ಕ್ರೈಂ
ಚಿತ್ರದುರ್ಗ: ಟೋಲ್ ಗೇಟ್ ಸಿಬ್ಬಂದಿಯಿಂದ ವಾಹನ ಸವಾರರ ಮೇಲೆ ಹಲ್ಲೆ
ಚಿತ್ರದುರ್ಗ: ಹಿರೇಹಳ್ಳಿ ಟೋಲ್ ಗೇಟ್ ಸಿಬ್ಬಂದಿ ಗೂಂಡಾಗಿರಿ ಮಾಡಿ ಇಬ್ಬರು ವಾಹನ ಸವಾರರ ಮೇಲೆ ತೀವ್ರ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಟೋಲ್ ಗೇಟ್ ನಲ್ಲಿ ವಾಹನ ಬಿಡುಗಡೆ ಮಾಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ವಾಹನ ಸವಾರರು, ಸಿಬ್ಬಂದಿ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ವೇಳೆ ಟೋಲ್ ಗೇಟ್ ಸಿಬ್ಬಂದಿ ವಾಹನ ಸವಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಚಳ್ಳಕೆರೆಯ ಶಿವರಾಜು, ರಾಜೇಶ್ ಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.