ಗೋವಾ ಬೀಚ್: ವಿದೇಶಿ ಪ್ರವಾಸಿಗರ ಮಾದರಿ ಸ್ವಚ್ಛತಾ ಕಾರ್ಯ
ಪಣಜಿ: ಇಲ್ಲಿನ ಪ್ರಮುಖ ಪ್ರವಾಸಿ ತಾಣವಾದ ಮೋರಜಿ ಬೀಚ್‍ನಲ್ಲಿ ವಿದೇಶಿ ಪ್ರವಾಸಿಗರು ನಡೆಸಿದ ಸ್ವಚ್ಛತಾ ಕಾರ್ಯ ಎಲ್ಲರಿಗೂ ಮಾದರಿ ಎನಿಸಿದೆ.
ಗೋವಾದಲ್ಲಿ ಪ್ರತಿ ಬೀಚ್ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಸರಕಾರ ದೃಷ್ಠಿ ಸಂಸ್ಥೆಗೆ ಗುತ್ತಿದೆ ನೀಡಿದೆ. ಆದರೆ ಸಮಯಕ್ಕೆ ಸರಿಯಾಗಿ ವೇತನ ನೀಡದ ಕಾರಣ ಬೀಚ್ ಸ್ವಚ್ಛತಾ ಕಾರ್ಯವನ್ನು ಕಾರ್ಮಿಕರು ಸರಿಯಾಗಿ ಮಾಡುತ್ತಿಲ್ಲ.ಮೋರಜಿ ಬೀಚ್‍ನಲ್ಲಿ ಬೃಹತ್ ಪ್ರಮಾಣದಲ್ಲಿ ಕಸ ಜಮಾವಣೆಯಾಗಿದೆ.
ಕಸವನ್ನು ಕಂಡ ವಿದೇಶಿ ಪ್ರವಾಸಿಗರು ಕಡಲ ತೀರವನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕಳೆದ ಎರಡು ದಿನಗಳಿಂದ ಈ ಬೀಚ್ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದ್ದಾರೆ.
ಗೋವಾಕ್ಕೆ ಮೋಜು ಮಸ್ತಿಗಾಗಿ ಆಗಮಿಸಿ ಇಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ತೆರಳುವ ಪ್ರವಾಸಿಗರ ನಡುವೆ ವಿದೇಶಿ ಪ್ರವಾಸಿಗರು ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕೊವಿಡ್ ಬಳಿಕ ಗೋವಾದಲ್ಲಿ ಈಗ ದಿನದಿಂದ ದಿನಕ್ಕೆ ಪ್ರವಾಸಿಗಳ ಸಂಖ್ಯೆ ಹೆಚ್ಚುತ್ತಿದೆ.