ಕ್ರೀಡೆಸುದ್ದಿ

ಟ್ರೋಲ್ ವಿರುದ್ಧ ಕಿಡಿ: ವಿರಾಟ್ ಕೊಹ್ಲಿ ಪುತ್ರಿಗೆ ರೇಪ್ ಬೆದರಿಕೆ ಹಾಕಿದ ನೀಚ..!

ಟೀಂ ಇಂಡಿಯಾ ಟಿ20 ವಿಶ್ವಕಪ್ (T20 World cup) ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ಬಳಿಕ ಆಟಗಾರರನ್ನು ಟ್ರೋಲ್ ಮಾಡಲಾಗುತ್ತಿದೆ. ಇತ್ತ ಬೌಲರ್ ಮೊಹಮದ್ ಶಮಿ (Mohammed Shami) ಅವರನ್ನು ಗುರಿಯಾಗಿಸಿ ವಿವಾದಾತ್ಮಕ ಹೇಳಿಕೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಶಮಿ ಅವದ ಧರ್ವವನ್ನು ಗುರಿಯಾಗಿಸಿ ಕೆಲ ಬಳಕೆದಾರರು ಅತ್ಯಂತ ಕೀಳುಮಟ್ಟದ ಸಾಲುಗಳನ್ನು ಬರೆದುಕೊಂಡಿದ್ದರು. ಇತ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಸಹ ಟ್ರೋಲ್ ಆಗಿದ್ದರು. ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿದ್ದ ವಿರಾಟ್ ಕೊಹ್ಲಿ, ಅವರು ಬೆನ್ನಲಬು ಇಲ್ಲದೇ ಇರುವವರು ಎಂದು ತಿರುಗೇಟು ನೀಡಿದ್ದರು.

ಇಷ್ಟಕ್ಕೆ ಸುಮ್ಮನಾಗದ ಟ್ರೋಲರ್ ಗಳು ಮತ್ತೆ ವಿರಾಟ್ ಕೊಹ್ಲಿ ವೈಯಕ್ತಿಯ ಜೀವನದ ಕುರಿತು ಆಕ್ಷೇಪಾರ್ಹ ಸಾಲುಗಳನ್ನು ಬರೆಯಲಾರಂಭಿಸಿದ್ದರು. ವಿರಾಟ್ ಕೊಹ್ಲಿ ಪುತ್ರಿ ವಮಿಕಾ ಬಗ್ಗೆ ಅಸಂವೇದನಶೀಲ ಟಿಪ್ಪಣಿ ಮಾಡಿದ್ದಾರೆ. ಎಲ್ಲಿಯವರೆಗೆ ಅಂದ್ರೆ ವಮಿಕಾಳನ್ನು  ಅತ್ಯಾಚಾರ ಮಾಡೋದಾಗಿ ನೀಚರು ಬೆದರಿಕೆ ಹಾಕಿದ್ದಾರೆ.

ವಮಿಕಾಗೆ ಬೆದರಿಕೆ ಹಾಕಿರುವ ನೀಚರ ಪೋಸ್ಟ್ ಗಳ ಸ್ಕ್ರೀನ್ ಶಾಟ್ ಗಳನ್ನು ಆಂಡ್ರೆ ಬೋರ್ಗೆಸ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ರೇಪ್ ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ. ವಿರಾಟ್ ಕೊಹ್ಲಿ ಅವರನ್ನು ಸಮರ್ಥಿಸಿಕೊಂಡು ಪೋಸ್ಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button