ಇತ್ತೀಚಿನ ಸುದ್ದಿದೇಶ
ಜರಿ ಹುಳ ಮನೆಯೊಳಗಿದ್ದರೆ ಒಳಿತಂತೆ! ಇದನ್ನು ಕೊಂದರೆ ಏನಾಗುತ್ತೆ ಗೊತ್ತಾ?
Centipede: ಜರಿ ಹುಳ ಕಡಿದ ಜಾಗ ಕೆಂಪು ಬಣ್ಣಕ್ಕೆ ತಿರುಗುತ್ತವೆ. ನೋವು ಕೆಲವು ಗಂಟೆಗಳು ಅಥವಾ ದಿನಗಳವರೆಗೆ ಇರುತ್ತದೆ. ಕೆಲವರಿಗೆ ಜರಿ ಕುಡಿದರೆ ಜ್ವರ, ವಾಕರಿಕೆ, ತುರಿಕೆ ಕಾಣಿಸುತ್ತದೆ
ಜರಿ ಹುಳ ನೋಡಿದಿರಾ..? ಮಳೆಗಾಲ ಮನೆಯ ಸುತ್ತಮುತ್ತಾ ಓಡಾಡುವ ಮತ್ತು ಮನೆಯ ಒಳಗಡೆ ಬರುವ ಜರಿಹುಳ ಕಂಡರೆ ಸಾಕು ಕಾಲಲ್ಲಿ ಇದ್ದ ಚಪ್ಪಳಿ ತೆಗೆದು ಕೊಂಡು ಬಡಿದು ಸಾಯಿಸುತ್ತೇವೆ. ಆದರೆ ಜರಿ ಹುಳಗಳು ಕಚ್ಚುವುದೇನೊ ನಿಜ ಆದರೆ ಇದು ವಿಷಕಾರಿಯಲ್ಲ. ಭೂಮಿಗೆ ಮಳೆ ಬಿದ್ದಂತೆ ಜರಿ ಹುಳಗಳು ಮರದ ಪೊಟರೆ, ಮನೆಯ ಸುತ್ತಾಮುತ್ತಲು ಕಾಣಿಸಿಕೊಳ್ಳುತ್ತದೆ. ಆದರೆ ಜರಿ ಹುಳವನ್ನು ಕಂಡು ಭಯಪಡುವ ಜನರು ಅದರ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟಿದೆ.
ಸಾಮಾನ್ಯವಾಗಿ ಕಲ್ಲು ಬಂಡೆಯ ಅಡಿಯಲ್ಲಿ ಜರಿ ಹುಳಗಳು ವಾಸಿಸುತ್ತದೆ. ಆದರೆ ಮಳೆಗಾಲ ನೀರು ಬಿದ್ದಂತೆ ಅಲ್ಲಿಂದ ಕಾಲ್ಕಿತ್ತು ಓಡುತ್ತದೆ. ಈ ವೇಳೆ ಮನೆಯ ಒಳಗಡೆ, ಅಲ್ಲಿ-ಇಲ್ಲಿ ಕಾಣಿಸುತ್ತದೆ.