ಕ್ರೈಂ

ಖಾಸಗಿ ಚಿತ್ರ ತೆಗೆದು Blackmail: ಹಣಕ್ಕೆ ಬೇಡಿಕೆಯಿಟ್ಟವನ ಹೆಣ ಉರುಳಿಸಿದ ವಿದ್ಯಾರ್ಥಿನಿಯರು.!

ಚೆನ್ನೈ: ಕಾಲೇಜು ವಿದ್ಯಾರ್ಥಿಯ ಶವವನ್ನು ಹೂತಿಟ್ಟ ಆರೋಪದ ಮೇಲೆ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ 10ನೇ ತರಗತಿ ಇಬ್ಬರು ವಿದ್ಯಾರ್ಥಿನಿಯರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

21 ವರ್ಷದ ಮೃತ ವಿದ್ಯಾರ್ಥಿಯನ್ನು ಪ್ರೇಮ್ ಕುಮಾರ್ ಎಂದು ಗುರುತಿಸಲಾಗಿದೆ. ಈಚಿಂಗಾಡು ಗ್ರಾಮದಲ್ಲಿ ರಕ್ತಸಿಕ್ತ ಹಲ್ಲು, ಕೂದಲು ದೊರೆತಿತ್ತು. ಈ ಬಗ್ಗೆ ಗ್ರಾಮಸ್ಥರು ತಿರುವಳ್ಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. 

ತನಿಖೆಯ ವೇಳೆ  ಪೊಲೀಸರಿಗೆ ಹೂತಿದ್ದ ಶವ ಸಿಕ್ಕಿತ್ತು. ಬಳಿಕ ಮೃತನ ಮೊಬೈಲ್ ಫೋನ್ ಸಿಕ್ಕಿತ್ತು. ಇದರ ಮೂಲಕ ತನಿಖೆ ಆರಂಭಿಸಿದಾಗ ಚೆಂಗಾಲಪಟ್ಟು ಜಿಲ್ಲೆಯಲ್ಲಿನ 10ನೇ ತರಗತಿಯ ವಿದ್ಯಾರ್ಥಿನಿಯರಿಬ್ಬರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿತ್ತು. 

ಬಳಿಕ ಬಾಲಕಿಯರನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರೇಮ್ ಕುಮಾರ್ ಒಬ್ಬರಿಗೊಬ್ಬರಿಗೆ ತಿಳಿಯದಂತೆ ಇಬ್ಬರೊಂದಿಗೂ ಸಂಬಂಧ ಹೊಂದಿದ್ದ. ಬಾಲಕಿಯರ ಜೊತೆ ಖಾಸಗಿ ಫೋಟೊಗಳನ್ನು ತೆಗೆದುಕೊಂಡು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸುತ್ತಿದ್ದ. ತಮ್ಮನ್ನು ಬ್ಲಾಕ್‌ ಮೇಲ್ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ. ಇಬ್ಬರಿಂದಲೂ 50 ಸಾವಿರ ರೂಪಾಯಿಯ ಬೇಡಿಕೆಯಿಟ್ಟಿದ್ದ ಎಂದು ತಿಳಿದುಬಂದಿದೆ.

ಆತ ಬೇಡಿಕೆಯಿಟ್ಟದ್ದ ಹಣವನ್ನು ಒದಗಿಸಲು ಆಗದ ಕಾರಣ ವಿದ್ಯಾರ್ಥಿನಿಯರಿಬ್ಬರೂ ಸೇರಿ ತಮಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಿತನಾಗಿದ್ದ ಅಶೋಕ್ ಎಂಬಾತನ ಬಳಿ ತೊಂದರೆಯನ್ನು ವಿವರಿಸಿದ್ದಾರೆ. ಅಶೋಕ್ ನೀಡಿದ ಪ್ಲಾನ್ ನಂತೆ ಇಬ್ಬರೂ ಬಾಲಕಿಯರು ಪ್ರೇಮ್‌ಕುಮಾರ್‌ಗೆ ಕರೆ ಮಾಡಿ ಶೋಲವರಮ್ ಟೋಲ್ ಪ್ಲಾಜಾ ಬಳಿ ಬರಲು ತಿಳಿಸಿದ್ದಾರೆ. ಅಲ್ಲಿಂದ ಆತನನ್ನು ಕಿಡ್ನಾಪ್ ಮಾಡಿದ್ದಾರೆ.

ಪ್ರೇಮ್‌ಕುಮಾರ್ ಬಳಿಯಿರುವ ಮೊಬೈಲ್ ಕಸಿದುಕೊಂಡು, ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಶೋಕ್ ಮತ್ತು ಅವನ ಸ್ನೇಹಿತರು ಪ್ರೇಮ್‌ಕುಮಾರ್‌ನನ್ನು ಈಚಂಗಾಡು ಗ್ರಾಮಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾರೆ. ಯಾರಿಗೂ ತಿಳಿಯದಂತೆ ಅಲ್ಲಿಯೇ ಹೆಣವನ್ನು ಹುಉತು ಹಾಕಿದ್ದಾರೆ ಎಂಬುದು ವಿಚಾರಣೆಯ ವೇಳೆ ಬಹಿರಂಗವಾಗಿದೆ. ಪೊಲೀಸರು ತಲೆಮರೆಸಿಕೊಂಡಿರುವ ಅಶೋಕ್ ಮತ್ತು ಅವನ ಸ್ನೇಹಿತರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button