ಇತ್ತೀಚಿನ ಸುದ್ದಿಸಿನಿಮಾ

ಟಿವಿ ರಾಮಾಯಣದ ‘ರಾವಣ’ನಿಗೆ ಹೃದಯಾಘಾತ; ಹಿರಿಯ ಕಲಾವಿದ ಅರವಿಂದ ತ್ರಿವೇದಿ ನಿಧನ..!

ಮಾಜಿ ಸಂಸದ, ಖ್ಯಾತ ನಟ, ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ ರಾಮಾಯಣದಲ್ಲಿ ರಾವಣನ (Ravan of epic serial Ramayan) ಪಾತ್ರ ನಿರ್ವಹಿಸಿದ್ದ ಅರವಿಂದ ತ್ರಿವೇದಿ(Arvind Trivedi)ಇಹಲೋಕ ತ್ಯಜಿಸಿದ್ದಾರೆ. 83 ವರ್ಷದ ಅರವಿಂದ ತ್ರಿವೇದಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ರಾಮಾಯಣ ಧಾರವಾಹಿಯಲ್ಲಿ ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದ ಸಹ ನಟ ಸುನೀಲ್ ಲಾಹ್ರಿ(Sunil Lahri) ಅವರು ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ಇದು ನಮಗೆ ಬಹಳ ದುಃಖದ ಸಂಗತಿ, ನಮ್ಮ ಪ್ರೀತಿಯ ಹಿರಿಯ ನಟ ಅರವಿಂದ ತ್ರಿವೇದಿ ಅವರು ಇನ್ನು ಮುಂದೆ ನಮ್ಮೊಂದಿಗಿಲ್ಲ, ನನ್ನ ಮಾರ್ಗದರ್ಶಕ ಹಿತೈಷಿಯನ್ನು ನಾನು ಕಳೆದುಕೊಂಡಿದ್ದೇನೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸುನಿಲ್ ಲಾಹ್ರಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅರವಿಂದ ತ್ರಿವೇದಿ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.

ಕಳೆದ ಮೂರು ವರ್ಷಗಳಿಂದ ಅರವಿಂದ ತ್ರಿವೇದಿ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಕಳೆದ ತಿಂಗಳಷ್ಟೇ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು. ಮನೆಗೆ ಬಂದ ಮೇಲೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅರವಿಂದ ತ್ರಿವೇದಿ ಅವರ ಸೋದರಳಿಯ ಕೌಸ್ತುಬ್ ತ್ರಿವೇದಿ ತಿಳಿಸಿದ್ದಾರೆ. ಗುಜರಾತಿ ಸಿನಿಮಾದ ಭೀಷ್ಮ ಎಂದೇ ಅರವಿಂದ ತ್ರಿವೇದಿ ಪ್ರಖ್ಯಾತರಾಗಿದ್ದರು. 1991ರಲ್ಲಿ ಸಬರ್ ಕಂಟಾ ಕ್ಷೇತ್ರದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button