Uncategorized
Trending

ಟೇಕ್ವಾಂಡೋ‌ ಸ್ಪರ್ಧೆಯಲ್ಲಿ ರೈನ್ ಬೋ ಇನ್ನೊವೇಟ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳಿಗೆ ಗೆಲುವು

ಚಿಕ್ಕ ವಯಸ್ಸಿನ ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಶಿಕ್ಷಣ ಕೊಡಿಸುವ ಜೊತೆ ಜೊತೆಗೆ ಕ್ರೀಡೆ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪೋಷಕರು ಹೆಚ್ಚು ಆಶಕ್ತಿ ವಹಿಸಿ, ವಿಶೇಷವಾಗಿ ಟೇಕ್ವಾಂಡೋ‌ ಕಲೆಯನ್ನು ಎಲ್ಲರೂ ಕರಗತ ಮಾಡಿಕೊಂಡರೆ ತಮ್ಮನ್ನು ತಾವೇ ರಕ್ಷಣೆ ಮಾಡಿಕೊಳ್ಳಲು ಸಹಾಯವಾಗಲಿದೆ ಎಂದು ರೈನ್ ಬೋ ಇನ್ನೊವೇಟ್ ಅಕಾಡೆಮಿ ಶಾಲೆ ಮತ್ತು ರೈನ್ ಬೋ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕರಾದ ವರಲಕ್ಷ್ಮಿ.ಬಿ.ಎಸ್. ರವರು ತಿಳಿಸಿದರು.

ಸಿಬಿಎಸ್ಇ ದಕ್ಷಿಣ ವಲಯದ ಕ್ಲಸ್ಟರ್ ಮಟ್ಟದ ಟೇಕ್ವಾಂಡೋ‌ ಚಾಂಪಿಯನ್ ಶಿಪ್ ಕ್ರೀಡೆಗಳು ಮಹಾರಾಷ್ಟ್ರದ ನ್ಯೂ ಟೈಮ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ಅಲ್ಲಿ ನಡೆದವು. ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ *ರೈನ್ ಬೋ ಇನ್ನೊವೇಟ್ ಅಕಾಡೆಮಿ ಶಾಲೆ ವಿದ್ಯಾರ್ಥಿಗಳಾದ ಗಣೇಶ್.ಎಂ, ಅಭಿರಾಮ್.ಆರ್, ವಿನಯ್.ಎಸ್,ನಿರಂಜನ್.ಎಲ್ ರವರು ಟೇಕ್ವಾಂಡೋ‌ ಕ್ರೀಡೆಯಲ್ಲಿ
ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಥಮ ಸುತ್ತಿನಲ್ಲಿಯೇ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಗಣೇಶ್.ಆರ್ ಹಾಗೂ ಅಭಿರಾಮ್.ಆರ್ ರವರು ಗೆದ್ದು ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರೈನ್ ಬೋ ಇನ್ನೊವೇಟ್ ಅಕಾಡೆಮಿ ಶಾಲೆ ಮತ್ತು ರೈನ್ ಬೋ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕರಾದ ವರಲಕ್ಷ್ಮಿ.ಬಿ.ಎಸ್, ಪ್ರಾಂಶುಪಾಲರಾದ ಮಂಜುನಾಥ.ಆರ್.ಎ, ಕ್ರೀಡಾ ತರಬೇತಿದಾರರಾದ ಕಾರ್ತಿಕ್.ಎಂ ಸೇರಿದಂತೆ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button