ ತಮ್ಮ ಡಿ.ಕೆ.ಸುರೇಶ್ 25 ಲಕ್ಷ ಕೊಟ್ಟಿದ್ದಾನೆ. ನಮ್ಮ ಪಕ್ಷ ನಡೆಸುತ್ತಿದ್ದ ಪತ್ರಿಕೆಗೆ ದೇಣಿಗೆ ಕೊಟ್ಟರೆ ತಪ್ಪೇನು? ಟ್ರಸ್ಟ್ ವತಿಯಿಂದಲೂ ನ್ಯಾಷನಲ್ ಹೆರಾಲ್ಡ್​ಗೆ ದೇಣಿಗೆ ನೀಡಿದ್ದೇವೆ. ನಾವೇನು ಕದ್ದು ದೇಣಿಗೆ ಕೊಟ್ಟಿದ್ದೀವಾ? ಸಂಪಾದನೆ ಮಾಡಿದ ಆಸ್ತಿಯಿಂದ ರಾಜಾರೋಷವಾಗಿಯೇ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್​ ಪ್ರತಿಕ್ರಿಯಿಸಿ, ಯಂಗ್ ಇಂಡಿಯಾ ಟ್ರಸ್ಟ್ ಗೆ ಹಣ ಕೊಟ್ಟಿದ್ದೇವೆ. ಎರಡು, ಎರಡೂವರೆ ಕೋಟಿ ರೂ. ಹಣ ಕೊಟ್ಟಿದ್ದೇವೆ. ಈ ಸಂಬಂಧ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇವೆ. ನಾವು ಕೊಟ್ಟಿಲ್ಲ ಅಂತ ಹೇಳುತ್ತಿಲ್ಲ. ದುರುದ್ದೇಶ ಪೂರ್ವಕವಾಗಿ ಆರೋಪ ಮಾಡುತ್ತಿದ್ದು, ನಮ್ಮ‌ ಕಾಂಗ್ರೆಸ್ ನಾಯಕರ‌ ಮೇಲೆ‌ ಹೊರಿಸುವ ಪ್ರಯತ್ನ ಚಾರ್ಜ್‌ಶೀಟ್ ನಲ್ಲಿ ಮಾಡಿದ್ದಾರೆ. ನಾವು ಕಾನೂನಾತ್ಮಕವಾಗಿ‌ ಹೋರಾಟ ಮಾಡುತ್ತೇವೆ. ಇದು ರಾಜಕೀಯ ಪೂರಿತವಾದ ಪ್ರಕರಣ. ಸೋನಿಯಾ ಗಾಂಧಿಯವರ ಟ್ರಸ್ಟ್ ಅಲ್ಲ. ಯಂಗ್ ಇಂಡಿಯಾ ಸಂಸ್ಥೆಗೆ ಕೊಟ್ಟಿರೋದು. ಅವರು ವೈಯುಕ್ತಿಕವಾಗಿ ಹಣ ಬಳಸಿಕೊಂಡಿಲ್ಲ. ಅದು‌ ಟ್ರಸ್ಟ್ ಗೆ ಬಳಕೆಯಾಗಿದೆ. ಇಡಿಯವರಿಗೂ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಇದರಲ್ಲಿ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದರು.

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸಿದ್ದ ಇಡಿ ಅಧಿಕಾರಿಗಳು , ದೇಣಿಗೆ ನೀಡಿದ್ದ ಮೂಲವನ್ನು ಕೆದಕಿದ್ದು, ಈ ಸಂಬಂಧ 2022ರ ನವೆಂಬರ್ ನಲ್ಲಿ ಡಿಕೆ ಸರೇಶ್ ಅವರನ್ನು ವಿಚಾರಣೆಗೊಳಪಡಿಸಿತ್ತು. ಎರಡು ದಿನಗಳ ವಿಚಾರಣೆ ವೇಳೆ ಡಿಕೆ ಸುರೇಶ್ ಸಹ ದೇಣಿಗೆ ನೀಡಿದ ಹಣದ ಮೂಲದ ದಾಖಲೆಗಳನ್ನು ಇಡಿ ಮುಂದಿಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಈ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ಚಾರ್ಜ್​ಶೀಟ್​ನಲ್ಲಿ ಇಡಿ ಅಧಿಕಾರಿಗಳು, ಡಿಸಿಎಂ ಡಿಕೆ ಶಿವಕುಮಾರ್, ಡಿಕೆ ಸುರೇಶ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೆಸರು ಉಲ್ಲೇಖ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button